ETV Bharat / state

ವಿಧಾನಪರಿಷತ್​ನ ಎರಡು ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಭಾರಿ ಪೈಪೋಟಿ - Congress Leaders Fight for MLC Seat

ಕಾಂಗ್ರೆಸ್​ನಲ್ಲಿ ಲಭ್ಯ ಇರುವ ಎರಡು ವಿಧಾನಪರಿಷತ್​ ಸ್ಥಾನಕ್ಕಾಗಿ ನಿವೃತ್ತಿ ಆಗುತ್ತಿರುವ 10 ಸದಸ್ಯರ ಜೊತೆ 30 ಕ್ಕೂ ಹೆಚ್ಚು ಮಂದಿ ಹೊಸ ಆಕಾಂಕ್ಷಿಗಳು ಹಾಗೂ ಮಾಜಿ ಪರಿಷತ್ ಸದಸ್ಯರುಗಳು ಲಾಭಿ ನಡೆಸುತ್ತಿದ್ದು, ಯಾರಿಗೆ ಮಣೆ ಹಾಕಬೇಕು ಎಂಬುದು ಕೈ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

rivalry in Congress for MLC seat
ವಿಧಾನಪರಿಷತ್​ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಭಾರೀ ಪೈಪೋಟಿ
author img

By

Published : Jun 11, 2020, 10:47 AM IST

ಬೆಂಗಳೂರು: ವಿಧಾನಪರಿಷತ್​​ನ ಎರಡು ಸ್ಥಾನಕ್ಕಾಗಿ ಕಾಂಗ್ರೆಸ್​​ನಲ್ಲಿ ದೊಡ್ಡ ಮಟ್ಟದ ಲಾಭಿ ಆರಂಭವಾಗಿದೆ.

ಏಳು ಸ್ಥಾನಗಳ ಪೈಕಿ ಮೂರು ಸ್ಥಾನ ಬಿಜೆಪಿ ಎರಡು ಸ್ಥಾನ ಕಾಂಗ್ರೆಸ್ ಹಾಗೂ ಇನ್ನೊಂದು ಸ್ಥಾನ ಜೆಡಿಎಸ್ ಪಡೆದುಕೊಳ್ಳುವ ಅವಕಾಶವಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ನ ಎರಡು ಸ್ಥಾನಗಳ ಪೈಕಿ ಒಂದನ್ನು ಅಲ್ಪಸಂಖ್ಯಾತರಿಗೆ ಇನ್ನೊಂದನ್ನು ಬೇರೆ ಸಮುದಾಯಕ್ಕೆ ನೀಡಲು ನಿರ್ಧರಿಸಲಾಗಿದೆ. ಆದರೆ, ಲಭ್ಯವಿರುವ ಎರಡು ಸ್ಥಾನಕ್ಕಾಗಿ 40 ಕ್ಕೂ ಹೆಚ್ಚು ಹಿರಿಯ ಹಾಗೂ ಕಿರಿಯ ಕಾಂಗ್ರೆಸಿಗರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದೆ ತಮ್ಮ ಆಸಕ್ತಿಯನ್ನು ಹಲವು ನಾಯಕರು ವ್ಯಕ್ತಪಡಿಸಿದ್ದಾರೆ. ತಮ್ಮ ಆಯ್ಕೆಗೆ ವಿವಿಧ ಕಾರಣಗಳನ್ನು ಇವರು ಮುಂದಿಟ್ಟಿದ್ದಾರೆ. ಕೆಲ ನಾಯಕರು ಯುವಕರಿಗೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದರೆ, ಮತ್ತೆ ಕೆಲವರು ಹಿರಿತನಕ್ಕೆ ಮಣೆಹಾಕಿ ಎಂದು ಸಲಹೆ ಕೊಟ್ಟಿದ್ದಾರೆ. ಈ ಮಧ್ಯೆ ಕಾಂಗ್ರೆಸ್​ನಿಂದ 10 ಸದಸ್ಯರು ನಿವೃತ್ತಿಯಾಗುತ್ತಿದ್ದು, ಇವರಲ್ಲಿ ಕೆಲವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ.

ವಿಧಾನಪರಿಷತ್​ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಪೈಪೋಟಿ

ವಿಧಾನಸಭೆಯಿಂದ ವಿಧಾನಪರಿಷತ್​ಗೆ ನೇಮಕವಾದ ಐದು ಸದಸ್ಯರ ಜೊತೆ ಇದೇ ತಿಂಗಳಲ್ಲಿ ನಾಮ ನಿರ್ದೇಶಿತ ಸದಸ್ಯರ ಐದು ಸ್ಥಾನ ಕೂಡ ಖಾಲಿಯಾಗುತ್ತಿದೆ. ಕಾಂಗ್ರೆಸ್​ನಿಂದ ಆಯ್ಕೆಯಾದ ಮೂರು ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಸದಸ್ಯರು ನಿವೃತ್ತಿ ಹೊಂದುತ್ತಿದ್ದಾರೆ. ಈ ಹಿನ್ನೆಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ಕಲ್ಪಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಅವಧಿ ಪೂರ್ಣಗೊಳಿಸುತ್ತಿರುವ ನಜೀರ್ ಅಹಮದ್​ಗೆ ಇನ್ನೊಂದು ಅವಧಿಗೆ ಅವಕಾಶ ನೀಡುವ ಚಿಂತನೆ ನಡೆದಿದೆ.

ಈ ಮಧ್ಯೆ, ಕೆಲ ವರ್ಷಗಳಿಂದ ವಿಧಾನಪರಿಷತ್ ಸದಸ್ಯರಾಗಲು ಲಾಭಿ ನಡೆಸುತ್ತಿರುವ ನಾಯಕರು ತಮ್ಮ ಪ್ರಯತ್ನ ಆರಂಭಿಸಿದ್ದು, ಇವರ ಜೊತೆ ಇನ್ನಷ್ಟು ಹೊಸ ನಾಯಕರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕಂಡು ಬರುತ್ತಿದ್ದಾರೆ. ಹಿರಿಯ ಕಾಂಗ್ರೆಸ್ಸಿಗರಾದ ವಿ.ಎಸ್ ಉಗ್ರಪ್ಪ, ಡಾ.ಜಯಮಾಲಾ, ಮಾಜಿ ಸಚಿವೆ ರಾಣಿ ಸತೀಶ್, ವಿ.ಆರ್ ಸುದರ್ಶನ್, ಬಿಎಲ್ ಶಂಕರ್, ನಿವೇದಿತ ಆಳ್ವಾ, ನಾಗರಾಜ್ ಯಾದವ್, ಎಚ್ಎಂ ರೇವಣ್ಣ, ಐವನ್ ಡಿಸೋಜಾ, ನಜೀರ್ ಅಹಮದ್​​​​, ಶಫಿವುಲ್ಲಾ, ನಟರಾಜ್ ಗೌಡ, ಭಾರತಿ ಶಂಕರ್, ನಾಗರಾಜ್ ಯಾದವ್ ಮತ್ತಿತರ ನಾಯಕರ ಹೆಸರು ಕೇಳಿ ಬರುತ್ತಿದೆ.

ಈಗಾಗಲೇ ವಿಧಾನಪರಿಷತ್ ಸದಸ್ಯರಾಗಿ ಅನುಭವ ಹೊಂದಿರುವವರಿಗಿಂತಲೂ ಯುವಕರು ಮತ್ತು ಸಾಮಾನ್ಯ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಿದರೆ, ಪಕ್ಷದ ಕೀರ್ತಿಯೂ ಹೆಚ್ಚುತ್ತದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ವಿಧಾನಪರಿಷತ್​ಗೆ ಕಾಂಗ್ರೆಸ್​ನಿಂದ ಸದಸ್ಯರ ಆಯ್ಕೆ ಸಂಬಂಧ ಇದುವರೆಗೂ ಯಾವುದೇ ಅಧಿಕೃತ ಸಭೆ ನಡೆದಿಲ್ಲ. ಸದ್ಯ ಕಾಂಗ್ರೆಸ್​​ನಿಂದ ನಜೀರ್ ಅಹಮದ್, ಎಂ.ಸಿ ವೇಣುಗೋಪಾಲ್, ಎಂ.ಎಸ್ ಬೋಸರಾಜು, ಎಚ್ಎಂ ರೇವಣ್ಣ ಹಾಗೂ ಜಯಮ್ಮ ನಿವೃತ್ತಿ ಹೊಂದುತ್ತಿದ್ದಾರೆ. ಇವರಲ್ಲದೇ ಕಾಂಗ್ರೆಸ್​ನಿಂದ ನಾಮ ನಿರ್ದೇಶನಗೊಂಡಿದ್ದ ಡಾ.ಜಯಮಾಲಾ, ಅಬ್ದುಲ್ ಜಬ್ಬಾರ್, ಐವನ್ ಡಿಸೋಜಾ, ಇಕ್ಬಾಲ್ ಅಹಮದ್ ಸರಡಗಿ, ಹಾಗೂ ತಿಪ್ಪಣ್ಣ ಕಮಕನೂರ ಕೂಡ ಇದೇ ತಿಂಗಳ ಕೊನೆಯಲ್ಲಿ ತಮ್ಮ ಅವಧಿ ಪೂರ್ಣಗೊಳಿಸುತ್ತಿದ್ದಾರೆ. ಈ ಎಲ್ಲ ಸದಸ್ಯರು ಕೂಡ ತಮ್ಮ ಮರು ಆಯ್ಕೆಯನ್ನು ಬಯಸಿದ್ದು, ನಾಮನಿರ್ದೇಶಿತ ಸದಸ್ಯರು ವಿಧಾನಸಭೆಯಿಂದ ವಿಧಾನಪರಿಷತ್​ಗೆ ಆಯ್ಕೆಯಾಗುವ ಅವಕಾಶ ಮಾಡಿಕೊಡಬೇಕು ಎಂದು ಕೋರಿ ಕೊಂಡಿದ್ದಾರೆ.

ನಮಗೆ ಅವಕಾಶ ಕೊಡಿ ಎಂದ ಹೊಸಬರು: ಈ ಮಧ್ಯೆ, ಕೆಲ ಹೊಸಬರು ತಮ್ಮದೇ ರೀತಿಯಲ್ಲಿ ಮನವಿ ಮುಂದಿಟ್ಟಿದ್ದಾರೆ. ಕೆಪಿಸಿಸಿ ಆಡಳಿತ ವಿಭಾಗದ ಪ್ರಧಾನ ಕಾರ್ಯದರ್ಶಿ ಶಫಿವುಲ್ಲಾ ಕೂಡ ಆಕಾಂಕ್ಷಿಯಾಗಿದ್ದು, ಪಕ್ಷಕ್ಕಾಗಿ ತಾವು ಸಾಕಷ್ಟು ದುಡಿದಿದ್ದು, ನನ್ನ ಸೇವೆಯನ್ನು ಪರಿಗಣಿಸಿ ಸಾಮಾನ್ಯ ಕಾರ್ಯಕರ್ತರಿಗೆ ನೀಡುವ ಅವಕಾಶದ ಕೋಟಾದಡಿ ಉಮೇದುವಾರಿಕೆ ಅವಕಾಶ ಕಲ್ಪಿಸಬೇಕೆಂದು ಕೋರಿಕೊಂಡಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ನಟರಾಜ್ ಗೌಡ ಕೂಡ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದು, ಯುವಕರಿಗೆ ಪಕ್ಷ ಅವಕಾಶ ನೀಡಬೇಕು. ಈ ಸಂಬಂಧ ಪಕ್ಷದ ರಾಜ್ಯ ನಾಯಕರ ಜೊತೆ ಚರ್ಚಿಸಿದ್ದು, ಅವಕಾಶ ಸಿಕ್ಕರೆ ಪ್ರತಿನಿಧಿಯಾಗಿ ವಿಧಾನಪರಿಷತ್​ ಪ್ರವೇಶಿಸುತ್ತೇನೆ ಎಂದಿದ್ದಾರೆ. ಒಟ್ಟಾರೆ ಕಾಂಗ್ರೆಸ್​ನಲ್ಲಿ ಲಭ್ಯವಿರುವ ಎರಡು ಸ್ಥಾನಕ್ಕಾಗಿ ನಿವೃತ್ತಿ ಆಗುತ್ತಿರುವ 10 ಸದಸ್ಯರ ಜೊತೆ ಇನ್ನೂ 30ಕ್ಕೂ ಹೆಚ್ಚು ಮಂದಿ ಹೊಸ ಆಕಾಂಕ್ಷಿಗಳು ಹಾಗೂ ಮಾಜಿ ಪರಿಷತ್ ಸದಸ್ಯರುಗಳು ಲಾಭಿ ನಡೆಸಿದ್ದಾರೆ. ಇವರಲ್ಲಿ ಇಬ್ಬರ ಆಯ್ಕೆ ನಿಜಕ್ಕೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸವಾಲಿನದ್ದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.