ಬೆಂಗಳೂರು: ಚುನಾವಣೆ ಕರ್ತವ್ಯದಲ್ಲಿ ಮಡಿದ ಅಧಿಕಾರಿಗಳ ಕುಟುಂಬಕ್ಕೆ ತಲಾ 15ಲಕ್ಷ ರೂ. ಪರಿಹಾರ ನೀಡಲು ಚುನಾವಣಾ ಆಯೋಗ ಆದೇಶ ನೀಡಿದೆ.
ವಿಶೇಷ ಪ್ರಕರಣದಡಿ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಈ ಬಾರಿಯ ರಾಜ್ಯದಲ್ಲಿ ಚುನಾವಣಾ ಕಾರ್ಯದಲ್ಲಿದ್ದ 8 ಜನ ಅಧಿಕಾರಿಗಳು ನಿಧನ ಹೊಂದಿದ್ದಾರೆ. ಈ ಪೈಕಿ ಏಳು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಒಬ್ಬರು ಅಪಘಾತದಿಂದ ಮೃತ ಪಟ್ಟಿದ್ದಾರೆ.
ಈ ಸಂಬಂಧ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡುವಂತೆ ನಿರ್ದೇಶನ ನೀಡಿತ್ತು. ಇದೀಗ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ.