ಬೆಂಗಳೂರು: ಆಯಾ ರಾಜ್ಯದ ಸಮಸ್ಯೆಗಳು ಬೇರೆ ಬೇರೆ. ಹೀಗಾಗಿ ಈ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮತಗಟ್ಟೆ ಸಮೀಕ್ಷೆ ವಿಚಾರವಾಗಿ ಮಾತನಾಡುತ್ತಾ, ಡಿಸೆಂಬರ್ 8ರ ವರೆಗೆ ಕಾಯೋಣ ಇರಿ ಎಂದರು.
ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಮತಗಳನ್ನು ಪಡೆಯುತ್ತಿದೆ ಎಂಬುದು ನಿಜ. ಆಮ್ ಆದ್ಮಿ ಪಾರ್ಟಿ ಈಟಿಂಗ್ ದಿ ಕಾಂಗ್ರೆಸ್ ವೋಟ್ಸ್ ಎಂದು ಅವರು ಪ್ರತಿಕ್ರಿಯಿಸಿದರು.
ಬೆಳಗಾವಿ ಗಡಿ ವಿವಾದ ವಿಚಾರವಾಗಿ ಮಾತನಾಡಿ, ಗಡಿ ಭಾಗದ ವಿವಾದವನ್ನು ಜೀವಂತವಾಗಿಡಲು ಮಹಾರಾಷ್ಟ್ರದವರು ಹೀಗೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಮಹಾಜನ್ ಮಹಾರಾಷ್ಟ್ರದವರು, ಅವರೇ ಕೊಟ್ಟ ವರದಿ ಒಪ್ಪಿಲ್ಲ ಅಂದ್ರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ :ಭರವಸೆಯಾಗಿಯೇ ಉಳಿದ ಮಾತು: ಇನ್ನೂ ಪ್ರಕಟವಾಗದ ಕೈ, ತೆನೆ ಅಭ್ಯರ್ಥಿಗಳ ಪಟ್ಟಿ