ಬೆಂಗಳೂರು: ಮಹಾನಗರದಲ್ಲಿ ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಯನ್ನು ಬಂಧಿಸಲಾಗಿದೆ. ಕೆ.ಪಿ.ಅಗ್ರಹಾರ ಪೊಲೀಸರಿಂದ ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಸಂಜಯ್(24) ನನ್ನು ಅಂದರ್ ಮಾಡಿದ್ದಾರೆ.
2013ರಿಂದಲೂ ವಿವಿಧ ಅಪರಾಧ ಕೃತ್ಯಗಳಲ್ಲಿ ಆರೋಪಿ ಸಕ್ರಿಯನಾಗಿದ್ದನು. ಈತನ ವಿರುದ್ಧ ಪಶ್ಚಿಮ ವಿಭಾಗದ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳಿದ್ದವು. ಜಾಮೀನು ಪಡೆದು ಹೊರಬಂದು ನಂತರವೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೆ.ಪಿ.ಅಗ್ರಹಾರ ಪೊಲೀಸರಿಂದ ಗೂಂಡಾ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿರಿ: ವಾಹನ ಕಳ್ಳತನ ಪ್ರಕರಣ: ಮೂವರ ಬಂಧನ; ಆಟೋ ಸೇರಿ 11 ವಾಹನಗಳು ವಶಕ್ಕೆ
ಜಾಮೀನು ಪಡೆದು ಹೊರಬಂದು ನಂತರವೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಹಿನ್ನೆಲೆಯಲ್ಲಿ ಕೆ.ಪಿ.ಅಗ್ರಹಾರ ಪೊಲೀಸರಿಂದ ಗೂಂಡಾ ಕಾಯ್ದೆಯಡಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.