ETV Bharat / state

ಪ್ರಾಂತ್ಯವಾರು ಲೆಕ್ಕಾಚಾರದಲ್ಲಿ ಹಿಡಿತ ಕಳೆದುಕೊಂಡ ಬಿಜೆಪಿ, ಕಾಂಗ್ರೆಸ್​ಗೆ ಸಿಂಹಪಾಲು - karnataka assembly election 2023

ರಾಜ್ಯದ ಎಲ್ಲ ಭಾಗಗಳಲ್ಲಿ ಹಿಡಿತ ಹೊಂದಿದ್ದ ಬಿಜೆಪಿ ಈ ಬಾರಿ 68 ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಹೊಸದಾಗಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಪ್ರಾಂತ್ಯವಾರು ಲೆಕ್ಕಾಚಾರದಲ್ಲಿ ಹಿಡಿತ ಕಳೆದುಕೊಂಡ ಬಿಜೆಪಿ

author img

By

Published : May 13, 2023, 8:00 PM IST

  • ' class='align-text-top noRightClick twitterSection' data=''>

ಬೆಂಗಳೂರು: ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಪ್ರಾಂತ್ಯವಾರು ಗೆಲುವಿನಲ್ಲಿ ಕಾಂಗ್ರೆಸ್​ ಅತಿಹೆಚ್ಚು ಸ್ಥಾನಗಳನ್ನು ಸಂಪಾದಿಸಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್​ 13, ಬಿಜೆಪಿ 15 ಸ್ಥಾನಗಳನ್ನು ಗಳಿಸಿದ್ದರೆ, ಜೆಡಿಎಸ್​ ಮತ್ತು ಇತರರು ಯಾವುದೇ ಕ್ಷೇತ್ರವನ್ನು ಗಳಿಸಿಲ್ಲ. ಮಧ್ಯ ಕರ್ನಾಟಕದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್​ 19 ಸ್ಥಾನಗಳನ್ನು ಪಡೆದಿದೆ. ಬಿಜೆಪಿ 5, ಜೆಡಿಎಸ್​ 1 ಸ್ಥಾನದಲ್ಲಿ ಗೆದ್ದಿದೆ. ಕರಾವಳಿ ಕರ್ನಾಟಕದಲ್ಲಿನ 19 ಕ್ಷೇತ್ರಗಳಲ್ಲಿ 13 ಕ್ಷೇತ್ರ, ಕಾಂಗ್ರೆಸ್​ 6 ಸ್ಥಾನಗಳನ್ನು ಪಡೆದರೆ, ಜೆಡಿಎಸ್​ ಯಾವುದೇ ಖಾತೆ ತೆರೆದಿಲ್ಲ.

ಇನ್ನೂ, ಕಲ್ಯಾಣ ಕರ್ನಾಟಕದ 41 ಸ್ಥಾನಗಳಲ್ಲಿ ಬಿಜೆಪಿ 10, ಕಾಂಗ್ರೆಸ್​ 26, ಜೆಡಿಎಸ್​ 3, ಇತರರಿಗೆ 2 ಸ್ಥಾನ ಲಭಿಸಿವೆ. ಕಿತ್ತೂರು ಕರ್ನಾಟಕದಲ್ಲಿನ 50 ಸ್ಥಾನಗಳಲ್ಲಿ 33 ಸ್ಥಾನ, ಬಿಜೆಪಿಗೆ 16, ಜೆಡಿಎಸ್​ಗೆ 1 ಸ್ಥಾನ ಸಿಕ್ಕಿವೆ. ಹಳೆ ಮೈಸೂರು ಪ್ರಾಂತ್ಯದಲ್ಲಿನ 61 ಕ್ಷೇತ್ರಗಳಲ್ಲಿ ಬಿಜೆಪಿ 9 ಸ್ಥಾನ, 39 ಕ್ಷೇತ್ರ, ಜೆಡಿಎಸ್​ಗೆ 14, ಇತರರು 2 ಸ್ಥಾನವನ್ನು ಗೆದ್ದುಕೊಂಡಿದ್ದಾರೆ.

ಪ್ರಾಂತ್ಯವಾರು ಲೆಕ್ಕಾಚಾರ
ಪ್ರಾಂತ್ಯವಾರು ಲೆಕ್ಕಾಚಾರ

ಕಳೆದ ಬಾರಿ 2018 ರ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್​ 18, ಬಿಜೆಪಿ 31, ಜೆಡಿಎಸ್​ 3 ಸ್ಥಾನ ಪಡೆದಿತ್ತು. ಮಧ್ಯ ಕರ್ನಾಟಕದಲ್ಲಿ ಬಿಜೆಪಿ 20, ಜೆಡಿಎಸ್​ 1, ಕಾಂಗ್ರೆಸ್​ 4 ಸ್ಥಾನ ಗೆದ್ದಿತ್ತು. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್​ 19, ಬಿಜೆಪಿ 18, ಜೆಡಿಎಸ್​ 4 ಸ್ಥಾನಗಳನ್ನು ಸಂಪಾದನೆ ಮಾಡಿತ್ತು. ಮೈಸೂರು ಕರ್ನಾಟಕದಲ್ಲಿ ಜೆಡಿಎಸ್​ 31, ಕಾಂಗ್ರೆಸ್​ 19, ಬಿಜೆಪಿ 10, ಇತರ 1 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಬೆಂಗಳೂರಿನಲ್ಲಿ ಬಿಜೆಪಿ 11, ಜೆಡಿಎಸ್​ 3, ಕಾಂಗ್ರೆಸ್​ 14 ಸ್ಥಾನ ಗಳಿಸಿದರೆ, ಕರಾವಳಿಯಲ್ಲಿ ಬಿಜೆಪಿ 16, ಕಾಂಗ್ರೆಸ್​ 3 ಸ್ಥಾನಗಳನ್ನು ಪಡೆದುಕೊಂಡಿತ್ತು.

ಹೊಸ ಕ್ಷೇತ್ರದಲ್ಲಿ ಗೆಲುವು, ಹಳೆಯವು ಮಾಯ: ಆಡಳಿತದಲ್ಲಿ ಬಿಜೆಪಿ ಈ ಬಾರಿ ಭಾರೀ ಸಂಖ್ಯೆಯ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇದು ಆಡಳಿತ ವಿರೋಧಿ ಅಲೆಯನ್ನು ಪ್ರತಿಬಿಂಬಿಸುತ್ತದೆ. ಬಿಜೆಪಿ 2018 ರಲ್ಲಿ ಗೆದ್ದಿದ್ದ 68 ಕ್ಷೇತ್ರಗಳನ್ನು ಈ ಬಾರಿ ಕಳೆದುಕೊಂಡರೆ 15 ಹೊಸ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅದೇ ರೀತಿ ಕಾಂಗ್ರೆಸ್​ 16 ಹಳೆಯ ಕ್ಷೇತ್ರ ಕಳೆದುಕೊಂಡರೆ, 80 ಹೊಸ ಕ್ಷೇತ್ರಗಳನ್ನು ಕೊಳ್ಳೆ ಹೊಡೆದಿದೆ. ಜೆಡಿಎಸ್​ 26 ಹಳೆಯ ಸ್ಥಾನಗಳ ಖೋತಾ ಹೊಂದಿದ್ದು, 13 ಹೊಸ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಗೆದ್ದ ನಾಲ್ವರು ಇತರರು ಹೊಸ ಅಭ್ಯರ್ಥಿಗಳಾಗಿದ್ದಾರೆ.

ಓದಿ: ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ: 11 ಕ್ಷೇತ್ರ ಕೈ ವಶ, 8 ಸ್ಥಾನ‌ ಬಿಜೆಪಿ‌ ಮಡಿಲಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.