ETV Bharat / state

ಆರ್‌.ಆರ್.ನಗರ, ಶಿರಾ ಫಲಿತಾಂಶ: ಬಿಎಸ್​ವೈ ನಾಯಕತ್ವದ ಮೇಲೆ ಪರಿಣಾಮ ಬೀರುತ್ತಾ? - ಬಿಹಾರದಲ್ಲಿ ಬಿಜೆಪಿ ತಂತ್ರಗಾರಿಕೆ

ಪದೇ ಪದೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಲೇ ಇದೆ. ಎರಡು ಕ್ಷೇತ್ರಗಳ ವಿಧಾನಸಭಾ ಉಪಚುನಾವಣಾ ಫಲಿತಾಂಶ ಹಾಗೂ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಸಾಧನೆ ಆಧಾರದಲ್ಲಿ ಕರ್ನಾಟಕ ರಾಜ್ಯದ ನಾಯಕತ್ವ ವಿಚಾರಕ್ಕೆ ಹೈಕಮಾಂಡ್ ಕೈ ಹಾಕಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ ಈ ಕುರಿತ ಕಂಪ್ಲೀಟ್ ಡಿಟೈಲ್ ಇಲ್ಲಿದೆ.

ಬಿಎಸ್​ವೈ
ಬಿಎಸ್​ವೈ
author img

By

Published : Nov 9, 2020, 10:32 PM IST

Updated : Nov 10, 2020, 6:19 AM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಮೇಲೆ ಉಪಚುನಾವಣಾ ಫಲಿತಾಂಶ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಿಧಾನಸಭಾ ಅಧಿವೇಶನದ ವೇಳೆ ಸದನದಲ್ಲೇ ಸಿಎಂ ಯಡಿಯೂರಪ್ಪ ಆರ್.ಆರ್.ನಗರ ಹಾಗು ಶಿರಾ ಕ್ಷೇತ್ರಗಳನ್ನು ಗೆಲ್ಲುವ ಸವಾಲು ಸ್ವೀಕರಿಸಿದ್ದು, ಪುತ್ರ ವಿಜಯೇಂದ್ರಗೆ ಶಿರಾದ ಜವಾಬ್ದಾರಿ ನೀಡಿ ಗಂಭೀರವಾಗಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದಾರೆ. ಆರ್.ಆರ್.ನಗರದಲ್ಲಿಯೂ ಅಬ್ಬರದ ಪ್ರಚಾರ ನಡೆಸಿದ್ದು, ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದ್ದಾರೆ.

ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದೇ ಆದಲ್ಲಿ, ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗಿಗೆ ಹೈಕಮಾಂಡ್ ಬ್ರೇಕ್ ಹಾಕಲಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜನರ ವಿಶ್ವಾಸ ಇದೆ ಎನ್ನುವ ಸಂದೇಶವನ್ನು ಪ್ರತಿಪಕ್ಷಗಳಿಗೆ ನೀಡುವ ಜೊತೆಯಲ್ಲೇ ಸ್ವಪಕ್ಷೀಯ ಕೆಲ ಮುಖಂಡರಿಗೂ ಸಿಎಂ ಯಡಿಯೂರಪ್ಪ ಸಂದೇಶ ರವಾನಿಸಲಿದ್ದಾರೆ.

ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಪರಾಜಿತಗೊಂಡರೆ ಆಗ ನಾಯಕತ್ವ ಬದಲಾವಣೆ ಕೂಗಿಗೆ ಮತ್ತಷ್ಟು ಪುಷ್ಟಿ ಬರಲಿದೆ. ಯಡಿಯೂರಪ್ಪ ನಾಯಕತ್ವದ ಬಗ್ಗೆ ಜನರಿಗೂ ಒಲವಿಲ್ಲ ಎನ್ನುವ ಸಂದೇಶವನ್ನು ವರಿಷ್ಠರ ಮುಂದೆ ಯಡಿಯೂರಪ್ಪ ವಿರುದ್ಧದ ಬಣ ಇಡಲಿದ್ದು, ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿಯಲಿದೆ. ಹೈಕಮಾಂಡ್ ಆ ಬಗ್ಗೆ ಪರಿಶೀಲನೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಸಿಎಂ ಯಡಿಯೂರಪ್ಪ ತಮ್ಮ ವಿರೋಧಿಗಳನ್ನು ಸಮಾಧಾನಪಡಿಸಿ ಕುರ್ಚಿ ಉಳಿಸಿಕೊಳ್ಳಲು ಸರ್ಕಸ್ ಮಾಡುವ ಸನ್ನಿವೇಶ ನಿರ್ಮಾಣವಾಗಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇನ್ನು ಒಂದು ಕ್ಷೇತ್ರದಲ್ಲಿ ಗೆದ್ದು ಮತ್ತೊಂದರಲ್ಲಿ ಸೋತರೆ ಅದು ಸಿಎಂ ನಾಯಕತ್ವದ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಆರ್.ಆರ್.ನಗರ ಗೆದ್ದು ಶಿರಾ ಸೋತಲ್ಲಿ, ಸರ್ಕಾರ ರಚನೆಗೆ ಕಾರಣರಾದ ಮುನಿರತ್ನರನ್ನು ಗೆಲ್ಲಿಸಿಕೊಂಡ ಮತ್ತು ಠೇವಣಿ ಬಾರದ ಶಿರಾದಲ್ಲಿ ಪಕ್ಷಕ್ಕೆ ನೆಲೆ ಕಲ್ಪಿಸಿದ ಬಗ್ಗೆ ಹೆಗ್ಗಳಿಕೆ ಬರಲಿದೆ. ಅದೇ ರೀತಿ ಶಿರಾದಲ್ಲಿ ಗೆದ್ದು ಆರ್.ಆರ್.ನಗರ ಸೋತಲ್ಲಿ,‌ ಪಕ್ಷಕ್ಕೆ ನೆಲೆಯೇ ಇಲ್ಲದ, ಠೇವಣಿ ಬಾರದ ಕ್ಷೇತ್ರವನ್ನು ಗೆದ್ದು ಇತಿಹಾಸ ನಿರ್ಮಿಸಿದ ಹೆಗ್ಗಳಿಕೆ ಸಿಎಂ ಯಡಿಯೂರಪ್ಪ ನಾಯಕತ್ವಕ್ಕೆ ಬಲ ನೀಡಲಿದೆ.

ಇದರ ಜೊತೆ ಜೊತೆಯಲ್ಲಿ ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕೂಡ ಪ್ರಕಟಗೊಳ್ಳುತ್ತಿದ್ದು, ಅಲ್ಲಿನ ರಾಜಕೀಯ ಸ್ಥಿತ್ಯಂತರ ರಾಜ್ಯದಲ್ಲಿಯೂ ಪರಿಣಾಮ ಬೀರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಬಿಹಾರದಲ್ಲಿ ಬಿಜೆಪಿ ಹಾಗು ಜೆಡಿಯು ಮೈತ್ರಿ ಮಾಡಿಕೊಂಡಿದ್ದು, ಈ ಮೈತ್ರಿಗೆ ಸಿಕ್ಕುವ ಜನಮನ್ನಣೆ ಆಧಾರದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿದೆ.

ಬಿಹಾರದಲ್ಲಿ ಬಿಜೆಪಿ ತಂತ್ರಗಾರಿಕೆ ಫಲಪ್ರದವಾಗಿ ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ಸ್ಥಳೀಯ ನಾಯಕತ್ವದ ಬದಲು ಪಕ್ಷದ ಕೇಂದ್ರೀಯ ನಾಯಕತ್ವ ಏನು ಬೇಕಾದರೂ ಮಾಡಬಹುದು ಎನ್ನುವ ಮನಸ್ಥಿತಿಗೆ ಬರಬಹುದು. 75 ವರ್ಷ ದಾಟಿದವರಿಗೆ ಅಧಿಕಾರ ನಡೆಸಲು ಅವಕಾಶವಿಲ್ಲ ಎನ್ನುವ ಪಕ್ಷದ ನಿಯಮ ಇದ್ದರೂ ಸದ್ಯ ಯಡಿಯೂರಪ್ಪ ವಿಚಾರದಲ್ಲಿ ವಿನಾಯಿತಿ ನೀಡಲಾಗಿದೆ. ಈಗ ಯಡಿಯೂರಪ್ಪ ಅವರಿಗೂ ಇದೇ ನಿಯಮ ಅನ್ವಯವಾಗುವ ಘೋಷಣೆ ಮಾಡಿಬಿಡಬಹುದು. ನಾಯಕತ್ವ ಬದಲಾವಣೆ ಕೂಗಿಗೆ ಮನ್ನಣೆ ನೀಡಿ ಅದರ ಪರಿಶೀಲನೆಯತ್ತ ಹೈಕಮಾಂಡ್ ಮುಂದಾಗಬಹುದು ಇದರಿಂದ ಯಡಿಯೂರಪ್ಪ ಮತ್ತೊಮ್ಮೆಅಧಿಕಾರ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಲಿದೆ.

2008 ರಲ್ಲಿ ಪಕ್ಷ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಮೂರೂವರೆ ವರ್ಷ ಮಾತ್ರ ಆಡಳಿತ ನಡೆಸಿದ್ದ ಯಡಿಯೂರಪ್ಪ ಬದಲಾದ ರಾಜಕೀಯ ಸನ್ನಿವೇಶದಲ್ಲಿ 2011ರಲ್ಲಿ ರಾಜೀನಾಮೆ ನೀಡಿದ್ದರು. ಇದೀಗ ನಾಲ್ಕು ವರ್ಷ ಅವಧಿಯ ಸರ್ಕಾರಲ್ಲಿ ಒಂದೂವರೆ ವರ್ಷ ಮುಗಿಸಿದ್ದು, ಇನ್ನೂ ಎರಡೂವರೆ ವರ್ಷದ ಅವಧಿ ಬಾಕಿ ಇದೆ. ಈ ಅವಧಿ ಪೂರ್ಣಕ್ಕೆ ಅವಕಾಶ ಸಿಗಲಿದೆಯಾ ಅಥವಾ ನಾಯಕತ್ವ ಬದಲಾವಣೆ ಪರ್ವಕ್ಕೆ ನಾಂದಿ ಹಾಡಲಿದೆಯಾ ಎನ್ನುವುದು ಉಪಚುನಾವಣೆ ಮತ್ತು ಬಿಹಾರ ಚುನಾವಣಾ ಫಲಿತಾಂಶದ ಮೇಲೆ ನಿಂತಿದೆ ಎನ್ನಲಾಗುತ್ತಿದೆ.

Last Updated : Nov 10, 2020, 6:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.