ETV Bharat / state

ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ: ಫಲಿತಾಂಶಕ್ಕೂ ಮುನ್ನವೇ ಸಚಿವ ಸ್ಥಾನದ ಮೇಲೆ ಮುನಿರತ್ನ ಕಣ್ಣು - ಆರ್​ಆರ್​ ನಗರ ಉಪ ಚುನಾವಣೆ ಫಲಿತಾಂಶ 2020 ಸುದ್ದಿ,

ಸಿಎಂ ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ಅದು ಸೂರ್ಯ-ಚಂದ್ರ ಇರುವವರೆಗೂ ಸತ್ಯವಾಗಿರುತ್ತದೆ. ಅವರು ನನ್ನನ್ನೂ ಸಹ ಸಚಿವರನ್ನಾಗಿ ಮಾಡಲಿದ್ದಾರೆ ಎಂದು ಮುನಿರತ್ನ ತಮ್ಮ ಆತ್ಮವಿಶ್ವಾಸದ ಮಾತುಗಳನ್ನಾಡಿದರು.

Munirathna reaction on Yediyurappa promise, Munirathna reaction on Yediyurappa promise in Bangalore, Munirathna, Munirathna news, RR Nagar by election, RR Nagar by election result, RR Nagar by election result 2020, RR Nagar by election result 2020 news, ಯಡಿಯೂರಪ್ಪ ಮಾತು ಬಗ್ಗೆ ಮುನಿರತ್ನ ಪ್ರತಿಕ್ರಿಯೆ, ಬೆಂಗಳೂರಿನಲ್ಲಿ ಯಡಿಯೂರಪ್ಪ ಮಾತು ಬಗ್ಗೆ ಮುನಿರತ್ನ ಪ್ರತಿಕ್ರಿಯೆ, ಮುನಿರತ್ನ, ಮುನಿರತ್ನ ಸುದ್ದಿ, ಆರ್​ಆರ್​ ನಗರ ಉಪ ಚುನಾವಣೆ, ಆರ್​ಆರ್​ ನಗರ ಉಪ ಚುನಾವಣೆ ಫಲಿತಾಂಶ, ಆರ್​ಆರ್​ ನಗರ ಉಪ ಚುನಾವಣೆ ಫಲಿತಾಂಶ 2020, ಆರ್​ಆರ್​ ನಗರ ಉಪ ಚುನಾವಣೆ ಫಲಿತಾಂಶ 2020 ಸುದ್ದಿ,
ಯಡಿಯೂರಪ್ಪ ಕೊಟ್ಟ ಮಾತಿನ ಬಗ್ಗೆ ಮುನಿರತ್ನ ಪ್ರತಿಕ್ರಿಯೆ
author img

By

Published : Nov 4, 2020, 12:41 PM IST

ಬೆಂಗಳೂರು: ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ಇದು ಸೂರ್ಯ-ಚಂದ್ರ ಇರುವವರೆಗೂ ಸತ್ಯ. ಆ ಮಾತು ಪ್ರಕಾರ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನ್ನನ್ನೂ ಸಚಿವರನ್ನಾಗಿ ಮಾಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಕೊಟ್ಟ ಮಾತಿನ ಬಗ್ಗೆ ಮುನಿರತ್ನ ಪ್ರತಿಕ್ರಿಯೆ

ವೈಯಾಲಿಕಾವಲ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ಶೇ.45 ಮತದಾನವಾಗಿರುವುದು ಒಳ್ಳೆಯ ಮತದಾನ ಪ್ರಮಾಣವಾಗಿದೆ. ಕಳೆದ ಬಾರಿಗಿಂತ ಶೇ.7ರಷ್ಟು ಮತದಾನ ಕಡಿಮೆಯಾಗಿದೆ. ಕಡಿಮೆ ಮತದಾನವಾಗಿ ಯಾರಿಗೆ ಲಾಭ ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ. ಕಳೆದ 134 ವರ್ಷಗಳಿಂದ ಅದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಕಡಿಮೆ ಪರ್ಸೆಂಟೆಜ್ ಆದರೆ ನಮಗೆ ಲಾಭ ಅಂತ ಹೇಳುತ್ತಾ ಬರುತ್ತಿದ್ದಾರೆ. ಅದರೆ ಜನರು ತುಂಬಾ ಬುದ್ಧಿವಂತರಿದ್ದಾರೆ. ಶೇ. 20 ಆಗಲಿ ಶೇ. 30 ಆಗಲಿ ಅಭಿವೃದ್ಧಿ ಮಾಡಿದವರಿಗೆ ಜನರು ವೋಟ್ ಹಾಕುತ್ತಾರೆ. ಕಡಿಮೆ ಮತದಾನವಾಗದರೆ ನಮಗೆ ಲಾಭ ಅಗುತ್ತದೆ ಅನ್ನೋದನ್ನ ಬಿಟ್ಟು ಮುಂದೆ ಜನರ ಜೊತೆ ಯಾವ ರೀತಿ ಬೆರೆಯಬೇಕು ಎಂಬುದು ಚಿಂತೆ ಮಾಡಿದರೆ ಕಾಂಗ್ರೆಸ್ ಉಳಿಯುತ್ತದೆ ಎಂದು ಟಾಂಗ್ ನೀಡಿದರು.

50 ಸಾವಿರ ಮತಗಳಿಂದ ಮುನಿರತ್ನ ಗೆಲ್ಲುತ್ತಾರೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಅದು ಯಡಿಯೂರಪ್ಪ ಹಿರಿತನದ ಆಧಾರದಲ್ಲಿ ಹೇಳಿದ್ದಾರೆ. ನಾನು ಮತದಾರರಲ್ಲಿ ಮತಭಿಕ್ಷೆ ಕೇಳಿದ್ದೇನೆ. ಎಷ್ಟು ಮತಗಳಿಂದ ಗೆಲ್ಲುತ್ತೇನೆ ಅನ್ನೋದನ್ನ ಈಗ ಹೇಳೋದಿಲ್ಲ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಕೊಟ್ಟ ಮಾತಿನ ಪ್ರಕಾರ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನಗೂ ಕೊಟ್ಟ ಮಾತಿನಂತೆ ಮಂತ್ರಿ ಮಾಡುತ್ತೇನೆ ಎಂದಿದ್ದಾರೆ. ಆದರೆ ಸಚಿವ ಸ್ಥಾನ ನೀಡುವ ಬಗ್ಗೆ ನಾನು ಈಗಲೇ ಏನು ಹೇಳಿವುದಿಲ್ಲ. ಮುಂದಿನ ಭವಿಷ್ಯ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಅದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದರು.

ನಾವು ಕಾಂಗ್ರೆಸ್​ನಿಂದ ಹೋದಾಗ ಕೆಲವರು ಶುಭ ಕೋರಿದರು. ನಿಮಗೆ ಒಳ್ಳೆಯದಾಗ್ಲಿ ಒಳ್ಳೆಯ ಪೋರ್ಟ್ ಪೋಲಿಯೋ ಸಿಗಲಿ. ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂದು ನನಗೆ ಆಶೀರ್ವಾದ ಮಾಡಿ ಕಳಿಸಿದವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.

ನಕಲಿ ವೋಟರ್ ಐಡಿ ಆರೋಪ ಕುರಿತು ಮತ್ತೆ ಆಣೆ ಪ್ರಮಾಣದ ಬಗ್ಗೆ ಮಾತನಾಡಿದ ಮುನಿರತ್ನ, ಆರೋಪ ಮಾಡಿರುವವರು ಯಾವ ದೇವರನ್ನ ನಂಬುತ್ತಾರೋ ಅಲ್ಲೇ ಆಣೆ ಮಾಡಲು ಸಿದ್ಧನಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.