ಬೆಂಗಳೂರು : ನೈಸ್ ರೋಡ್ ಬಳಿ ರಾಬರಿ ಆಗುತ್ತೆ ಎಂಬ ಆಡಿಯೋ ಸಂದೇಶಕ್ಕೆ ಸಂಬಂಧೀಸಿದಂತೆ ಆಡಿಯೋ, ವಿಡಿಯೋ ವೈರಲ್ ಆಗಿದ್ದು, ಆ ಆಡಿಯೋ, ವಿಡಿಯೋ ಸುಳ್ಳು ಎಂದು ಮಾಜಿ ಶಾಸಕ ಅಶೋಕ್ ಖೇಣಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಸೈಬರ್ ಪೊಲೀಸರಿಗೆ ಈ ಸಂಬಂಧ ದೂರನ್ನು ಸಹ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತ ವ್ಯಕ್ತಿಗಳು ವಿಡಿಯೋ ಮತ್ತು ಆಡಿಯೋವನ್ನ ಹರಿಬಿಟ್ಟಿದ್ದಾರೆ. ಆಡಿಯೋದಲ್ಲಿ ಕಲ್ಲು ಎಸೆಯುತ್ತಾರೆ, ನೈಸ್ ರೋಡ್ ಬಳಿ ಕಾದು ಕಳಿತು ಕಲ್ಲು ಎಸೆದು ಡೈವರ್ಟ್ ಮಾಡುತ್ತಾರೆ. ಕಾರ್ ನಿಲ್ಲಿಸಿದ ತಕ್ಷಣ ತಮ್ಮ ವರಸೆ ಶುರು ಮಾಡ್ತಾರೆ ಕಳ್ಳರು ಎಂದು ಮೆಸೇಜ್ ಪಾಸ್ ಮಾಡಲಾಗಿದೆ.
ಆದರೆ, ನೈಸ್ ರಸ್ತೆಯಲ್ಲಿ ಈ ರೀತಿಯ ಘಟನೆಗಳು ನಡೆದಿಲ್ಲ. ಇದುವರೆಗೂ ಇದರ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ, ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ. ಕಂಪನಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ.
ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಆಡಿಯೋ ಯಾರು ಬಿಟ್ಟಿದ್ದಾರೆ, ಅದನ್ನ ವೈರಲ್ ಮಾಡಿದವರ್ಯಾರು ಎಂಬುದರ ಬಗ್ಗೆ ಆ್ಯಕ್ಷನ್ ತೆಗೆದುಕೊಳ್ಳುವಂತೆ ಸೈಬರ್ ಪೊಲೀಸರಿಗೆ ಖೇಣಿ ಮನವಿ ಮಾಡಿದ್ದಾರೆ.
ಓದಿ :ರಾತ್ರಿ 12.45ರ ಸುಮಾರಿಗೆ ನೆಟ್ವರ್ಕ್ ಮೂಲಕ ಪೊಲೀಸರು ಪತ್ತೆ ಹಚ್ಚಿದ್ರು : ಸಿ ಟಿ ರವಿ