ETV Bharat / state

ನಾಳೆ ಧಾರ್ಮಿಕ ಕ್ಷೇತ್ರಗಳು ದರ್ಶನಕ್ಕೆ ಮುಕ್ತ: ಮುತುವರ್ಜಿಗೆ ಸಿಎಂ ಸೂಚನೆ - bangalore news

ನಾಳೆಯಿಂದ ರಾಜ್ಯದ ಧಾರ್ಮಿಕ ಕ್ಷೇತ್ರಗಳು ದರ್ಶನಕ್ಕೆ ಮುಕ್ತವಾಗುತ್ತಿದ್ದು, ಭಕ್ತರಿಗೆ ತೊಂದರೆಯಾಗಬಾರದು ಹಾಗೂ ಕೊರೊನಾ ಮಾರ್ಗಸೂಚಿ ನಿಯಮ ಉಲ್ಲಂಘನೆ ಆಗದಂತೆ ಸಕಲ ವ್ಯವಸ್ಥೆ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
author img

By

Published : Jun 7, 2020, 6:18 PM IST

Updated : Jun 8, 2020, 6:19 AM IST

ಬೆಂಗಳೂರು: ಲಾಕ್​​ಡೌನ್ ನಂತರ ಮೊದಲ ಬಾರಿಗೆ ನಾಳೆಯಿಂದ ರಾಜ್ಯದ ಧಾರ್ಮಿಕ ಕ್ಷೇತ್ರಗಳು ದರ್ಶನಕ್ಕೆ ಮುಕ್ತವಾಗುತ್ತಿದ್ದು, ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾಹಿತಿ ಪಡೆದುಕೊಂಡಿದ್ದು, ಹೆಚ್ಚಿನ ಮುತುವರ್ಜಿ ವಹಿಸುವಂತೆ ಸೂಚಿಸಿದ್ದಾರೆ.

ಕೊರೊನಾ ಮುಂಜಾಗ್ರತಾ ಕ್ರಮವಾಗಿ ಮುಚ್ಚಲ್ಪಟ್ಟಿದ್ದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದಂತೆ ಹಿಂದೂ ಧಾರ್ಮಿಕ ದತ್ತಿ ದೇವಾಲಯಗಳು ನಾಳೆಯಿಂದ ಭಕ್ತರಿಗೆ ಮುಕ್ತವಾಗುತ್ತಿವೆ. ವಕ್ಫ್ ಬೋರ್ಡ್ ವ್ಯಾಪ್ತಿಗೆ ಬರುವ ಮಸೀದಿಗಳು, ದರ್ಗಾಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಚರ್ಚ್​ಗಳು, ಬೌದ್ಧ, ಜೈನ, ಸಿಖ್, ಪಾರ್ಸಿ ಸೇರಿದಂತೆ ಸರ್ವ ಜನಾಂಗದ ಧಾರ್ಮಿಕ ಸ್ಥಳಗಳು ನಾಳೆಯಿಂದ ಕೊರೊನಾ ಮಾರ್ಗಸೂಚಿಯಂತೆ ತೆರೆಯುತ್ತಿವೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವಕ್ಫ್ ಸಚಿವ ಪ್ರಭು ಚೌವ್ಹಾಣ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್ ಅವರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ಧತಾ ಕ್ರಮಗಳ ಕುರಿತು ಸಮಗ್ರವಾದ ಮಾಹಿತಿ ಪಡೆದುಕೊಂಡರು.

ಭಕ್ತರಿಗೆ ತೊಂದರೆಯಾಗಬಾರದು ಹಾಗೂ ಕೊರೊನಾ ಮಾರ್ಗಸೂಚಿ ನಿಯಮ ಉಲ್ಲಂಘನೆ ಆಗದಂತೆ ಸಕಲ ವ್ಯವಸ್ಥೆ ಮಾಡಬೇಕು. ನಾಳೆ ಎಲ್ಲಾ ಕಡೆ ಗಮನ ಹರಿಸಿ ಪರಿಶೀಲನೆ ನಡೆಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

ನಾಳೆಯಿಂದ ಮಾಲ್​​, ಹೋಟೆಲ್, ರೆಸ್ಟೋರೆಂಟ್​ಗಳು ಕೂಡ ಆರಂಭಗೊಳ್ಳುತ್ತಿದ್ದು, ಈ ಸಂಬಂಧವೂ ಹೆಚ್ಚಿನ ಗಮನ ಹರಿಸಬೇಕು. ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗಬಾರದು ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದರು. ನಾಳೆಯಿಂದ ನಗರದಲ್ಲಿ ದೇವಾಲಯ, ಪ್ರಾರ್ಥನಾ ಮಂದಿರಗಳು, ಚರ್ಚ್, ಮಸೀದಿ, ಹೋಟೆಲ್ ರೆಸ್ಟೋರೆಂಟ್​, ಮಾಲ್​ಗಳ ಆರಂಭಕ್ಕೆ ನಡೆಸಿರುವ ಸಿದ್ಧತೆಗಳ ಕುರಿತು ಸಿಎಂಗೆ ಮಾಹಿತಿ ನೀಡಿ ಕೆಲಕಾಲ ಚರ್ಚೆ ನಡೆಸಿದರು.

Last Updated : Jun 8, 2020, 6:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.