ETV Bharat / state

ಬೈಕ್ ಟಚ್ ಆಯ್ತು ಅಂತ ಕಿರಿಕ್‌: ಕೋಮಾಗೆ ಹೋದ ಸವಾರ - ಸಂಪಂಗಿರಾಮಗರ ಪೊಲೀಸ್ ಠಾಣಾ ವ್ಯಾಪ್ತಿ

ಮಾತಿನ ಚಕಮಕಿ ನಡೆಯುವಾಗ ತಳ್ಳಾಟದಲ್ಲಿ ಬಿದ್ದ ಪರಿಣಾಮ ಬಿಬಿಎಂಪಿ ನೌಕರ ಕೋಮಾ ತಲುಪಿದ್ದಾನೆ.

ಬೈಕ್ ಟಚ್ ಆಯ್ತು ಅಂತ ಕಿರಿಕ್‌
ಬೈಕ್ ಟಚ್ ಆಯ್ತು ಅಂತ ಕಿರಿಕ್‌
author img

By

Published : Sep 2, 2022, 4:42 PM IST

ಬೆಂಗಳೂರು: ಬೈಕ್ ಅಪಘಾತ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುವಾಗ ತಳ್ಳಾಟದಲ್ಲಿ ಬಿದ್ದ ಪರಿಣಾಮ ಬಿಬಿಎಂಪಿ ನೌಕರ ಕೋಮಾಗೆ ತಲುಪಿದ್ದಾನೆ. ಸೂರ್ಯ ಕೋಮಾ ಸ್ಥಿತಿಗೆ ತಲುಪಿದವ. ಈಗ ಇವರು ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಸ್ಟ್‌ 30 ರಾತ್ರಿ ಸಂಪಂಗಿರಾಮಗರ ಪೊಲೀಸ್ ಠಾಣಾ ವ್ಯಾಪ್ತಿಯ 14ನೇ ಕ್ರಾಸ್ ನಲ್ಲಿ ಬರುತ್ತಿದ್ದಾಗ ಮಂಜುನಾಥ್ ಎಂಬಾತನಿಗೆ ಬೈಕ್ ಟಚ್ಚಾಗಿತ್ತು.

ಇದಕ್ಕೆ ಗರಂ ಆದ ಮಂಜುನಾಥ್, ಬೈಕ್ ಸವಾರ ಸೂರ್ಯನಿಗೆ ಬೈಕ್​ ಅನ್ನು ಸರಿಯಾಗಿ ಓಡಿಸು ಎಂದಿದ್ದ. ತಕ್ಷಣ ಬೈಕ್ ನಿಲ್ಲಿಸಿದ ಸೂರ್ಯ ಮಂಜುನಾಥನ ಕೊರಳಪಟ್ಟಿ ಹಿಡಿದು ಜಗಳ ಶುರುಮಾಡಿದ್ದ.

ಬೈಕ್ ಟಚ್ ಆಯ್ತು ಅಂತ ಕಿರಿಕ್‌: ಕೋಮಾಗೆ ಹೋದ ಸವಾರ

ಈ ವೇಳೆ ಮಂಜುನಾಥನೂ ಕೂಡ ಸೂರ್ಯನ ಕೊರಳಪಟ್ಟಿ ಹಿಡಿದು ಜಗಳ ಮಾಡುವಾಗ ಆಯತಪ್ಪಿ ರಸ್ತೆಗೆ ಬಿದ್ದ ಸೂರ್ಯ ಮತ್ತೆ ಏಳಲೇ ಇಲ್ಲ. ಸೂರ್ಯನ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜುನಾಥ ಹಾಗೂ ಸೂರ್ಯನ ಜಗಳದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಸ್ ಆರ್ ನಗರ ಪೊಲೀಸರಿಂದ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಎಲ್ಲರ ಕೇಂದ್ರ ಬಿಂದುವಾದ ಅರ್ಜುನ ಆನೆ: ಗಮನ ಸೆಳೆಯುವ ತುಂಟಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.