ETV Bharat / state

ಓಮಿಕ್ರೋನ್ ಸೋಂಕಿಗೆ ಲಸಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ

author img

By

Published : Nov 29, 2021, 9:45 PM IST

ಯಶವಂತಪುರ‌ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ನಗರದಲ್ಲಿ ಓಮಿಕ್ರೋನ್ ಸೋಂಕಿಗೆ ಡೋಸ್​​ ಕೊಡುವ ನೆಪದಲ್ಲಿ ಬಂದ ವ್ಯಕ್ತಿಗಳು ಮನೆ ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Robbery with gun point in Bangalore
ಪಿಸ್ತೂಲ್ ತೋರಿಸಿ ಮನೆ ದರೋಡೆ

ಬೆಂಗಳೂರು: ದೇಶದಲ್ಲೀಗ ಕೋವಿಡ್ ರೂಪಾಂತರ ತಳಿ ಓಮಿಕ್ರೋನ್ ವೈರಸ್ ಹರಡುವ ಆತಂಕದ ಬೆನ್ನಲ್ಲೇ ರಾಜ್ಯ ಸರ್ಕಾರ ಸಭೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿದೆ. ಜನರಲ್ಲೂ ರೂಪಾಂತರ ತಳಿ ಆತಂಕ ಸೃಷ್ಟಿಸಿದೆ.‌‌ ಈ ಅಡ್ಡಿ- ಆತಂಕ ನಡುವೆಯೂ ಹೊಸ ತಳಿಗೆ ಡೋಸ್ ಕೊಡುವ ಸೋಗಿನಲ್ಲಿ‌ ಮನೆಗೆ ನುಗ್ಗಿ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ‌ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಪಿಸ್ತೂಲ್ ತೋರಿಸಿ ದರೋಡೆ

ಯಶವಂತಪುರ‌ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ನಗರದ 6ನೇ ಕ್ರಾಸ್​ನಲ್ಲಿರುವ ಸಂಪತ್ ಸಿಂಗ್ ಎಂಬುವವರ ಮನೆಗೆ‌ ನುಗ್ಗಿ 50 ಗ್ರಾಂ ಚಿನ್ನಾಭರಣ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ವಿವರ:

ಇಂದು ಬೆಳಗ್ಗೆ 11.30ರ ವೇಳೆ ಕಾರಿನಲ್ಲಿ ಮೂವರು ದುಷ್ಕರ್ಮಿಗಳು ಬಂದಿದ್ದಾರೆ.‌ ಈ ಪೈಕಿ ಓರ್ವ ಆರೋಪಿ ಕೈಗಳಿಗೆ ಗ್ಲೌಸ್ ಹಾಕಿಕೊಂಡು ವೈದ್ಯಕೀಯ ಸಿಬ್ಬಂದಿ ಸೋಗಿನಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಓಮಿಕ್ರೋನ್ ರೂಪಾಂತರ ಸೋಂಕು‌ ಹರಡುತ್ತಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಮನೆಯಲ್ಲಿದ್ದ ಸಂಪತ್ ಸಿಂಗ್ ಪತ್ನಿ ಪಿಸ್ತಾದೇವಿ ಹಾಗೂ ಸೊಸೆ ರಕ್ಷಾ ಬಳಿ ವಿಚಾರಿಸಿದ್ದಾನೆ. ಜೊತೆಗೆ ಹೊಸ ತಳಿಯ ಕೋವಿಡ್‌ಗೆ ವ್ಯಾಕ್ಸಿನೇಷನ್‌ ಹಾಕಲು ಬಂದಿದ್ದೇನೆ ಎಂದು‌ ಪರಿಚಯಿಸಿಕೊಂಡಿದ್ದಾನೆ.‌

ಮನೆಯಲ್ಲಿ ಯಾರೂ ಇಲ್ಲದ ಕಾರಣ ಪತಿ ಸಂಪತ್ ಸಿಂಗ್ ಅವರಿಗೆ ಕರೆ ಮಾಡಲು ಪಿಸ್ತಾ ದೇವಿ ಯತ್ನಿಸುತ್ತಿದ್ದಂತೆ ಆಲರ್ಟ್ ಆದ ಆರೋಪಿಗಳು ಮೊಬೈಲ್ ಕಸಿದುಕೊಂಡು ಪಿಸ್ತೂಲ್ ಹಣೆಗಿಟ್ಟಿದ್ದಾರೆ. ಬಳಿಕ ಅತ್ತೆ ಸೊಸೆ ಇಬ್ಬರನ್ನೂ ರೂಮಿನಲ್ಲಿ‌ ಕೂಡಿಹಾಕಿ ಮನೆಯಲ್ಲಿದ್ದ 50 ಗ್ರಾಂ ಚಿನ್ನಾಭರಣ ದೋಚಿದ್ದಾರೆ.

ಕೃತ್ಯದ ವೇಳೆ ಮನೆ ಬಳಿ‌ ಸಂಪತ್ ಹಿರಿಯ ಮಗ ವಿಕ್ರಂ ಸಿಂಗ್ ಬಂದಿದ್ದಾನೆ. ಮನೆಯ ಕೆಳಗೆ ನಿಂತು ತಾಯಿಯನ್ನು ಕರೆದಿದ್ದಾನೆ. ಅದೇ ಸಂದರ್ಭದಲ್ಲಿ ಆರೋಪಿಗಳು ಹೊರ ಬಂದಿದ್ದಾರೆ. ಬಳಿಕ ವಿಕ್ರಂ ಬಳಿ ವ್ಯಾಕ್ಸಿನೇಷನ್‌ ಆಗಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಎರಡು ಡೋಸ್ ಆಗಿದೆ ಎಂದು ಉತ್ತರಿಸುತ್ತಿದ್ದಂತೆ ಅಲ್ಲಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ.

ಮನೆಗೆ ಹೋಗಿ ನೋಡಿದಾಗ ತಾಯಿ ಹಾಗೂ ಅತ್ತಿಗೆಯನ್ನು ಕೂಡಿ ಹಾಕಿರುವುದು ಬೆಳಕಿಗೆ ಬಂದಿದೆ. ಸದ್ಯ ಯಶವಂತಪುರ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು 257 ಮಂದಿಗೆ ಸೋಂಕು ದೃಢ ; ಐವರು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.