ETV Bharat / state

ಹೊಸ ಹೇರ್​ಸ್ಟೈಲ್​ನಲ್ಲಿ ರಾಕಿ ಬಾಯ್.. ಎಲ್ಲೆಡೆ ಡೆಡ್​ಲಾಕ್ಸ್​​ ಕಟಿಂಗ್​ನದ್ದೇ ಹವಾ - ಹೊಸ ಹೇರ್​ಸ್ಟೈಲ್​ನಲ್ಲಿ ರಾಕಿ ಬಾಯ್

ರಾಕಿಂಗ್​ ಸ್ಟಾರ್​ ಯಶ್​​ ಹೊಸ ಹೇರ್​​ಸ್ಟೈಲ್​ ಮಾಡಿಸಿದ್ದು, ಇದಕ್ಕೆ ರಾಕಿ ಬಾಯ್​ ಅಭಿಮಾನಿಗಳು ಫಿದಾ ಆಗಿದ್ದಾರೆ.

Kn_Bng_0
ಡೆಡ್​ಲಾಕ್ಸ್ ಹೇರ್​ಸ್ಟೈಲ್​ನಲ್ಲಿ ರಾಕಿ ಬಾಯ್
author img

By

Published : Nov 7, 2022, 7:40 PM IST

ಕೆಜಿಎಫ್ ಚಾಪ್ಟರ್ 2 ಸಿನಿಮಾ‌ ಬಳಿಕ‌ ರಾಕಿಂಗ್ ಸ್ಟಾರ್ ಯಶ್ ಮುಂದಿನ ಪ್ರಾಜೆಕ್ಟ್ ಯಾವುದು ಅನ್ನೋದು ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ಭಾರತೀಯ ಸಿನಿಮಾರಂಗ ಕುತೂಹಲದಿಂದ ಎದುರು ನೋಡುತ್ತಿದೆ. ಈ ಮಧ್ಯೆ ಯಶ್ ತಮ್ಮ ಕುಟುಂಬದಲ್ಲಿ ಮಕ್ಕಳ ಜೊತೆ ಕಾಲ ಕಳೆಯೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಜಿಎಫ್ ಸಿನಿಮಾಕ್ಕಾಗಿ ಉದ್ದವಾದ ಕೂದಲು ಬಿಟ್ಟು ಅದಕ್ಕೆ ಒಂದು ರೂಪ ಕೊಟ್ಟಿದ್ದ ರಾಕಿ, ಈಗ ಮತ್ತೆ ತಮ್ಮ ಕೂದಲಿಗೆ ಹೊಸ ಟಚ್ ಕೊಟ್ಟಿದ್ದಾರೆ.

ಇತ್ತೀಚೆಗೆ ಖಾಸಗಿ ಚಾನಲ್ ಸಂವಾದದಲ್ಲಿ ಯಶ್​ ಭಾಗಿಯಾಗಿದ್ದರು. ಈ ಸಂವಾದ ಸೇರಿದಂತೆ aವರ ಹೇರ್​ಸ್ಟೈಲ್ ಕೂಡ ವೈರಲ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಡೆಡ್​ಲಾಕ್ಸ್ ಹೇರ್​ಸ್ಟೈಲ್​ದೇ ಸುದ್ದಿಯಾಗ್ತಿದೆ.

ಡೆಡ್​ಲಾಕ್ಸ್ ಹೇರ್​ಸ್ಟೈಲ್​ನಲ್ಲಿ ರಾಕಿ ಬಾಯ್

ಈ ಸ್ಟೈಲ್ ಮಾಡಿದ್ದು ಅಲೆಕ್ಸಾಂಡರ್ ಸಲೂನ್. ಹೈದರಾಬಾದ್​ನ ಪ್ರಸಿದ್ಧ ಅಲೆಕ್ಸಾಂಡರ್ ಸಲೂನ್​ನಲ್ಲಿ ಯಶ್​ ಹೊಸ ಹೇರ್​ಸ್ಟೈಲ್ ಮಾಡಿಸಿದ್ದಾರೆ. ಅಲೆಕ್ಸಾಂಡರ್ ಸಲೂನ್ ಅನೇಕ ದಶಕಗಳಿಂದ ಹೇರ್ ಸ್ಟೈಲ್ ಮಾಡುತ್ತಿದೆ. ಟಾಲಿವುಡ್ ಸ್ಟಾರ್ಸ್ ಜೊತೆಗೆ ಸ್ಯಾಂಡಲ್​ವುಡ್‌ನ ಕೆಲ ಸ್ಟಾರ್ಸ್​​ ಕೂಡ ಅಲೆಕ್ಸಾಂಡರ್ ಸಲೂನ್ ಅಲ್ಲೇ ಹೇರ್ ಸ್ಟೈಲ್ ಮಾಡಿಸುತ್ತಾರೆ. ಇದೀಗ ಯಶ್ ಎಲ್ಲಿ ಹೋದರು ಡೆಡ್​ಲಾಕ್ಸ್ ಬಗ್ಗೆ ಟಾಕ್ ಆಗುತ್ತಿದ್ದು, ಮುಂದಿನ ಸಿನಿಮಾಕ್ಕಾಗಿ ರಾಕಿ ಬಾಯ್ ಈ ಸ್ಟೈಲ್ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಖಡಕ್ ಡೈಲಾಗ್​ಗಳಿಂದಲೇ ಸೌಂಡ್ ಮಾಡುತ್ತಿರೋ ಶ್ರೇಯಸ್ ಮಂಜು 'ರಾಣ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.