ETV Bharat / state

ರಿಜ್ವಾನ್​ಗೆ 'ಕೈ' ಟಿಕೆಟ್​ ಕೊಡುವಂತೆ ಐಎಂಎ ಆರೋಪಿ ಶಿಫಾರಸು... ಕೆಪಿಸಿಸಿ ಕಚೇರಿಗೆ ರೌಡಿಶೀಟರ್​ ತಂಡ - ರಿಜ್ವಾನ್ ಅರ್ಷದ್ ಪರ ಬ್ಯಾಟಿಂಗ್

ರೌಡಿಶೀಟರ್ ಇಶ್ತಿಯಾಕ್ ಅಹಮ್ಮದ್ ಮತ್ತು ಬೆಂಬಲಿಗರು ರಿಜ್ವಾನ್​ ಅರ್ಷದ್ ಗೆ ಟಿಕೆಟ್ ನೀಡುವಂತೆ ಅವರ ಪರವಾಗಿ ಮಾತನಾಡಲು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು.

ರೌಡಿಶೀಟರ್ ಇಶ್ತಿಯಾಕ್
author img

By

Published : Nov 7, 2019, 3:26 PM IST

ಬೆಂಗಳೂರು: ಕಾಂಗ್ರೆಸ್​ ನಾಯಕ ರಿಜ್ವಾನ್​ ಅರ್ಷದ್ ಗೆ ಟಿಕೆಟ್ ನೀಡುವಂತೆ ಅವರ ಪರವಾಗಿ ಮಾತನಾಡಲು ರೌಡಿಶೀಟರ್ ಇಶ್ತಿಯಾಕ್ ಅಹಮ್ಮದ್ ಮತ್ತು ಬೆಂಬಲಿಗರು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು.

ಕಳೆದ ಬಾರಿ ಕೆ.ಸಿ.ವೇಣುಗೋಪಾಲ್ ಆಗಮಿಸಿದ್ದಾಗ ರಿಜ್ವಾನ್​ ಪರ ಇಶ್ತಿಯಾಕ್ ಬಂದಿದ್ದ. ಇಂದು ಮತ್ತೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಇಶ್ತಿಯಾಕ್ ಮತ್ತು ಸಹಚರರು ರಿಜ್ವಾನ್ ಅರ್ಷದ್ ಪರ ಬ್ಯಾಟಿಂಗ್ ಮಾಡಿತು. ಇಶ್ತಿಯಾಕ್ ಐಎಂಎ ಹಗರಣದ ಪ್ರಕರಣದ ಪ್ರಮುಖ ಆರೋಪಿ.

ದಿನೇಶ್ ಗುಂಡೂರಾವ್ ರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಮಾಜಿ ಪಾಲಿಕೆ ಸದಸ್ಯ ಚಂದ್ರು, ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಸ್ಥಳೀಯರಿಗೇ ಟಿಕೆಟ್ ನೀಡಬೇಕು. ರಿಜ್ವಾನ್ ಅರ್ಷದ್ ಸ್ಥಳೀಯರಾಗಿದ್ದು, ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.

ಕೆಪಿಸಿಸಿ ಕಚೇರಿಗೆ ಆಗಮಿಸಿದ ರೌಡಿಶೀಟರ್ ಇಶ್ತಿಯಾಕ್

ಐದು ಕ್ಷೇತ್ರಗಳ ಉಪಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಹಿರಿಯ ನಾಯಕರದ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ಶಾಸಕರಾದ ಸೌಮ್ಯ ರೆಡ್ಡಿ, ಅಖಂಡ ಶ್ರೀನಿವಾಸ ಮೂರ್ತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

Intro:Body:KN_BNG_01_SIDDARAMYYA_KPCC_SCRIPT_7201951

ಮತ್ತೆ ರಿಜ್ವಾನ್ ಅರ್ಷದ್ ಪರ ಬ್ಯಾಟಿಂಗ್ ಮಾಡಲು ಕೆಪಿಸಿಸಿ ಕಚೇರಿಗೆ ಆಗಮಿಸಿದ ರೌಡಿಶೀಟರ್ ಇಶ್ತಿಯಾಕ್!

ಬೆಂಗಳೂರು: ಮತ್ತೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ರೌಡಿಶೀಟರ್ ಇಶ್ತಿಯಾಕ್ ಅಹಮ್ಮದ್, ರಿಸ್ವಾನ್‌ ಅರ್ಷದ್ ಗೆ ಟಿಕೆಟ್ ನೀಡುವನಂತೆ ಅವರ ಪರ ಬ್ಯಾಟಿಂಗ್ ಮಾಡಿದರು.

ಕಳೆದ ಬಾರಿ ಕೆ.ಸಿ.ವೇಣುಗೋಪಾಲ್ ಆಗಮಿಸಿದ್ದಾಗ ರಿಸ್ವಾನ್ ಪರ ಇಸ್ತಿಯಾಕ್ ಬ್ಯಾಟಿಂಗ್ ಮಾಡಿದ್ದರು. ಇಂದು ಮತ್ತೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಇಶ್ತಿಯಾಕ್ ಅಂಡ್ ಟೀಂ ರಿಜ್ವಾನ್ ಅರ್ಷದ್ ಪರ ಬ್ಯಾಟಿಂಗ್ ಮಾಡಿತು. ಇಶ್ತಿಯಾಕ್ ಐಎಂಎ ಹಗರಣ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಮಾಡಲು ಮುಂದಾಗಿದ್ದ ಇಶ್ತಿಯಾಕ್ ಅಂಡ್ ಟೀಂ, ಕೆಪಿಸಿಸಿ ಕಚೇರಿ ಮುಂದೆನೇ ಸ್ವಲ್ಪ ಹೊತ್ತು ತಮ್ಮ ಬೆಂಬಲಿಗರೊಂದಿಗೆ ಕಾದುನಿಂತರು. ಆದರೆ ಸಿದ್ದರಾಮಯ್ಯ ಆಗಮನ ವಿಳಂಬವಾದ ಹಿನ್ನೆಲೆ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಶಿವಾಜಿನಗರ ಕ್ಷೇತ್ರದಲ್ಲಿ ಅರ್ಷದ್ ಗೆ ಟಿಕೆಟ್ ನೀಡುವಂತೆ, ಶಿವಾಜಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಾಲಿಕೆ ಸದಸ್ಯರು, ಮುಖಂಡರ ಜತೆಗೂಡಿ ಒತ್ತಾಯ ಮಾಡಿದರು. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಸಾಧ್ಯವಾಗಿಲ್ಲ.

ದಿನೇಶ್ ಗುಂಡೂರಾವ್ ರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಮಾಜಿ ಪಾಲಿಕೆ ಸದಸ್ಯ ಚಂದ್ರು, ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಸ್ಥಳೀಯರಿಗೇ ಟಿಕೆಟ್ ನೀಡಬೇಕು. ರಿಜ್ವಾನ್ ಅರ್ಷದ್ ಸ್ಥಳೀಯರಾಗಿದ್ದು, ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.

ಐದು ಕ್ಷೇತ್ರಗಳ ಉಪಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಹಿರಿಯ ನಾಯಕರದ ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ಶಾಸಕರಾದ ಸೌಮ್ಯ ರೆಡ್ಡಿ, ಅಖಂಡ ಶ್ರೀನಿವಾಸ ಮೂರ್ತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.