ETV Bharat / state

‘ಖಾಕಿ ಅಂದ್ರೆ ಏನಂತ ಆರೋಪಿಗಳಿಗೆ ತಿಳಿಸಬೇಕು’: ಗಲಭೆ ಕುರಿತು ನಿವೃತ್ತ ಪೊಲೀಸ್​​​ ಅಧಿಕಾರಿಯ ಖಡಕ್​ ಮಾತು

ಬೆಂಗಳೂರು ಗಲಭೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿ ಬಸವರಾಜ್​​​​ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಇದು ಗುಪ್ತಚರ ಇಲಾಖೆ ವೈಫಲ್ಯ ಎಂದಿರುವ ಅವರು, ಆರೋಪಿಗಳನ್ನು ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಬೇಕು ಎಂದಿದ್ದಾರೆ.

Retired police officer talk on Bangalore riot case
‘ಖಾಕಿ ಅಂದ್ರೆ ಏನಂತ ಆರೋಪಿಗಳಿಗೆ ತಿಳಿಸಬೇಕು’: ಗಲಭೆ ಕುರಿತು ನಿವೃತ್ತ ಅಧಿಕಾರಿಯ ಖಡಕ್​ ಮಾತು
author img

By

Published : Aug 18, 2020, 1:29 PM IST

ಬೆಂಗಳೂರು: ಕೆ.ಜಿ.ಹಳ್ಳಿ ಮತ್ತು ಡಿ.ಜೆ‌.ಹಳ್ಳಿ ಘಟನೆಯನ್ನು ನಿವೃತ್ತ ಅಧಿಕಾರಿ ಬಸವರಾಜ್ ಮಾಲ್ಗತ್ತಿ ಖಂಡಿಸಿದ್ದಾರೆ. ಘಟನೆಯಲ್ಲಿ ಎಸ್​​ಡಿಪಿಐ ಪಾತ್ರ ಇರೋದನ್ನು ಗೃಹ ಇಲಾಖೆ ಕೂಡ ಸ್ಪಷ್ಟಪಡಿಸಿದೆ. ಹೀಗಾಗಿ ಈ ಹಿಂದೆ ಮಂಗಳೂರು ಗಲಭೆ, ಮೈಸೂರು ಗಲಭೆ ಬಗ್ಗೆ ತನಿಖೆ ನಡೆಸಿ ರಿಪೋರ್ಟ್ ನೀಡಿದ್ದರೂ ಬ್ಯಾನ್ ಆಗಿಲ್ಲ. ಸದ್ಯ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಗಲಭೆ ಸಂಬಂಧ ನಿವೃತ್ತ ಅಧಿಕಾರಿ ಬಸವರಾಜ್ ಮಾಲ್ಗತ್ತಿ ಮಾತು

ಸರ್ಕಾರ ಬದಲಾದ ಹಾಗೆ ಕೇಸ್ ಮುಚ್ಚಿ ಹಾಕೋದು ಅಲ್ಲ. ಈ ಹಿಂದಿನ ಸರ್ಕಾರ ಬದಲಾದ ಹಾಗೆ ಕೇಸ್​ಗಳು‌ ಮುಚ್ಚಿ ಹೋಗುತ್ತಿವೆ. ಸದ್ಯ ಈ ಘಟನೆ ನಿವೃತ್ತ ಅಧಿಕಾರಿಯಾಗಿ ನ‌ನಗೆ ಬೇಸರ ತಂದಿದೆ ಎಂದಿದ್ದಾರೆ.

ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದವನು. ಇಂತಹ ಕೃತ್ಯವನ್ನು ನಾನು ಯಾವತ್ತೂ ನೋಡಿಲ್ಲ. ಘಟನೆಯಲ್ಲಿ ಭಾಗಿಯಾದವರು ಮನುಷ್ಯರಾ? ಘಟನೆ ನಡೆದಾಗ ಜನಸಾಮಾನ್ಯರಿಗೆ ರಕ್ಷಣೆ ಕೊಡುವ ಪೊಲೀಸರೇ ಅಡಗಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾದರೆ ಜನಸಾಮಾನ್ಯರ ಕಥೆ ಏನು? ಶಾಸಕರು, ಜನಪ್ರತಿನಿಧಿಗಳು ನಮ್ಮ ರಾಜ್ಯದಲ್ಲಿ ಸುಪ್ರೀಂ ಇದ್ದ ಹಾಗೆ. ಅವರ‌ ಮನೆಯನ್ನೇ ಸುಡುತ್ತಾರೆ ಎಂದಾದರೆ ಜನಸಾಮಾನ್ಯರ ಕಥೆ ಏನು? ಈ ಘಟನೆ ಬಗ್ಗೆ ಕೆಲ ರಾಜಾಕಾರಣಿಗಳು ಸರಳವಾಗಿ ಮಾತಾಡುತ್ತಾರೆ. ಯಾವುದೇ ಪಕ್ಷ, ಜಾತಿ, ಧರ್ಮ ಆದರೂ ನೀಚ ಕೆಲಸ ಮಾಡಿದವರಿಗೆ ಶಿಕ್ಷೆ ಆಗಬೇಕು.

ಹಾಗೆಯೇ ಸ್ಟೇಷನ್ ಎದುರು ಕೆಲವರು ಅಮಾಯಕರನ್ನು ಅರೆಸ್ಟ್ ಮಾಡಿದ್ದಾಗಿ ಹೇಳುತ್ತಿದ್ದಾರೆ. ಅಮಾಯಕರಾದರೆ ಘಟನಾ ಸ್ಥಳಕ್ಕೆ ಯಾಕೆ ಬರ್ತಾರೆ? ತನಿಖೆ ವೇಳೆ ಅಮಾಯಕರು ಎಂದು ಗೊತ್ತಾದರೆ ಖಂಡಿತಾ ಹೊರಗಡೆ ಬಿಡುತ್ತಾರೆ ಎಂದಿದ್ದಾರೆ.

ಘಟನೆ ನಡೆದಾಗ ಸ್ಥಳದಲ್ಲಿಯೇ ಇರುತ್ತಾರೆ, ಆದರೆ ಬಳಿಕ ನಾಟಕ ಮಾಡುತ್ತಾರೆ. ಸಾಕಷ್ಟು ಸಾಕ್ಷ್ಯ ಇದೆ.‌‌ ಹೀಗಾಗಿ ಘಟನೆ ಸಂಬಂಧ ತನಿಖೆ ನಡೆಸಲು ಪೊಲೀಸರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಇರುವ ಕಾರಣ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಹಾಗೆಯೇ ಘಟನೆಯಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಗುಪ್ತಚರ ಇಲಾಖೆಗೆ ‌ಮೊದಲೇ ಇದರ ಬಗ್ಗೆ ಗೊತ್ತಿರಬೇಕಿತ್ತು‌ ಘಟನೆಗೆ ಕಾರಣಕರ್ತನಾದ ನವೀನ್ ಪೋಸ್ಟ್ ಹಾಕಿದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.