ಬೆಂಗಳೂರು: ನಾಳೆಯಿಂದಲೇ ರಾಜ್ಯದ ಮಠಮಾನ್ಯಗಳಿಗೆ ಅನ್ನಭಾಗ್ಯದ ಅಕ್ಕಿ, ಗೋಧಿ ಪೂರೈಕೆ ಆರಂಭವಾಗಲಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಳೆಯಿಂದಲೇ ಅಕ್ಕಿ, ಗೋಧಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಪೂರೈಕೆಯಾಗುತ್ತಿದ್ದ ಪ್ರಮಾಣದಲ್ಲಿಯೇ ಅಕ್ಕಿ, ಗೋಧಿಗಳ ಪೂರೈಕೆಯನ್ನು ಆರಂಭಿಸುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟೇ ನಷ್ಟವಾದರೂ ಚಿಂತೆಯಿಲ್ಲ ಎಂದರು.
ಸಂಪುಟದಲ್ಲಿ ನಿರ್ಧಾರ:
ಇವತ್ತು ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ಇನ್ನು ಏನೇ ಅಡೆತಡೆ ಇದ್ದರೂ ಅವುಗಳನ್ನೂ ಬಗೆಹರಿಸಲಾಗುವುದು ಎಂದ ಅವರು, ಆಹಾರ ಧಾನ್ಯ ಪೂರೈಕೆ ಸ್ಥಗಿತ ಮಾಡಿದ ಬಗ್ಗೆ ಪ್ರತಿಕ್ರಿಯೆ ಕೊಡಲು ನಕಾರ ವ್ಯಕ್ತಪಡಿಸಿದರು. ಈಗ ಅದರ ಬಗ್ಗೆ ಚರ್ಚೆ ಬೇಡ ಅಂದರು.