ಬೆಂಗಳೂರು: ಲಾಕ್ಡೌನ್ನಿಂದಾಗಿ ಕೂಲಿ ಕಾರ್ಮಿಕರು ಒಂದೊತ್ತಿನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಬಂದೋದಗಿದೆ. ಇಂತಹವರಿಗೆ ರೋಟರಿ ಆಫ್ ಬೆಂಗಳೂರು ಹಾಗೂ ಯಶವಂತಪುರ ಪೊಲೀಸರು ಆಹಾರ ಪದಾರ್ಥಗಳನ್ನು ವಿತರಿಸಿದ್ದಾರೆ.
ಕೂಲಿ ಕಾರ್ಮಿಕರ ಜೀವನ ದಿನದ ಸಂಪಾದನೆ ಮೇಲೆ ನಡೆಯುತಿತ್ತು. ಈ ಜನರ ಹೊಟ್ಟೆ ತುಂಬಿಸುವ ಉದ್ದೇಶದಿಂದ ರೋಟರಿ ಆಫ್ ಬೆಂಗಳೂರು ಹಾಗೂ ಯಶವಂತಪುರ ಪೊಲೀಸರು ಈ ಮಹತ್ವದ ಕಾರ್ಯ ಮಾಡಿದ್ದಾರೆ.
ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕಟ್ಟಡ ಕಾರ್ಮಿಕರಿಗೆ 10 ದಿನಕ್ಕೆ ಆಗುವಷ್ಟು 3 ಕೆಜಿ ಅಕ್ಕಿ, 1 ಕೆಜಿ ಗೋಧಿ, 1 ಲೀಟರ್ ಎಣ್ಣೆ, 1 ಕೆಜಿ ಉಪ್ಪು, ತೊಗರಿ ಬೇಳೆ 1.5 ಕೆಜಿ, ಮೆಣಸಿನಪುಡಿ 100 ಗ್ರಾಂ, ದನಿಯಾ ಪೌಡರ್ 100 ಗ್ರಾಂ, ಅರಿಶಿನ ಪೌಡರ್ 50 ಗ್ರಾಂ, ಈರುಳ್ಳಿ 1 ಕೆಜಿ, ಆಲೂಗಡ್ಡೆ 1 ಕೆಜಿ ವಿತರಿಸಲಾಯಿತು.
ಬಳಿಕ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ, ಕೊರೊನಾ ಸೋಂಕಿನ ಬಗ್ಗೆ ಸುರಕ್ಷಿತ ಕ್ರಮ ಅನುಸರಿಸುವಂತೆ ಜಾಗೃತಿ ಮೂಡಿಸಲಾಯಿತು.