ETV Bharat / state

ರೇಖಾ ಕದಿರೇಶ್ ಕೊಲೆ ಪ್ರಕರಣ : ಆರೋಪಿಗಳನ್ನು ಬಂಧಿಸಿದ್ದೇ ಬಲು ರೋಚಕ

ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆ ಆರೋಪಿಗಳ ಪತ್ತೆಗಾಗಿ ಆರು ವಿಶೇಷ ತಂಡ ರಚನೆ ಮಾಡಲಾಗಿತ್ತು. ನಿನ್ನೆ ರಾತ್ರಿ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಎಲ್ಲಾ ಪೊಲೀಸರು ಅರ್ಲಟ್ ಆಗಿದ್ದರು..

rekha-kadirash-murder-case-accused-arrest
ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳು
author img

By

Published : Jun 25, 2021, 3:57 PM IST

Updated : Jun 25, 2021, 5:50 PM IST

ಬೆಂಗಳೂರು : ಬಿಬಿಎಂಪಿ ಮಾಜಿ‌ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದೇ ಬಲು ರೋಚಕವಾಗಿದೆ. ಆರೋಪಿಗಳ ಹೆಡೆ ಮುರಿಕಟ್ಟಲು ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಆರು ತಂಡಗಳಾಗಿ ವಿಭಾಗಿಸಿ ನಿನ್ನೆ ರಾತ್ರಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.

ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಮಾತನಾಡಿದರು

ಕಾಟನ್‌ಪೇಟೆ, ಸಿಟಿ ಮಾರ್ಕೆಟ್, ಕಾಮಾಕ್ಷಿ ಪಾಳ್ಯ, ಉಪ್ಪಾರಪೇಟೆ, ಕಲಾಸಿಪಾಳ್ಯ, ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ಗಳು ತನಿಖೆ ಕೈಗೊಂಡಿದ್ದರು. ಆರೋಪಿಗಳಾದ ಪೀಟರ್ ಹಾಗೂ ಸೂರ್ಯ ಬಗ್ಗೆ ತಿಳಿದಿದ್ದ ಸ್ನೇಹಿತರು, ಕುಟುಂಬಸ್ಥರು ಸೇರಿದಂತೆ 39 ಜನರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಪೈಕಿ ಪೀಟರ್ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿತ್ತು.

ನಂತರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು‌, ಆಟೋ ಮೂಲಕ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ಸಿಂಗೇನ ಅಗ್ರಹಾರ, ಚಂದಾಪುರ, ವರ್ತೂರಿನಲ್ಲಿ ಆಟೋದಲ್ಲಿ ಓಡಾಡಿದ್ದಾರೆ. ಆಟೋದಲ್ಲಿ ತಿರುಗುತ್ತಿದ್ದಾರೆ ಎಂದು ಇಂದು ಬೆಳಗಿನ ಜಾವ ಮಾಹಿತಿ ಪಡೆದಿದ್ದ ಪೊಲೀಸರು ಆಟೋ ಪತ್ತೆಗೆ ಮುಂದಾಗಿದ್ದಾರೆ. ಆರೋಪಿಗಳ ಮೊಬೈಲ್‌ ಲೋಕೇಷನ್ ಆಧಾರದ ಮೇಲೆ ಆರೋಪಿಗಳ ಇರುವಿಕೆ ಬಗ್ಗೆ ಪತ್ತೆ ಹಚ್ಚಿದಾಗ, ಆಸ್ಟಿಂಗ್‌ಟೌನ್‌ನಲ್ಲಿ ಮೊದಲ ಬಾರಿಗೆ ಆಟೋ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಆಸ್ಟಿಂಗ್‌ಟೌನ್ ಬಳಿಕ ಕೋರಮಂಗಲ, ಹೆಚ್​ಎಸ್​ಆರ್​ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸಿಂಗೇನ ಅಗ್ರಹಾರ ಸುತ್ತಮುತ್ತ ತಿರುಗಿದ್ದಾರೆ.‌ ನಂತರ ಕೊಡತಿ, ಚಿಕ್ಕನಾಯಕನ ಹಳ್ಳಿ ತಿರುಗಿ ಮತ್ತೆ ನಗರಕ್ಕೆ ಬಂದಿದ್ದಾರೆ. ನಂತರ ಆರೋಪಿಗಳು ಶ್ರೀರಾಮಪುರ, ರಾಜಾಜಿನಗರ, ವಿಜಯನಗರದ ಕಡೆ ಬಂದಿದ್ದರು. ಅಂತಿಮವಾಗಿ ಸುಂಕದ ಕಟ್ಟೆಯ ಬಜಾಜ್ ಗ್ರೌಂಡ್‌ನಲ್ಲಿ ಇಂದು ಮಧ್ಯಾಹ್ನ ಮದ್ಯಪಾನ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಕಾಲಿಗೆ ಗುಂಡು ಹಾರಿಸಿ ವಶಕ್ಕೆ‌ : ತಕ್ಷಣ ಉಪ್ಪಾರಪೇಟೆ ಇನ್ಸ್​ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್ ಪೇಟೆ ಇನ್ಸ್​ಪೆಕ್ಟರ್ ಚಿದಾನಂದ ಮೂರ್ತಿ ಬಂಧಿಸಲು ಮುಂದಾದಾಗ ಡ್ರ್ಯಾಗರ್ ಹಿಡಿದು ಪಿಎಸ್ಐ ಕರಿಯಣ್ಣ ಮತ್ತು ಹೆಡ್ ಕಾನ್ಸ್‌ಟೇಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ‌ ಪಡೆದಿದ್ದಾರೆ.

ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆ : ಕೊಲೆ‌ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಮಾತನಾಡಿ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆ ಆರೋಪಿಗಳ ಪತ್ತೆಗಾಗಿ ಆರು ವಿಶೇಷ ತಂಡ ರಚನೆ ಮಾಡಲಾಗಿತ್ತು. ನಿನ್ನೆ ರಾತ್ರಿ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಎಲ್ಲಾ ಪೊಲೀಸರು ಅರ್ಲಟ್ ಆಗಿದ್ದರು. ಇಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಬಜಾಜ್ ಮೈದಾನ ಬಳಿ ತಲೆಮರೆಸಿಕೊಂಡಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪೀಟರ್ ಹಾಗೂ ಸೂರ್ಯನನ್ನು ಬಂಧಿಸಲಾಗಿದೆ. ಬಂಧಿಸುವ ಮುನ್ನ ನಮ್ಮ ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು.

ಪ್ರಾಣರಕ್ಷಣೆಗಾಗಿ ಆರೋಪಿಗಳ ಕಾಲುಗಳಿಗೆ ಗುಂಡು ಹೊಡೆಯಲಾಗಿದೆ‌. ಗಾಯಾಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಖರವಾಗಿ ಯಾವ ವಿಚಾರಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ವಿಚಾರಣೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ. ಕೊಲೆ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ.‌ ಆರೋಪಿಗಳಿಗೆ ಸಹಾಯ ಮಾಡಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶೀಘ್ರವಾಗಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ.

ಓದಿ: ಸಿಡಿ ಕೇಸ್ : ಪ್ರತಿವಾದಿಯಾಗಿ ಯುವತಿ ಸೇರ್ಪಡೆ, ಜುಲೈ 5ರಂದು ಎಲ್ಲ ಅರ್ಜಿಗಳು ಒಟ್ಟಾಗಿ ವಿಚಾರಣೆ

Last Updated : Jun 25, 2021, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.