ETV Bharat / state

ಪ್ರಾಂತ್ಯವಾರು ಮತದಾನ: ಮೈಸೂರು ಭಾಗದಲ್ಲಿ ಅತ್ಯಧಿಕ, ಬೆಂಗಳೂರು ಪ್ರದೇಶ ಕೊನೆ - ಕರ್ನಾಟಕ ಕುರುಕ್ಷೇತ್ರ 2023

ರಾಜ್ಯ ವಿಧಾನಸಭೆಗೆ ಮತದಾನ ಮುಗಿದಿದ್ದು, ಹಳೆ ಮೈಸೂರು ಭಾಗದಲ್ಲಿ ಅತ್ಯಧಿಕ ಅಂದರೆ ಶೇ.75 ರಷ್ಟು ಮತದಾನವಾದರೆ, ಪ್ರತಿಸಲದಂತೆ ಬೆಂಗಳೂರು ಪ್ರದೇಶದಲ್ಲಿ ಅತಿ ಕಡಿಮೆ ಮತದಾನ ನಡೆದಿದೆ.

ಪ್ರಾಂತ್ಯವಾರು ಮತದಾನ
ಪ್ರಾಂತ್ಯವಾರು ಮತದಾನ
author img

By

Published : May 10, 2023, 6:56 PM IST

ಬೆಂಗಳೂರು: ರಾಜ್ಯ ವಿಧಾನಸಭೆಗೆ ಇಂದು ನಡೆದ ಚುನಾವಣೆಯಲ್ಲಿ ಮತ ಪ್ರಭುಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಅಧಿಕ ಮತದಾನವಾಗಿದ್ದು, ಸಂಜೆ 5 ಗಂಟೆಯ ವೇಳೆಗೆ ರಾಜ್ಯದ ಎಲ್ಲ ಭಾಗಕ್ಕಿಂತಲೂ ಅತ್ಯಧಿಕ ಅಂದರೆ ಶೇಕಡಾ 75 ರಷ್ಟು ಮತದಾನವಾಗಿದೆ. ಪ್ರತಿಬಾರಿಯಂತೆ ಬೆಂಗಳೂರು ಪ್ರದೇಶದಲ್ಲಿ ಕಡಿಮೆ ಮತದಾನವಾಗಿದೆ. ಇಲ್ಲಿ ಸುಮಾರು ಶೇ.50 ರಷ್ಟು ಮಾತ್ರ ಹಕ್ಕು ಚಲಾವಣೆ ನಡೆದಿದೆ.

ಮೈಸೂರು ಪ್ರಾಂತ್ಯದಲ್ಲಿ ಸರಾಸರಿ ಶೇಕಡಾ 75 ಮತದಾನ ವಾಗಿದೆ. ಈ ಭಾಗದ ಚಾಮರಾಜನಗರದಲ್ಲಿ ಶೇಕಡಾ 69%, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 76%, ಚಿಕ್ಕಬಳ್ಳಾಪುರದಲ್ಲಿ 77% ಹಾಸನದಲ್ಲಿ 74% ಕೊಡಗಿನಲ್ಲಿ 71% ಕೋಲಾರದಲ್ಲಿ 72% ಮಂಡ್ಯದಲ್ಲಿ 76% ಮೈಸೂರಿನಲ್ಲಿ 68% ರಾಮನಗರದಲ್ಲಿ 79% ತುಮಕೂರಿನಲ್ಲಿ 76% ರಷ್ಟು ಮತದಾನವಾಗಿದೆ.

ಇನ್ನೂ, ಪ್ರಾಂತ್ಯವಾರು ಎರಡನೇ ಅತಿಹೆಚ್ಚು ಮತದಾನವಾಗಿದ್ದು ಕರಾವಳಿ ಪ್ರದೇಶದಲ್ಲಿ. ಇಲ್ಲಿ ಶೇಕಡಾ 72 ರಷ್ಟು ಜನರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಇದರಲ್ಲಿ ಉಡುಪಿಯಲ್ಲಿ 74%, ದಕ್ಷಿಣ ಕನ್ನಡದಲ್ಲಿ 70%, ಉತ್ತರಕ ಕನ್ನಡದಲ್ಲಿ 68 ರಷ್ಟು ಮತ ನಡೆದಿದೆ.

ಮಧ್ಯ ಕರ್ನಾಕಟದಲ್ಲಿ ಉತ್ತಮ: ಮಧ್ಯ ಕರ್ನಾಟಕ ಭಾಗದಲ್ಲಿ ಶೇಕಡಾ 70 ರಷ್ಟು ಮತದಾನವಾಗಿದೆ. ಅದರಲ್ಲಿ ಶಿವಮೊಗ್ಗ 70% ಚಿಕ್ಕಮಗಳೂರು 72% ದಾವಣಗೆರೆ 71% ಚಿತ್ರದುರ್ಗದಲ್ಲಿ 70 ಪ್ರತಿಶತ ಮತದಾನ ನಡೆದಿದೆ.

ಕಿತ್ತೂರು ಕರ್ನಾಟಕದಲ್ಲಿ ಶೇಕಡಾ 68 ರಷ್ಟು ಮತ ಹಕ್ಕು ಚಲಾವಣೆಯಾಗಿದೆ. ಈ ಭಾಗದ ಜಿಲ್ಲೆಗಳಲ್ಲಿ ಬಾಗಲಕೋಟೆಯಲ್ಲಿ 70% ಬೆಳಗಾವಿಯಲ್ಲಿ 68% ವಿಜಯಪುರದಲ್ಲಿ 62% ಧಾರವಾಡದಲ್ಲಿ 63% ಗದಗ ಜಿಲ್ಲೆಯಲ್ಲಿ 69% ಹಾವೇರಿಯಲ್ಲಿ 73 ಪ್ರತಿಶತ ಮತದಾನವಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟಾರೆ ಶೇಕಡಾ 62 ರಷ್ಟು ಮತದಾನವಾಗಿದೆ. ಅದರಲ್ಲಿ ಕಲಬುರಗಿಯಲ್ಲಿ 58% ಬಳ್ಳಾರಿಯಲ್ಲಿ 68% ಕೊಪ್ಪಳದಲ್ಲಿ 71% ಯಾದಗಿರಿಯಲ್ಲಿ 59% ವಿಜಯನಗರದಲ್ಲಿ 72%, ಬೀದರ್​ನಲ್ಲಿ 62% ರಷ್ಟು ಮತ ನಡೆದಿದೆ.

ಬೆಂಗಳೂರು ಮತ್ತೆ ಕೊನೆ: ಪ್ರಾಂತ್ಯವಾರು ಮತದಾನದಲ್ಲಿ ಕೊನೆಯ ಸ್ಥಾನದಲ್ಲಿರುವ ಬೆಂಗಳೂರು ಪ್ರದೇಶದಲ್ಲಿ ಸರಾಸರಿ ಶೇಕಡಾ 50 ರಷ್ಟು ಮತದಾನವಾಗಿದೆ. ಇದರಲ್ಲಿ ಬೆಂಗಳೂರು ಕೇಂದ್ರದಲ್ಲಿ 50%, ಬೆಂಗಳೂರು ಉತ್ತರದಲ್ಲಿ 50%, ಬೆಂಗಳೂರು ದಕ್ಷಿಣದಲ್ಲಿ 49 ರಷ್ಟು ಮತದಾನವಾಗಿದೆ.

ಓದಿ: ಬೆಂಗಳೂರು.. ಮೊದಲ ಮತದಾನದ ಖುಷಿ ಹಂಚಿಕೊಂಡ ಯುವ ಮತದಾರರು: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.