ETV Bharat / state

ತಂತ್ರಜ್ಞಾನದಿಂದ ಗ್ರಾಮೀಣ ಮಕ್ಕಳು ವಂಚಿತರಾಗಬಾರದು.. ಸಚಿವ ಸುರೇಶ್ ಕುಮಾರ್‌

ಎಲ್​ಕೆಜಿ, ಯುಕೆ‌ಜಿ ತರಗತಿಗಳಿಗೆ ಆನ್​​ಲೈನ್​ ಶಿಕ್ಷಣ ನೀಡುವಂತಿಲ್ಲ. ಬದಲಿಗೆ ಪೋಷಕರಿಗೆ ಗೈಡ್‌ಲೈನ್ ಕೊಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇತ್ತ ತಂತ್ರಜ್ಞಾನದಿಂದ ಗ್ರಾಮೀಣ ಮಕ್ಕಳು ಅದರಲ್ಲೂ ಸರ್ಕಾರಿ ಮಕ್ಕಳು ವಂಚಿತರಾಗಬಾರದು. ಹೀಗಾಗಿ ಸಮಿತಿಯ ಸದಸ್ಯರು ಇದರ ಮೇಲೂ ಅಧ್ಯಯನ ನಡೆಸುತ್ತಿದ್ದಾರೆ..

author img

By

Published : Jul 1, 2020, 8:58 PM IST

Rural children should not be deprived of technology: Minister Suresh Kumar
ತಂತ್ರಜ್ಞಾನದಿಂದ ಗ್ರಾಮೀಣ ಮಕ್ಕಳು ವಂಚಿತರಾಗಬಾರದು: ಸಚಿವ ಸುರೇಶ್ ಕುಮಾರ್‌

ಬೆಂಗಳೂರು : ಕೋವಿಡ್ ಪರಿಣಾಮದಿಂದ ಶಾಲಾ-ಕಾಲೇಜು ಆರಂಭಕ್ಕೆ ಬ್ರೇಕ್ ಹಾಕಲಾಗಿತ್ತು‌. ಇತ್ತ ದೈಹಿಕ ಶಿಕ್ಷಣ ಸಾಧ್ಯಾವಾಗದ ಕಾರಣ ಪೂರಕವಾಗಿ ನಡೆಸುತ್ತಿದ್ದ ಆನ್​​​ಲೈನ್ ಶಿಕ್ಷಣಕ್ಕೆ ಪರ-ವಿರೋಧಗಳು ಶುರುವಾಯಿತು.‌

ಅದರಲ್ಲೂ ಎಲ್​​ಕೆಜಿ, ಯುಕೆಜಿ ಮಕ್ಕಳಿಗೆ ಆನ್​​​​ಲೈನ್ ಶಿಕ್ಷಣ ಅಗತ್ಯವಿದ್ಯಾ? ಖಾಸಗಿಯವರು ಲೂಟಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಅಂತೆಲ್ಲ ವಿರೋಧ ವ್ಯಕ್ತವಾಯಿತು. ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಕಮಿಟಿ ರಿಪೋರ್ಟ್ ಬರುವವರೆಗೆ ಎಲ್​​ಕೆಜಿ ಮತ್ತು ಯುಕೆಜಿ ಮತ್ತು 5ನೇ ತರಗತಿವರೆಗಿನ ಮಕ್ಕಳಿಗೆ ಆನ್​ಲೈನ್ ಶಿಕ್ಷಣ ನಡೆಸುವಂತಿಲ್ಲ ಅಂತಾ ಆದೇಶಿಸಿತ್ತು.

‌ಬಳಿಕ ಕೇಂದ್ರ ಸರ್ಕಾರ ಮತ್ತೊಮ್ಮೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತು. ಮತ್ತೆ ಜೂನ್ 28ಕ್ಕೆ ಆನ್​ಲೈನ್​​ ಶಿಕ್ಷಣದ ಮಾದರಿ ಸಿದ್ಧಪಡಿಸಲು ರಾಜ್ಯ ಸರ್ಕಾರದ ಸಮಿತಿ ವರದಿ ಬರುವವರೆಗೆ ಆನ್​ಲೈನ್ ಕ್ಲಾಸ್​ಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಇದೀಗ ರಾಜ್ಯದಲ್ಲಿ ಆನ್​ಲೈನ್ ಶಿಕ್ಷಣ ಮತ್ತೆ ಆರಂಭವಾಗಿದೆ.‌ ಎಲ್​​​ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಹೊರತು ಪಡಿಸಿದ್ದು, ಇದಕ್ಕಾಗಿ ಶುಲ್ಕವನ್ನು ವಿಧಿಸುವಂತಿಲ್ಲ ಅಂತಾ ತಿಳಿಸಲಾಗಿದೆ.

ಎಲ್​ಕೆಜಿ, ಯುಕೆ‌ಜಿ ತರಗತಿಗಳಿಗೆ ಆನ್​​ಲೈನ್​ ಶಿಕ್ಷಣ ನೀಡುವಂತಿಲ್ಲ. ಬದಲಿಗೆ ಪೋಷಕರಿಗೆ ಗೈಡ್‌ಲೈನ್ ಕೊಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇತ್ತ ತಂತ್ರಜ್ಞಾನದಿಂದ ಗ್ರಾಮೀಣ ಮಕ್ಕಳು ಅದರಲ್ಲೂ ಸರ್ಕಾರಿ ಮಕ್ಕಳು ವಂಚಿತರಾಗಬಾರದು. ಹೀಗಾಗಿ ಸಮಿತಿಯ ಸದಸ್ಯರು ಇದರ ಮೇಲೂ ಅಧ್ಯಯನ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೂ ಶಿಕ್ಷಣದಲ್ಲಿ ತಾಂತ್ರಿಕತೆ ಬಳಕೆಯಾಗುವ ರೀತಿ ಸಮಿತಿ ವರದಿ ನೀಡಲಿದೆ ಅಂತಾ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಹೀಗಾಗಿ, ಗ್ರಾಮೀಣ ಭಾಗದಲ್ಲಿ ಅಭ್ಯಾಸ ಮಾಡುತ್ತಿರುವರಿಗೆ ಪೂರಕ ಶಿಕ್ಷಣ ಹೇಗೆ ನೀಡಬೇಕೆಂಬುದು ವರದಿ ಬಂದ ನಂತರವಷ್ಟೇ ತಿಳಿಯಲಿದೆ. ಇತ್ತ ರಾಜ್ಯದಲ್ಲಿರುವ ಖಾಸಗಿ ಸಂಸ್ಥೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ತಲುಪುವ ದೃಷ್ಟಿಯಿಂದ ರೆಕಾರ್ಡಿಂಗ್ ವಿಡಿಯೋಗಳನ್ನು ಕಳುಹಿಸುತ್ತಿದ್ದಾರೆ. ನೆಟ್​​​ವರ್ಕ್ ಸಮಸ್ಯೆ, ಮೊಬೈಲ್ ಸಮಸ್ಯೆ ಇರುವವರು ಆನ್​ಲೈನ್​ನಲ್ಲಿ ಭಾಗಿಯಾದವರಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.