ETV Bharat / state

ಸೋಂಕಿನಿಂದ ಗುಣಮುಖರ ಪ್ರಮಾಣ ಹೆಚ್ಚಳ : 10,722 ಮಂದಿ ಚೇತರಿಕೆ

author img

By

Published : Jun 29, 2021, 9:03 PM IST

ಬಿಬಿಎಂಪಿ ವ್ಯಾಪ್ತಿಯಲ್ಲಿ 52,455 ಸಕ್ರಿಯ ಪ್ರಕರಣಗಳಿವೆ. ಆದರೆ, ಒಟ್ಟು 10,722 ಮಂದಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದ್ದು, ಈ ಮೂಲಕ ನಗರದಲ್ಲಿ ದಿಢೀರ್​ ಆಗಿ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಹೆಚ್ಚಾಗಿದೆ..

recovery-rate
ಗುಣಮುಖರ ಪ್ರಮಾಣ

ಬೆಂಗಳೂರು : ನಗರದಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಇಂದು ದಿಢೀರನೆ ಏರಿಕೆಯಾಗಿದೆ. ಒಟ್ಟು 10,722 ಮಂದಿ ಗುಣಮುಖರಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 52,455 ಸಕ್ರಿಯ ಪ್ರಕರಣಗಳು ಇನ್ನೂ ಉಳಿದಿವೆ. ಆದರೆ, ಪಾಲಿಕೆ ಅಧಿಕಾರಿಗಳ ಪ್ರಕಾರ ಸದ್ಯ ಸಕ್ರಿಯ ಪಾಸಿಟಿವ್ ಪ್ರಕರಣಗಳು 20 ಸಾವಿರ ಅಷ್ಟೇ ಇದ್ದು, ಉಳಿದವರ ಸಂಪರ್ಕ ಹಾಗೂ ಮಾಹಿತಿ ಸಿಗದ ಕಾರಣ ಸಕ್ರಿಯ ಪ್ರಕರಣಗಳಲ್ಲೇ ಉಳಿಸಿಕೊಳ್ಳಲಾಗಿದೆ.

ಆದರೆ, ವ್ಯಾಪಕವಾಗಿ ಪೊಲೀಸರು ಹಾಗೂ ಆಸ್ಪತ್ರೆ ಆಡಿಟ್, ಸಹಾಯವಾಣಿ ಮೂಲಕ ಪತ್ತೆ ಹಚ್ಚಿ, ಈ ತಿಂಗಳಾಂತ್ಯದಲ್ಲಿ ನಿಖರ ಮಾಹಿತಿ ಕೊಡಲಾಗುವುದು ಎಂದು ತಿಳಿಸಿದ್ದರು. ಹೀಗಾಗಿ, ಮೊದಲ ಭಾಗವಾಗಿ ಇಂದು 10 ಸಾವಿರಕ್ಕೂ ಹೆಚ್ಚು ಜನರ ಮಾಹಿತಿ ಕಲೆ ಹಾಕಲಾಗಿದೆ. ಗುಣಮುಖರಾಗಿರುವುದು ದೃಢಪಟ್ಟಿರುವ ಕಾರಣ ಈ ಪಟ್ಟಿಗೆ ಸೇರಿಸಲಾಗಿದೆ.

ಇದನ್ನು ಓದಿ: ಟ್ರ್ಯಾಕ್ಟರ್ ಏರಿ ಕಲ್ಯಾಣ ಮಂಟಪಕ್ಕೆ ಬಂದ ವಧು... Video

ಕಳೆದ ನಾಲ್ಕು ದಿನದಲ್ಲಿ ಗುಣಮುಖರಾದವರ ಮಾಹಿತಿ ಇಂತಿದೆ. ಭಾನುವಾರದಂದು 1174, ಸೋಮವಾರದಂದು 3301, ಮಂಗಳವಾರದಂದು 1588 ಮಂದಿ ಡಿಸ್ಚಾರ್ಜ್​ ಆಗಿದ್ದು, ಇಂದು 10,722 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 753 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಇದೀಗ 12,12,746ಕ್ಕೆ ಏರಿಕೆಯಾಗಿದ್ದು, 52445 ಸಕ್ರಿಯ ಪ್ರಕರಣಗಳಿವೆ. ಒಟ್ಟು 15,615 ಮಂದಿ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.