ಆನೇಕಲ್(ಬೆಂಗಳೂರು): ಅತ್ತಿಬೆಲೆ ರಸ್ತೆಯಲ್ಲಿ ಮಾಯಸಂದ್ರದೆಡೆಗೆ ನಡೆದು ಹೋಗುತ್ತಿದ್ದ ಮೂವರು ಕಾರ್ಮಿಕರಿಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಐಸರ್ ವಾಹನ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ.
ಮೃತಪಟ್ಟ ಚಂದನ್ ದಾಸ್ ಮಾಯಸಂದ್ರದ ಪ್ಲಿಪ್ಕಾರ್ಟ್ನಲ್ಲಿ 7 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ. ಆಸಿಮ್ ದೆಯರಿ ಮತ್ತು ಕರಣ್ ಬಿಸುಮತರಿ ಮಾಯಸಂದ್ರದ ಡಿಹೆಚ್ಎಲ್ ನಲ್ಲಿ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದರು. ಮೂವರು ಅಸ್ಸೋಂ ಮೂಲದವರಾಗಿದ್ದು, ಚಂದ್ರಪ್ಪ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು.
ಡಿಕ್ಕಿ ಹೊಡೆದ ಐಸರ್ ವಾಹನ ಸ್ಥಳದಿಂದ ಪರಾರಿಯಾಗಿದ್ದು, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮಿನಾರಾಯಣ್ ಮತ್ತು ಅತ್ತಿಬೆಲೆ ಪಿಐ ಕೆ ವಿಶ್ವನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಚಿಕನ್ ರೋಲ್ ತಂದ ಆಪತ್ತು.. ಹೋಟೆಲ್ ಹುಡುಗರ ರೂಂಗೆ ಬೆಂಕಿ ಹಚ್ಚಿದ ಇಬ್ಬರು ಖಾಕಿ ಬಲೆಗೆ!