ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಶಿಸ್ತು ಪ್ರಾಧಿಕಾರ ಕಾಯ್ದೆಯ ತಿದ್ದುಪಡಿ ವಿಚಾರ ಸಂಬಂಧ ಹೊರಡಿಸಿದ್ದ ರಾಜ್ಯಪತ್ರದಲ್ಲಿ ಕಣ್ತಪ್ಪಿನಿಂದ ತಪ್ಪಾಗಿ ಪ್ರಕಟವಾಗಿದ್ದು, ಕೆಳದರ್ಜೆ ಪೊಲೀಸರಿಗೆ ಮೇಲ್ಮನವಿ ಸಲ್ಲಿಸದಂತೆ ಪ್ರಸ್ತಾವನೆಯಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
ಸಿಬ್ಬಂದಿ ಹಾಗೂ ಡಿವೈಎಸ್ಪಿ ಮಟ್ಟದ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಶಿಸ್ತುಕ್ರಮ ಜರುಗಿಸಿದಾಗ ಮೇಲ್ಮನವಿ ಸಲ್ಲಿಸಿದಂತೆ ಗೃಹ ಇಲಾಖೆಯು ನಿಯಾಮಾವಳಿಯಲ್ಲಿ ತಿದ್ದುಪಡಿ ಮಾಡಿತ್ತು. ಪೊಲೀಸ್ ವಲಯದಿಂದ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ತನ್ನ ಆದೇಶಕ್ಕೆ ತಡೆ ನೀಡಿದೆ. ಟೈಪಿಂಗ್ ತಪ್ಪಿನಿಂದ ಈ ಅವಘಡ ನಡೆದಿದ್ದು, ಕೂಡಲೇ ಹೊಸ ಆದೇಶ ಹೊರಡಿಸುವುದಾಗಿ ಟ್ವಿಟರ್ ಡಿಜಿ ತಿಳಿಸಿದ್ದಾರೆ.
(ಇದನ್ನೂ ಓದಿ: ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಹಕ್ಕಿಲ್ಲ: ಗೃಹ ಇಲಾಖೆ ನಡೆಗೆ ವಿರೋಧ)