ETV Bharat / state

ಮತ್ತೊಮ್ಮೆ ಭುಗಿಲೆದ್ದ ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ: ಗಣರಾಜ್ಯೋತ್ಸವಕ್ಕೆ ಹಿಂದೂ ಜನ ಜಾಗೃತಿ ಸಮಿತಿ ಪಟ್ಟು - ಈದ್ಗಾ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ

ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಮತ್ತೆ ಮುನ್ನೆಲೆಗೆ - ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ಕೊಡುವಂತೆ ಹಿಂದೂ ಜನ ಜಾಗೃತಿ ಸಮಿತಿ ಮನವಿ.

Chamarajpet Idga Maidan
ಈದ್ಗಾ ಮೈದಾನದ ವಿವಾದ
author img

By

Published : Jan 7, 2023, 9:19 PM IST

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಅವಕಾಶ ಕೋರಿ ಮನವಿ

ಬೆಂಗಳೂರು: ಇಷ್ಟು ದಿನ ತಣ್ಣಗಾಗಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಜನವರಿ 26ರ ಗಣರಾಜ್ಯೋತ್ಸವವನ್ನು ಈದ್ಗಾ ಮೈದಾನದಲ್ಲಿ ಆಚರಣೆ ಮಾಡಲು ಅವಕಾಶ ಕೊಡಬೇಕು ಎಂದು ಹಿಂದು ಜನ ಜಾಗೃತಿ ವೇದಿಕೆಯ ಮೋಹನ್ ಗೌಡ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ಪತ್ರದ ಮೂಲಕ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಮನವಿ ಮಾಡಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯಂತೆ ಗಣರಾಜ್ಯೋತ್ಸವ ಕೂಡ ನಡೆಯಬೇಕು ಎಂದು ವಿಡಿಯೋ ಸಂದೇಶ ನೀಡಿದ್ದಾರೆ.

ಸರಕಾರಕ್ಕೆ ಇಕ್ಕಟ್ಟಿನ ಸಂಗತಿ: ಮತ್ತೆ ಈದ್ಗಾ ಮೈದಾನದ ವಿಚಾರ ಮುನ್ನೆಲೆಗೆ ಬಂದಿರುವುದು ಸರ್ಕಾರಕ್ಕೆ ಹೊಸ ತಲೆನೋವು ಉಂಟಾದಂತಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರ ಗಣರಾಜ್ಯೋತ್ಸವಕ್ಕೆ ಅನುಮತಿ ನೀಡುತ್ತಾ ಎಂದು ಕಾದು ನೋಡಬೇಕಿದೆ. ಸದ್ಯ ಈ ಸಂಗತಿ ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿಸಿದೆ.

ಈದ್ಗಾ ಮೈದಾನ ಯಾರಿಗೆ ಸೇರಿದ್ದು ಎಂಬ ವಿವಾದ: ಬೆಂಗಳೂರಿನ ಈದ್ಗಾ ಮೈದಾನ ಯಾರಿಗೆ ಸೇರಿದ್ದು ಎಂಬ ವಿವಾದ ಎದ್ದಿತ್ತು. ಬಿಬಿಎಂಪಿ ಮತ್ತು ವಕ್ಫ್​ ಬೋರ್ಡ್​ ನಡುವೆ ವಿವಾದ ಉಂಟಾಗಿತ್ತು. ಹಿಂದೂ ಸಂಘಟನೆಗಳು ಇದೊಂದು ಆಟದ ಮೈದಾನ ಇಲ್ಲಿ ಹಿಂದೂ ಹಬ್ಬಗಳ ಆಚರಣೆ ಅವಕಾಶ ಮಾಡಿ ಕೊಡ ಬೇಕು ಎಂದು ಪಟ್ಟು ಹಿಡಿದಿದ್ದವು.

ಹಿಂದೂ ಸಂಘಟನೆಗಳ ಬೇಡಿಕೆಗೆ ಮೈದಾನದ ವಿಚಾರದಲ್ಲಿ ಬಿಬಿಎಂಪಿ ತಟಸ್ಥ ನಿಲುವು ತಾಳಿತ್ತು. ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಹಿಂದೂ ಆಚರಣೆಗಳಿಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದವು ಈ ಬಗ್ಗೆ ಹಿಂದೂ ಪರ ಸಂಘಟನೆಗಳು ಕೋರ್ಟ್​ ಮಟ್ಟಿಲೇರಿದ್ದವು.

ಕೋರ್ಟ್​ನಲ್ಲಿ ವಿವಾದ ನಡೆಯುವಾಗ ಈದ್ಗಾ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು ಎಂದು ತಿಳಿದು ಬಂದಿತ್ತು. ಎರಡೂವರೆ ಎಕರೆ ವಿಸ್ತಾರದ ಚಾಮರಾಜಪೇಟೆಯ ಆಟದ ಮೈದಾನ ಆಸ್ತಿಯನ್ನು ವಕ್ಫ್ ಮಂಡಳಿ ಹೆಸರಿಗೆ ಖಾತಾ ಮಾಡಿಕೊಡುವಂತೆ ಕಳೆದ ವರ್ಷ ಜೂನ್ 21 ರಂದು ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಯು ವಕ್ಫ್ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ಮಾಲೀಕತ್ವ ದೃಢಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು.

ಬಿಬಿಎಂಪಿಯು ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಣೆ ಮಾಡಿದ ನಂತರ ಉಂಟಾದ ವಿವಾದಗಳ ನಡುವೆಯೇ ರಾಜ್ಯ ಸರ್ಕಾರದ ಪರ ವಿವಾದಿತ ಸ್ಥಳದಲ್ಲಿ ಉಪ ವಿಭಾಗಾಧಿಕಾರಿಗಳು ಕಳೆದ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ವೇಳೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದರು.

ಸ್ವಾತಂತ್ಯದ ಧ್ವಜಾರೋಹಣದ ನಂತರ ಹಿಂದೂ ಜಾಗರಣಾ ವೇದಿಕೆಗಳು ಗಣಪತಿ ಹಬ್ಬದ ಆಚರಣೆಗೆ ಅವಕಾಶ ಮಾಡಿಕೊಡುಂತೆ ಕೇಳಿದ್ದವು. ಈ ವಿಚಾರವಾಗಿ ಕೋರ್ಟ್​ ಮೆಟ್ಟಿಲನ್ನೂ ಏರಿದ್ದರು. ಆದರೆ ರಾಜ್ಯ ಹೈಕೋರ್ಟ್​ ಆಚರಣೆಗೆ ಅವಕಾಶ ನೀಡದೇ ತಟಸ್ಥತೆ ಕಾಪಾಡಿಕೊಳ್ಳುವಂತೆ ಆದೇಶಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್​ಗೆ ಮನವಿ ಸಲ್ಲಿಸಲಾಗಿತ್ತು. ಸುರ್ಪಿಂ ಕೋರ್ಟ್​ ಕೂಡ ಗಣೇಶ ಹಬ್ಬ ಆಚರಣೆ ವೇಳೆ ಯಾಥಾಸ್ಥಿತಿ ಕಾಯ್ದುಕೋಳ್ಳುವಂತೆ ಸೂಚನೆ ನೀಡಿತ್ತು. ಅದರಂತೆ ಗಣೇಶ ಹಬ್ಬಕ್ಕೆ ಅವಕಾಶ ದೊರೆತಿರಲಿಲ್ಲ. ಈಗ ರಾಷ್ಟ್ರೀಯ ಹಬ್ಬದ ಆಚರಣೆಗಾಗಿ ಸಂಘಟನೆ ಮನವಿ ಸಲ್ಲಿಸಿದ್ದು, ಸರ್ಕಾರ ಯಾವ ರೀತಿಯ ನಿರ್ಣಯ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಓಬವ್ವ ಜಯಂತಿ ಆಚರಿಸಲ್ಲ: ರಿಪಬ್ಲಿಕ್ ಪಾರ್ಟಿ ಆಫ್​ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.