ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ಜವಾಬ್ದಾರಿಯುವ ಹುದ್ದೆಯಲ್ಲಿರುವ ರಾಜಕೀಯ ನಾಯಕರು ಬಂಡಾಯ ಎದ್ದಿರುವುದು ಸರಿಯಲ್ಲ. ಅನ್ಯಾಯವಾಗಿದ್ರೆ ಬೇರೆ ದಾರಿಯಿದೆ. ಮೊದಲು ಜನರಿಗಾಗಿ ಕೆಲಸ ಮಾಡುವಂತೆ ಹಿರಿಯ ನಿವೃತ್ತ ಅಧಿಕಾರಿ ಮಾಲಗತ್ತಿ ತಿಳಿಸಿದರು.
ಈ ಕುರಿತಂತೆ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ ಮಾತನಾಡಿ, ಮಹಾಮಾರಿಯಿಂದಾಗಿ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಉದ್ಯೋಗವಿಲ್ಲದೆ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯ ಜನತೆಯ ಸಮಸ್ಯೆ ಪರಿಹರಿಸಬೇಕಾದ ರಾಜಕಾರಣಿಗಳು ಅಧಿಕಾರ ದಾಹಕ್ಕೆ ಜೋತು ಬಿದ್ದಿದ್ದು, ನಾಯಕರು ಸರ್ಕಾರದ ಸವಲತ್ತುಗಳನ್ನು ತಮ್ಮ ಜೇಬಿಗೆ ತುಂಬಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜನರಿಗೆ ಕೇಂದ್ರದ ಕಾರ್ಮಿಕ ಮಂತ್ರಿ ಯಾರು?ಎಲ್ಲಿದ್ದಾರೆ ಎನ್ನುವುದೆ ಗೊತ್ತಿಲ್ಲ. ಸರಿಯಾದ ವ್ಯವಸ್ಥೆ ಮಾಡದೆ ಇರುವುದರಿಂದ ಕಷ್ಟಪಟ್ಟು ದುಡಿಯುವ ಕಾರ್ಮಿಕರು ಅನ್ನ, ನೀರಿಲ್ಲದೆ ಬಿಸಿಲಿನ ಬೇಗೆಯಲ್ಲಿ ಪುಟ್ಟ ಕಂದಮ್ಮಗಳನ್ನು ಹೊತ್ತುಕೊಂಡು ವಲಸೆ ಹೋಗುತ್ತಿದ್ದಾರೆ. ಇದು ನಾಯಕರ ಕಣ್ಣಿಗೆ ಕಾಣುತ್ತಿಲ್ವಾ ಎಂದು ಪ್ರಶ್ನಿಸಿದು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಹಿರಿ ವಯಸ್ಸಿನಲ್ಲೇ ಈ ಕೊರೊನಾ ನಿಯಂತ್ರಣದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಆದರೆ ನಾಯಕರು ಬಂಡಾಯ ಎದಿದ್ದಾರೆ. ಈ ಸಮಯದಲ್ಲಿ ಈ ರೀತಿ ಮಾಡಬಾದರು. ಅನ್ಯಾಯವಾಗಿದ್ರೆ ಬೇರೆ ದಾರಿ ಇದೆ. ಜನರಿಗೋಸ್ಕರ ಕೆಲಸ ಮಾಡಿ ಎಂದು ತಿಳಿಸಿದರು.