ETV Bharat / state

ನಿವೃತ್ತ ಐಪಿಎಸ್ ಅಧಿಕಾರಿ ಬ್ಯಾಂಕ್ ಅಕೌಂಟ್ ಹ್ಯಾಕ್: 2.13 ಲಕ್ಷ ರೂ. ಎಗರಿಸಿದ‌ ಹ್ಯಾಕರ್ಸ್​​!

author img

By

Published : Feb 26, 2021, 9:39 PM IST

ನಿವೃತ್ತ ಪೊಲೀಸ್​​ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಅವರ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಖಾತೆಯನ್ನು ಹ್ಯಾಕರ್​ಗಳು ಹ್ಯಾಕ್​ ಮಾಡಿ, 2.13 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ. ಸೈಬರ್ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹ್ಯಾಕರ್ಸ್​​
ಹ್ಯಾಕರ್ಸ್​​

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಬ್ಯಾಂಕ್ ಖಾತೆಯನ್ನು ಹ್ಯಾಕರ್​ಗಳು ಹ್ಯಾಕ್‌ ಮಾಡಿ 2.13 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ.

ವಂಚನೆ ಸಂಬಂಧ ದೂರಿನ ಮೇರೆಗೆ ನಗರ‌ ಪೂರ್ವ ವಿಭಾಗದ ಸೈಬರ್ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಗರದ ರಿಚರ್ಡ್​ ಟೌನ್​ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್​ಬಿಐ) ಬ್ಯಾಂಕ್‌ ಖಾತೆ ಹೊಂದಿರುವ ಅಜಯ್ ಕುಮಾರ್ ಅವರ ಮೊಬೈಲ್‌ ನಂಬರಿಗೆ 50ಕ್ಕೂ ಹೆಚ್ಚು ಒಟಿಪಿ ಬಂದಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಅಷ್ಟರಲ್ಲೇ ಅದರ ವ್ಯಾಲಿಡಿಟಿ ಮುಗಿದಿತ್ತು.

ಓದಿ:ಮಹಜರಿಗೆ ಕರೆದುಕೊಂಡು ಹೋದಾಗ ಪತ್ನಿ-ಮಗಳ ಕಂಡು ಮುಜುಗರ: ಕಟ್ಟಡದಿಂದ ಹಾರಿ ಆರೋಪಿ ಆತ್ಮಹತ್ಯೆ!

ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿಕೊಂಡು ಸುಮಾರು 60ಕ್ಕೂ ಹೆಚ್ಚು ಬಾರಿ ವಹಿವಾಟು ಮಾಡಿ, 2.13 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ. ಈ ಸಂಬಂಧ ಹಣ ಕಡಿತಗೊಂಡಿರುವ ಬಗ್ಗೆ ಬ್ಯಾಂಕ್​ನಿಂದ ಆಲರ್ಟ್ ಮೆಸೇಜ್ ಬಂದಿತ್ತು. ಈ ಬಗ್ಗೆ ಅನುಮಾನಗೊಂಡು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ ಸೈಬರ್ ಖದೀಮರು ಹಣ ಎಗರಿಸಿರುವುದು ಗೊತ್ತಾಗಿದೆ‌. ಈ ಸಂಬಂಧ ಅಜಯ್ ಕುಮಾರ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.