ETV Bharat / state

ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಚೆಕ್​ ವಿತರಣೆ - ಚೆಕ್​ ವಿತರಣೆ

ಈಗಾಗಲೇ 13 ಕುಟುಂಬಗಳಿಗೆ ಚೆಕ್​ ವಿತರಣೆ ಮಾಡಲಾಗಿದ್ದು, ಇನ್ನೂ ಮೂರು ಕುಟುಂಬಗಳಿಗೆ ಚೆಕ್​ ವಿತರಣೆ ಮಾಡಬೇಕಿದೆ.

5 lakh each to families of those who died in Attibele fireworks disaster
ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ 5 ಲಕ್ಷ ವಿತರಣೆ
author img

By ETV Bharat Karnataka Team

Published : Oct 28, 2023, 9:37 PM IST

ಆನೇಕಲ್: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮಡಿದದವರ ಕುಟುಂಬಗಳಿಗೆ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ಹಾಗು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವನಿಯಂಬಾಡಿ ತಾಲ್ಲೂಕು ತಹಶೀಲ್ದಾರ್ ಅವರ ಸಮಕ್ಷಮದಲ್ಲಿ ತಂಡದೊಂಡಿಗೆ ತಮಿಳುನಾಡಿಗೆ ತೆರಳಿ ಕುಟುಂಬದ ಮುಖ್ಯಸ್ಥರಿಗೆ ತಲಾ 5 ರೂಪಾಯಿ ಲಕ್ಷ ಚೆಕ್ ವಿತರಿಸಿದ್ದಾರೆ. ಅದರಂತೆ ಈಗಾಗಲೇ 13 ಕುಟುಂಬಗಳಿಗೆ ಚೆಕ್ ವಿತರಿಸಿದ್ದು, ಇನ್ನೂ ಮೂರು ಚೆಕ್ ವಿತರಿಸಬೇಕಿದೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಅರೂರು ಗ್ರಾಮದ ಮೃತರಾದ ವೇದಪ್ಪನ್, ಆದಿಕೇಶನ್, ವಿಜಯ ರಾಘವನ್, ಆಕಾಶ್ ರಾಜ್, ಗಿರಿ, ಇಳಂಬರಕಿ ಮತ್ತು ಮುನಿವೇಲ್ (ಸಚಿನ್) ವೆಲ್ಲಕೊಟೈ ಗ್ರಾಮದ ನಿತೀಶ್, ಸಂತೋಷ್ ಮತ್ತು ದಿನೇಶ್, ನೀಪದುರೈ ಗ್ರಾಮದ ರಾಜೇಶ್, ಹೊಸೂರು ಗ್ರಾಮಾಂತರದ ಆಂತೋಣಿ ಪಾಲ್ ರಾಜ್ ಕುಟುಂಬಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ವಿತರಿಸಲಾಗಿದೆ ಎಂದು ದಂಡಾಧಿಕಾರಿಗಳು ತಿಳಿಸಿದ್ದಾರೆ.

ಉಳಿದ ಮೂವರು ಮೃತರ ಕುಟುಂಬಗಳಿಗೆ ಚೆಕ್ ವಿತರಿಸಬೇಕಿದೆ. ಅಲ್ಲದೆ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಇಂದು ಬೊಮ್ಮನಹಳ್ಳಿಯ ಗಾರೇಬಾವಿಪಾಳ್ಯದ ಮೃತ ವೆಂಕಟೇಶ್ ಕುಟುಂಬಕ್ಕೆ ಐದು ಲಕ್ಷ ರೂಪಾಯಿಯ ಚೆಕ್ ವಿತರಿಸಿದ್ದಾರೆ.

ಇದನ್ನೂ ಓದಿ : ಅತ್ತಿಬೆಲೆ ಪಟಾಕಿ ದುರಂತ.. ಗಾಯಾಳು ಚಿಕಿತ್ಸೆಗೆ ಹಣ ಕೇಳಿದ‌ ಆರೋಪ: ಸೇಂಟ್​ ಜಾನ್ಸ್ ಆಸ್ಪತ್ರೆ ವಿರುದ್ಧ ಎಫ್ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.