ಬೆಂಗಳೂರು : ಪ್ರಾಮಾಣಿಕ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರ ಜೀವನ ಮತ್ತು ವೃತ್ತಿಯಲ್ಲಿ ತತ್ವಬದ್ಧ ಜೀವನವನ್ನು ನಡೆಸುತ್ತಿದ್ದರು. ವಿಧಿ ಅವರನ್ನ ನಮ್ಮಿಂದ ಕಸಿದುಕೊಂಡಿತು. ಅವನು ನನಗೆ ಮಗನಿಗಿಂತ ಹೆಚ್ಚು ಎಂದು ಮಧುಕರ್ ಶೆಟ್ಟಿ ಅವರನ್ನು ನಿವೃತ್ತ ಐ ಜಿ ಶಂಕರ್ ಬಿದರು ಸ್ಮರಿಸಿಕೊಂಡಿದ್ದಾರೆ.
ವರ್ತುರ್ ಕೋಡಿ ಸರ್ಕಲ್ಗೆ ಮಧುಕರ್ ಶೆಟ್ಟಿ ಸರ್ಕಲ್ ಎಂದು ಹೆಸರಿಸಲು ಬಿಬಿಎಂಪಿ ಕಳುಹಿಸಿದ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ತಿರಸ್ಕರಿಸಿದೆ ಎಂದು ಈಗ ನನಗೆ ತಿಳಿದು ಹಿಂಸೆಯಾಗುತ್ತಿದೆ. ಪ್ರಾಮಾಣಿಕ ಅಧಿಕಾರಿಯ ಸ್ಮರಣೆಯನ್ನು ಶಾಶ್ವತಗೊಳಿಸುವ ಈ ಉದಾತ್ತ ಪ್ರಸ್ತಾಪವನ್ನು ತಿರಸ್ಕರಿಸಲು ಕಾರಣಗಳೇನು? ಎಂದು ನಾನು ಈಗಲೂ ಯೋಚಿಸುತ್ತಿದ್ದೇನೆ. ತತ್ವಬದ್ಧ ಅಧಿಕಾರಿ, ತಮ್ಮ ವೃತ್ತಿಜೀವನದಲ್ಲಿ ಕಷ್ಟಪಟ್ಟು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು ಎಂದರು.
ಈಗಿರುವ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಬಗ್ಗೆ ಯಾವುದೇ ಕಾಳಜಿ ಮತ್ತು ಗೌರವವಿಲ್ಲ ಮತ್ತು ಪ್ರಾಮಾಣಿಕ ಅಧಿಕಾರಿಗಳ ಸ್ಮರಣೆಯನ್ನು ಶಾಶ್ವತಗೊಳಿಸುವ ಯಾವುದೇ ಉದ್ದೇಶ ಕಂಡುಬರುತ್ತಿಲ್ಲ ಎಂದ ಅವರು, ಅಂದಿನ ಮುಖ್ಯಮಂತ್ರಿಗಳಾದ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಜಟ್ಟಿ, ಕಂಠಿ , ಹೆಗ್ಡೆ, ವೀರೇಂದ್ರ ಪಾಟೀಲ್ ಮತ್ತು ಬೊಮ್ಮಾಯಿ ಪ್ರಾಮಾಣಿಕ ಅಧಿಕಾರಿಗಳನ್ನು ಗೌರವಿಸುತ್ತಿದ್ದರು ಎಂದು ತಿಳಿಸಿದರು.
ಮಧುಕರ್ ಒಬ್ಬ ತನ್ನ ತಂದೆಗೆ ತೋರಿಸಬಹುದಾದ ಪ್ರೀತಿ ಮತ್ತು ಗೌರವದಂತೆ ನನ್ನನ್ನು ಉಪಚರಿಸುತ್ತಿದ್ದನು ಎಂದ ಅವರು, ಗೋ ಹತ್ಯೆ ನಿಷೇಧ ಕಾನೂನು ಬಗೆಗಿನ ಪ್ರೆಶ್ನೆಗೆ ಉತ್ತರಿಸುತ್ತಾ, ಇದು ಮೈಸೂರು ಮಹಾರಾಜರ ಕಾಲದಿಂದಲೂ ಜಾರಿಯಲ್ಲಿದ್ದು, ಸ್ವಲ್ಪ ಬದಲಾವಣೆ ಮಾಡಿ 1960ರಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿತ್ತು. ಸಂತೋಷದಿಂದ ಈ ಕಾನೂನನ್ನು ಸ್ವಾಗತಿಸುತ್ತೇನೆ ಎಂದರು.