ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿಸಿ ನಗರದ ಕಂಟೋನ್ಮೆಂಟ್, ರಸೆಲ್ ಮಾರುಕಟ್ಟೆಯ ವ್ಯಾಪಾರ, ವ್ಯವಹಾರಗಳು ನಾಳೆ ಬಂದ್ ಆಗಲಿವೆ.
ಬೆಳಗ್ಗೆ 6 ಗಂಟೆಯಿಂದಲೇ ರಸೆಲ್ ಮಾರುಕಟ್ಟೆ, ಕಂಟೋನ್ಮೆಂಟ್ನ 6 ಸಾವಿರದಷ್ಟು ಮಳಿಗೆಗಳು ಬಂದ್ ಇರಲಿವೆ. ಶಿವಾಜಿನಗರದ ಈ ರಸೆಲ್ ಮಾರುಕಟ್ಟೆ ತರಕಾರಿ, ಮೀನು, ಮಾಂಸದ ಅಂಗಡಿಗಳು, ಡ್ರೈ ಫ್ರೂಟ್ಸ್, ಅಗತ್ಯ ವಸ್ತುಗಳು ಹಾಗೂ ಬಟ್ಟೆ ಅಂಗಡಿಗಳು ಇದ್ದು ಪ್ರಮುಖ ವ್ಯಾಪಾರದ ಜಾಗವಾಗಿದೆ.
ಶಿವಾಜಿ ನಗರದಲ್ಲಿ ಸರ್ವ ಧರ್ಮದವರೂ ಅಣ್ಣ - ತಮ್ಮಂದಿರಂತೆ ಇದ್ದೇವೆ. ಹೀಗೆ ಇರಲು ಬಿಡಿ. ಸಿಎಎ, ಎನ್ಆರ್ಸಿ ಅಗತ್ಯವಿಲ್ಲ. ಇತಿಹಾಸದಲ್ಲಿ ಯಾವುದೇ ತೊಂದರೆ ಆಗಿಲ್ಲ. ಈಗ ಈ ಹೊಸ ಕಾನೂನುಗಳು ಬೇಡ. ಎಲ್ಲಾ ಮಸೀದಿ ಹಾಗೂ ವ್ಯಾಪಾರಿ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹನ್ನೊಂದು ಗಂಟೆಯಿಂದ ಸಾರ್ವಜನಿಕ ಸಭೆ ನಡೆಸಲಿದ್ದೇವೆ ಎಂದು ವ್ಯಾಪಾರಿ ಇದ್ರೀಶ್ ಚೌದರಿ ಬಂದ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.