ETV Bharat / state

ಕೆಜಿಎಫ್ ಬಾಬು ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿದ ಯುವರಾಜ್ - ಈಟಿವಿ ಭಾರತ ಕನ್ನಡ

ತಮ್ಮ ವಿರುದ್ಧ ಕೆಜಿಎಫ್​ ಬಾಬು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಆರ್‌.ವಿ.ದೇವರಾಜ್ ಪುತ್ರ ಆರ್​.ವಿ ಯುವರಾಜ್ ಕೆಜಿಎಫ್​ ಬಾಬು ವಿರುದ್ಧ ದೂರು ನೀಡಿದ್ದಾರೆ.

ಕೆಜಿಎಫ್ ಬಾಬು ವಿರುದ್ಧ ದೂರು
ಕೆಜಿಎಫ್ ಬಾಬು ವಿರುದ್ಧ ದೂರು
author img

By

Published : Feb 4, 2023, 6:26 PM IST

ಬೆಂಗಳೂರು: ಸಹೋದರಿ ಶಾಹೀನ್ ತಾಜ್ ವಾಸವಿದ್ದ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಮ್ಮ ವಿರುದ್ಧ ಆರೋಪಿಸುತ್ತಿರುವ ಕೆಜಿಎಫ್ ಬಾಬು ವಿರುದ್ಧ ಮಾಜಿ ಕಾರ್ಪೋರೇಟರ್ ಆರ್.ವಿ ಯುವರಾಜ್ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ‌. ತಮ್ಮ ವಿರುದ್ಧ ಕೆಜಿಎಫ್ ಬಾಬು ಸಹೋದರಿ ಶಾಹೀನ್ ತಾಜ್ ಸಂಪಂಗಿರಾಮನಗರ ಠಾಣೆಯಲ್ಲಿ ದಾಖಲಿಸಿರುವ ದೂರಿಗೆ ಪ್ರತಿಯಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಆರ್.ವಿ.ಯುವರಾಜ್ ದೂರು ನೀಡಿದ್ದಾರೆ.

ತೇಜೋವಧೆ ಮಾಡಲು ಈ ರೀತಿ ಸುಳ್ಳು ಆರೋಪ ಮಾಡಲಾಗುತ್ತಿದೆ: ಕೆಜಿಎಫ್ ಬಾಬು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದುವರೆಗೆ ನಮ್ಮ ತಂದೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುತ್ತಿದ್ದ ಕೆಜಿಎಫ್ ಬಾಬು, ನಮ್ಮ ತಂದೆ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದ ಬಳಿಕ ನನ್ನ ಮೇಲೆ ಆರೋಪಗಳನ್ನ ಮಾಡಿದ್ದಾರೆ. ನನ್ನ ತೇಜೋವಧೆ ಮಾಡಲು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದು, ಬೇಕಿದ್ದರೆ ಟವರ್ ಡಂಪ್ ಲೋಕೆಷನ್ ಪತ್ತೆಹಚ್ಚಿ ತನಿಖೆ ನಡೆಸಲಿ ಎಂದು ತಿಳಿಸಿದ್ದಾರೆ.

ಕ್ಷೇತ್ರದ ಜನರಿಗೆ ನೂರಾರು ಸೇವೆಯ ಭರವಸೆ ಕೊಡುತ್ತಿದ್ದಾರೆ. ಮಾಡಲಿ ಆದರೆ, ಕೆಜಿಎಫ್ ಬಾಬುರನ್ನ ಅಕ್ಕ-ಪಕ್ಕದಲ್ಲಿರುವವರೇ ಬಲಿ ಕಾ ಬಕ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಈ ರೀತಿಯ ಆರೋಪಗಳು 1,740 ಕೋಟಿ ಒಡೆಯನಾಗಿರುವ ಕೆಜಿಎಫ್ ಬಾಬು ಗೌರವಕ್ಕೆ ತಕ್ಕುದಲ್ಲ ಎಂದು ಆರ್.ವಿ.ಯುವರಾಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ಬಾಬು ಸಹೋದರಿ ಮನೆಯಲ್ಲಿ ಅಗ್ನಿ ಅವಘಡ: ಪ್ರಕರಣ ದಾಖಲು

ಘಟನೆ ಹಿನ್ನೆಲೆ: ನಿನ್ನೆ ತಡರಾತ್ರಿ ಕೆಜಿಎಫ್ ಬಾಬು ಅವರ ಸಹೋದರಿ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಸಂಪಂಗಿರಾಮನಗರ ಕೆ.ಎಸ್.ಗಾರ್ಡನ್​ನಲ್ಲಿರುವ ಕೆಜಿಎಫ್​ ಬಾಬು ಅವರ ಸಹೋದರಿ ಶಾಹೀನ್ ತಾಜ್ ವಾಸವಿದ್ದ ಮನೆಯ ಮುಂದೆ ಚಪ್ಪಲಿ ಸ್ಟ್ಯಾಂಡ್ ಬಳಿ ಬೆಂಕಿ ಕಾಣಿಸಿಕೊಂಡಿತ್ತು ಬಳಿಕ ಮನೆಯ ಒಳಭಾಗಕ್ಕೂ ಬೆಂಕಿ ಆವರಿಸಿತ್ತು.

ಆರ್‌.ವಿ.ಯುವರಾಜ್ ವಿರುದ್ಧ ದೂರು: ಘಟನೆ ಬಳಿಕ ಕಾಂಗ್ರೆಸ್​ನ ಯುವ ನಾಯಕ ಆರ್.ವಿ ಯುವರಾಜ್ ಕಡೆಯವರ ವಿರುದ್ಧ ಆರೋಪ ಕೇಳಿ ಬಂದಿದ್ದವು. ತಡರಾತ್ರಿ ಮಾಜಿ ಶಾಸಕ ಆರ್‌.ವಿ.ದೇವರಾಜ್ ಪುತ್ರ ಯುವರಾಜ್ ಕಡೆಯ ಎಂಟರಿಂದ ಹತ್ತು ಜನ ಬಂದು ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾರೆ ಎಂದು ಕೆಜಿಎಫ್ ಬಾಬು ಸಹೋದರಿ ಶಾಹೀನ್ ತಾಜ್ ಸಂಪಂಗಿ ರಾಮನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಜಿಎಫ್​ ಬಾಬು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 500 ಮನೆಗಳನ್ನ ಕಟ್ಟಿಸಲು ಮುಂದಾಗಿದ್ದೆ. ಸಿಂಹದ ಬಾಯಿಗೆ ಬಂದು ನಿಮ್ಮಣ್ಣ ನಿಂತಿದ್ದಾರೆ ಎಂದು ಆರ್.ವಿ ಯುವರಾಜ್ ನನ್ನ ತಂಗಿ ಶಾಹೀನ್ ತಾಜ್​ಗೆ ಧಮ್ಕಿ ಹಾಕಿದ್ದರು. ನಿನ್ನೆ ಒಂದಷ್ಟು ಜನ ಬಂದು ನನ್ನ ತಂಗಿ ಮನೆಗೆ ಬೆಂಕಿ ಹಾಕಿದ್ದಾರೆ. ಅಲ್ಲದೇ ನನ್ನ ಕೊಲೆ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೆ ನ್ಯಾಯ ಬೇಕಾಗಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನ್ನನ್ನು ಗೌರವಯುತವಾಗಿ ಪಕ್ಷದಿಂದ ತೆಗೆಯಿರಿ, ಇಲ್ಲವಾದರೆ ಕಾಂಗ್ರೆಸ್​ಗೆ ಹಾನಿಯಾಗುತ್ತೆ: ಕೆಜಿಎಫ್ ಬಾಬು ವಾರ್ನಿಂಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.