ಬೆಂಗಳೂರು : ಮೆಡಿಕಲ್ ಕಾಲೇಜಿನ ಎದುರು ಇಂದು ರೆಸಿಡೆಂಟ್ ವೈದ್ಯರು ಪ್ರತಿಭಟನೆ ನಡೆಸಿದ್ರು. ಕರ್ನಾಟಕದಲ್ಲಿ ಇರುವ ಕಿರಿಯ ವೈದ್ಯರು ಹಾಗೂ ನಿವಾಸಿ ವೈದ್ಯರು ಸೇರಿ 14 ವೈದ್ಯಕೀಯ ಕಾಲೇಜಿನಲ್ಲಿ ಈ ಮುಷ್ಕರ ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರ 9 ತಿಂಗಳು ನಮ್ಮನ್ನು ಕೋವಿಡ್ ಕೆಲಸದಲ್ಲಿ ದುಡಿಸಿಕೊಂಡಿದೆ. ಹಾಗಾಗಿ ನಮಗೆ ಕೋವಿಡ್ ಭತ್ಯೆ ನೀಡಬೇಕು ಎಂದು ಡಾ. ದಯಾನಂದ ಸಾಗರ್ ಒತ್ತಾಯಿಸಿದರು.
ಇದನ್ನು ಓದಿ:ಪೊಲೀಸರ ಮೇಲೆ ಹಲ್ಲೆ ಆರೋಪ : ಎಂಎಲ್ಸಿ ಪುತ್ರ ಸೇರಿ ಮೂವರು ಪೊಲೀಸರ ವಶಕ್ಕೆ
ಶಾಲಾ ಮಕ್ಕಳಿಗೆ ಫೀಸ್ ಪಡೆಯಬೇಡಿ ಎಂದು ಸರ್ಕಾರ ತಾಕೀತು ಮಾಡುತ್ತೆ. ಆದರೆ, ಪಿಜಿ ವಿದ್ಯಾರ್ಥಿಗಳ ಬಳಿ ಶುಲ್ಕ ಕಟ್ಟುವಂತೆ ಹೇಳುತ್ತೆ. ಇದು ಯಾವ ರೀತಿ ನ್ಯಾಯ ಎಂದು ಪ್ರಶ್ನೆ ಮಾಡಿದರು.
ಯಾವುದೇ ವೈದ್ಯರು ಕೆಲಸ ನಿಲ್ಲಿಸಿಲ್ಲ. ಬದಲಿಗೆ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ನಿನ್ನೆ ಟ್ವಿಟರ್ ಅಭಿಯಾನ, ಇಂದು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಮುಷ್ಕರ, ಮುಂದಿನ ದಿನದಲ್ಲಿ ಸರ್ಕಾರಕ್ಕೆ ತಟ್ಟೆ ಜಾಗಟೆ ಹಿಡಿದು ಬಡಿದೆಬ್ಬಿಸುವ ಕೆಲಸ ಮಾಡುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.