ETV Bharat / state

ದೂರು ನೀಡಿದ ಅಸಮಾಧಾನ.. ಯುವಕನ ಮೇಲೆ ನಿವೃತ್ತ ಸರ್ಕಾರಿ ಅಧಿಕಾರಿ ಕುಟುಂಬದಿಂದ ಹಲ್ಲೆ.. - ಯುವಕನ ಮೇಲೆ ನಿವೃತ್ತ ಸರ್ಕಾರಿ ಅಧಿಕಾರಿ ಕುಟುಂಬದಿಂದ ಹಲ್ಲೆ

ಇತ್ತೀಚಿಗೆ ರೆಹಮಾನ್​​​ ತನ್ನ ಮನೆಯ ಮೇಲ್ಭಾಗದಲ್ಲಿ ಕೊಠಡಿ ನಿರ್ಮಾಣ ಕಾರ್ಯ ಆರಂಭಿಸಿದ್ದನು. ಆಗ ತಮ್ಮ ಕಟ್ಟಡದ ಗೋಡೆಯಿಂದ 6 ಅಡಿ‌ ಅಂತರ ಕಾಪಾಡುವಂತೆ ಶಮೀವುಲ್ಲಾ ಫ್ಯಾಮಿಲಿ ಜಗಳವಾಡಿತ್ತು. 3 ಅಡಿ ಅಂತರ ಬಿಟ್ಟಿದ್ದಕ್ಕೆ 6 ಅಡಿ ಬಿಡುವಂತೆ ಸುಖಾಸುಮ್ಮನೆ ಕಿರಿಕ್ ತೆಗೆದಿದೆ..

Retired govt officer family attack on a young man in Bangalore
ಯುವಕನ ಮೇಲೆ ನಿವೃತ್ತ ಸರ್ಕಾರಿ ಅಧಿಕಾರಿ ಕುಟುಂಬದಿಂದ ಹಲ್ಲೆ
author img

By

Published : Aug 15, 2021, 4:00 PM IST

Updated : Aug 15, 2021, 4:26 PM IST

ಬೆಂಗಳೂರು : ವಂಚನೆ ಸಂಬಂಧ ದೂರು ನೀಡಿದಕ್ಕೆ ಕ್ಯಾತೆ ತೆಗೆದು ನಿವೃತ್ತ ಸರ್ಕಾರಿ ಅಧಿಕಾರಿಯ ಕುಟುಂಬವೊಂದು ಯುವಕನ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿ ನಡೆಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಘಟನೆಯ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯ ಕುರಿತಾದ ಸಿಸಿಟಿವಿ ದೃಶ್ಯ

ರೆಹಮಾನ್ ಹಲ್ಲೆಗೊಳಗಾದ ಯುವಕ. ಇಲ್ಲಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಆರ್ ಕೆ ಹೆಗಡೆ ನಗರದಲ್ಲಿ ನಿವೃತ್ತ ಕಾರ್ಮಿಕ ಆಯೋಗದ ಆಯುಕ್ತ ಶಮೀವುಲ್ಲಾ ಷರೀಫ್ ಕುಟುಂಬದ ಸದಸ್ಯರು ಯುವಕನನ್ನು ಥಳಿಸಿ ಮನ ಬಂದಂತೆ ರಾಡ್​​​ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಯುವಕ ರೆಹಮಾನ್ ತಾಯಿ ವೃತ್ತಿಯಲ್ಲಿ ವಕೀಲರು. ಇವರನ್ನು ಯಾಮಾರಿಸಿ ಪಕ್ಕದ ಮನೆಯ ಶಮೀವುಲ್ಲಾ ನಿವೇಶನ ಲಪಟಾಯಿಸಿದ್ದನಂತೆ. ಈ ಕುರಿತಂತೆ ಆತನ ವಿರುದ್ಧ ರೆಹಮಾನ್ ಲೋಕಾಯುಕ್ತರಿಗೆ ದೂರು ನೀಡಿದ್ದನು.

ಇತ್ತೀಚಿಗೆ ರೆಹಮಾನ್​​​ ತನ್ನ ಮನೆಯ ಮೇಲ್ಭಾಗದಲ್ಲಿ ಕೊಠಡಿ ನಿರ್ಮಾಣ ಕಾರ್ಯ ಆರಂಭಿಸಿದ್ದನು. ಆಗ ತಮ್ಮ ಕಟ್ಟಡದ ಗೋಡೆಯಿಂದ 6 ಅಡಿ‌ ಅಂತರ ಕಾಪಾಡುವಂತೆ ಶಮೀವುಲ್ಲಾ ಫ್ಯಾಮಿಲಿ ಜಗಳವಾಡಿತ್ತು. 3 ಅಡಿ ಅಂತರ ಬಿಟ್ಟಿದ್ದಕ್ಕೆ 6 ಅಡಿ ಬಿಡುವಂತೆ ಸುಖಾಸುಮ್ಮನೆ ಕಿರಿಕ್ ತೆಗೆದಿದೆ.

complaint copy
ದೂರಿನ ಪ್ರತಿ

ಇದರ ಜೊತೆಗೆ ತಮ್ಮ ಮೇಲೆ ದೂರು ನೀಡಿದ ಕೋಪದಲ್ಲಿದ್ದ ಶಮೀವುಲ್ಲಾ ಫ್ಯಾಮಿಲಿ ಕಟ್ಟಡದ ನಿರ್ಮಾಣವನ್ನು ನೆಪವಾಗಿಟ್ಟುಕೊಂಡು ಇಂದು ಯುವಕನ ಮೇಲೆ ಹಲ್ಲೆ ಮಾಡಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಓದಿ: ಕಬಕ ಗ್ರಾಪಂನಲ್ಲಿ ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ : ಮೂವರು SDPI ಕಾರ್ಯಕರ್ತರ ಬಂಧನ

ಈ ಸಂಬಂಧ ನಗರದ ಸಂಪಿಗೆಹಳ್ಳಿ ಪೊಲೀಸ್​​ ಠಾಣೆಯಲ್ಲಿ ರೆಹಮಾನ್ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಮಡಿದ್ದಾರೆ.

Last Updated : Aug 15, 2021, 4:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.