ETV Bharat / state

ದೇವಸ್ಥಾನಕ್ಕೆ ಕಾಲಿಟ್ಟರೆ ಕಾಲು ಕತ್ತರಿಸುತ್ತೇನೆ... ಶಾಸಕನ ಹೆಸರೇಳಿಕೊಂಡು ರೌಡಿಸಂ- ವಿಡಿಯೋ - Rowdism, in bangalore by using MLA name

ಶಾಸಕರೊಬ್ಬರ ಹೆಸರನ್ನು ಹೇಳಿಕೊಂಡು ಏರಿಯಾದಲ್ಲಿ ದಮ್ಕಿ ಹಾಕಿ ರೌಡಿಸಂ ಮಾಡುತ್ತಿದ್ದ ಪುಂಡನೋರ್ವನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಸಿಟಿವಿಯಲ್ಲಿ ‌ಸೆರೆ
author img

By

Published : Sep 23, 2019, 10:49 AM IST

ಬೆಂಗಳೂರು: ಹಲಸೂರು ಬಳಿ ಇರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಶಾಸಕ ಹ್ಯಾರೀಸ್ ಬೆಂಬಲಿಗನೆಂದು ಹೇಳಿಕೊಂಡು ಪಲ್ಲು ಪ್ರಕಾಶ್ ಎಂಬಾತ, ಕಣ್ಣನ್ ಕುಮಾರ್ ಎಂಬುವರ ಮೇಲೆ ಹಲ್ಲೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

ಹಲಸೂರು ಬಳಿ ಇರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಕಳೆದ ಒಂದು ವರ್ಷದಿಂದ ದೇಗುಲದ ಹೂವಿನ ಅಲಂಕಾರವನ್ನ ಮಾಡುತ್ತಿದ್ದ ಕಣ್ಣನ್​ಗೆ, ನೀನು‌ ನಮ್ಮ ಏರಿಯಾ ದೇಗುಲಕ್ಕೆ ಕಾಲಿಡಬಾರದು. ನಿನ್ನ ಬ್ಯುಸಿನೆಸ್​ನ್ನೆಲ್ಲ ಖಾಲಿ ಮಾಡಿಕೊಂಡು ಹೋಗು, ಇಲ್ಲದಿದ್ದರೆ ಕಾಲು ಕತ್ತರಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಶಾಸಕನ ಹೆಸರು ಹೇಳಿಕೊಂಡು ರೌಡಿಸಂ

ಕಣ್ಣನ್ ಅವರ ಮೇಲೆ ಪಲ್ಲು ಪ್ರಕಾಶ್ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಹಾಗೆ ಪಲ್ಲು ಪ್ರಕಾಶ್​ ಶಾಸಕ ಹ್ಯಾರೀಸ್ ಜೊತೆಯಲ್ಲಿನ ಫೋಟೊವೊಂದನ್ನು ಇಟ್ಟುಕೊಂಡು ತಾನು ಬೆಂಬಲಿಗ ಎಂದು ಬಿಂಬಿಸುತ್ತಿರುವ ಕುರಿತು ತನಿಖೆ ನಡೆಯುತ್ತಿದೆ.

Intro:ದೇವಸ್ಥಾನಕ್ಕೆ ಕಾಲಿಟ್ರೆ ಕಾಲು ಕತ್ತರಿಸ್ತಿನಿ.
ಶಾಸಕನ ಭಂಟ ನಿಂದ ಧಮ್ಕಿ ಇದೀಗ ಸಿಸಿಟಿವಿಯಲ್ಲಿ ‌ಕೃತ್ಯ ಸೆರೆ

ಹಲಸೂರು ಬಳಿ ಇರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಹ್ಯಾರೀಸ್ ಬೆಂಬಲಿಗನೆಂದು ಹೇಳಿಕೊಂಡು ಪಲ್ಲು ಪ್ರಕಾಶ್ ಎಂಬಾತ ದಲಿತ ವ್ಯಕ್ತಿ ಕಣ್ಣನ್ ಕುಮಾರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹಲಸೂರು ಬಳಿ ಇರುವ ಸುಬ್ರಹ್ಮಣ್ಯ ದೇವಾಲಯದಲ್ಲಿ
ಕಳೆದ ಒಂದು ವರ್ಷದಿಂದ ದೇಗುಲದ ಹೂವಿನ ಅಲಂಕಾರವನ್ನ ಕಣ್ಣನ್ ಮಾಡ್ತಿದ್ದ ‌‌.
ಆದ್ರೆ ಈ ವೇಳೆ‌ಎಂಟ್ರಿ ‌ಕೊಟ್ಟ ಪಲ್ಲು ಪ್ರಕಾಶ್
ನೀನು‌ ದಲಿತ ನಮ್ಮ ಏರಿಯಾ ದೇಗುಲಕ್ಕೆ ಕಾಲಿಡಬಾರದು.
ನಿನ್ನ ಬಿಝಿನೆಸ್ ನೆಲ್ಲ ಖಾಲಿ ಮಾಡ್ಕೊಂಡ್ ಹೋಗ್ಬೆಕು ಇಲ್ಲಾಂದ್ರೆ ಕಾಲು ಕತ್ತರಿಸ್ತಿನಿ ಹಾಗೆ ಪೊಲೀಸರರಿಗೆ ದೂರು ನೀಡಿದ್ರೆ ಹ್ಯಾರೀಸ್ ಅಣ್ಣನ ಕಡೆಯಿಂದ ಸರಿಯಾಗ್ ಮಾಡಿಸ್ತೀನಿ ಅಂತ ಅವಾಜ್ ಹಾಕಿರುವ ಆರೋಪ ಕೇಳಿ ಬಂದಿದೆ.

ಸದ್ಯ ಕಣ್ಣನ್ ಅವರಿಗೆ ಪಲ್ಲು ಪ್ರಕಾಶ್ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.
ಹಾಗೆ ಈತ ವಿನಾಕಾರಣ ಹ್ಯಾರಿ ಸ್ ಜೊತೆ ಪೋಟೊ ಇಟ್ಕೊಂಡು ತಾನು ಆತನ ಬೆಂಬಲಿಗ ಎಂದು ಬಿಂಬಿಸ್ತಿದ್ದನ್ನ ಅನ್ನೋದ್ರ ತನಿಖೆ ಕೂಡ ಮುಂದುವರೆದಿದೆBody:KN_BNG_02_HARISH_7204498Conclusion:KN_BNG_02_HARISH_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.