ETV Bharat / state

ಫಲ ನೀಡಿತಾ ದೋಸ್ತಿ ನಾಯಕರ ಮನವೊಲಿಕೆ? ಯುಟರ್ನ್​ ತೆಗೆದುಕೊಳ್ತಾರಾ ಎಂಟಿಬಿ ನಾಗರಾಜ್​..? - news kannada

ಎಂಟಿಬಿ ನಾಗರಾಜ್ ಅವರ ಮನೆಗೆ ನಿನ್ನೆ ರಾತ್ರಿಯಿಂದ ಕಾಂಗ್ರೆಸ್​ನ ಘಟಾನುಘಟಿ ನಾಯಕರು ಭೇಟಿ ನೀಡಿ, ಮನವೊಲಿಕೆಗೆ ಯತ್ನಿಸಿದ್ದಾರೆ. ಈಗಿನ ರಾಜಕೀಯ ಚಲನವಲನ ನೋಡಿದರೆ ಇವರ ಪ್ರಯತ್ನ ಕೊನೆಗೂ ಈಡೇರಿತಾ ಎಂಬ ಅನುಮಾನ ಮೂಡುತ್ತಿದೆ.

ಎಂಟಿಬಿ ನಾಗರಾಜ್​
author img

By

Published : Jul 13, 2019, 12:52 PM IST

Updated : Jul 13, 2019, 1:40 PM IST

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ತಮ್ಮ ಮುಂದಿನ ನಿಲುವಿನ ಬಗ್ಗೆ ಬಹಿರಂಗಪಡಿಸಿದ್ದಾರೆ.

ತಮ್ಮ ಮುಂದಿನ ನಿಲುವು ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್​ನಲ್ಲೇ ಉಳಿಯುವಂತಹ ಪ್ರಯತ್ನ ಮಾಡುವೆ. ಅಸಮಾಧಾನ ಇಲ್ದೇ ಇರೋ ರಾಜಕೀಯ ಪಕ್ಷಗಳು ಇಲ್ವೇ ಇಲ್ಲ. ಸುಧಾಕರ್​ ಜೊತೆನೂ ಮಾತನಾಡಿ ಮನವೊಲಿಸೋ ಕೆಲಸವನ್ನ ಮಾಡುವೆ. ಹಲವು ಕಾಂಗ್ರೆಸ್​​ ಮುಖಂಡರು ಮನವೊಲಿಸಲು ಮುಂದಾಗಿದ್ದಾರೆ. 40 ವರ್ಷದಿಂದ ಕಾಂಗ್ರೆಸ್​ನಲ್ಲಿಯೇ ಸೇವೆ ಸಲ್ಲಿಸಿದ್ದೇನೆ. ಅದೇ ರೀತಿ ಮುಂದಿನ ದಿನಗಳಲ್ಲಿ ಮುಂದುವರಿಯಲು ಬಯಸಿದ್ದೇನೆ ಎಂದಿದ್ದಾರೆ.

  • Rebel Congress MLA MTB Nagaraj: Situation was such that we submitted our resignations but now DK Shivakumar and others came and requested us to withdraw resignations,I will speak to K Sudhakar Rao& then see what is to be done,after all I have spent decades in Congress. #Karnataka pic.twitter.com/6M3Xi8zKkB

    — ANI (@ANI) July 13, 2019 " class="align-text-top noRightClick twitterSection" data=" ">

ಡಿ.ಕೆ.ಶಿವಕುಮಾರ್​ ಈ ಬಗ್ಗೆ ಪ್ರತಿಕ್ರಿಯಿಸಿ, ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಪಕ್ಷ ಕಟ್ಟಿ ಬೆಳೆಸಿದ್ದೇವೆ. ಅವರೂ ಕೂಡ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಪಕ್ಷಕ್ಕೆ ಸಾಕಷ್ಟು ಸೇವೆ ಮಾಡಿದ್ದಾರೆ. ಕುಟುಂಬದಲ್ಲಿ ಅಸಮಾಧಾನ ಸಹಜ. ಆದ್ರೆ ಅವುಗಳನ್ನೆಲ್ಲಾ ಮರೆತು ಜೊತೆಗೆ ಇರೋಣ, ಜೊತೆಗೆ ಸಾಯೋಣ ಎಂದು ತೀರ್ಮಾಣ ಮಾಡಿದ್ದೇವೆ. ಎಂಟಿಬಿ ನಾಗರಾಜ್ ಅವರ ನೋವು ಏನು ಅನ್ನೋದನ್ನು ಕೇಳಿ ಪರಿಹರಿಸುತ್ತೇವೆ ಎಂದಿದ್ದಾರೆ.

ಎಂಟಿಬಿ ನಾಗರಾಜ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್​​ನ ಘಟಾನುಘಟಿ ನಾಯಕರು

ಇನ್ನು ಇವರನ್ನು ಭೇಟಿ ಮಾಡಿದ ಡಿಸಿಎಂ ಜಿ. ಪರಮೇಶ್ವರ್​, ಬೆಳಗ್ಗೆ ಆರು ಗಂಟೆಗೆಯೇ ಎಂಟಿಬಿ ನಾಗರಾಜ್ ಅವರ ಮನೆಗೆ ಬಂದಿದ್ದೇವೆ. ಡಿ.ಕೆ. ಶಿವಕುಮಾರ್, ​ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್‌ ಅವರ ಮನವೊಲಿಸೋಕೆ ಬಂದಿದ್ದೇವೆ. ಎಲ್ಲರೂ 40 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್​​​ ಪಕ್ಷಕ್ಕಾಗಿ ದುಡಿದಿದ್ದೇವೆ. ಮೂರ್ನಾಲ್ಕು ಗಂಟೆಗಳ ಕಾಲ ಮನವೊಲಿಸಲು ಮುಂದಾದೆವು. ಇದೀಗ ಕಾಂಗ್ರೆಸ್​​ನಲ್ಲೇ ಉಳಿಯಲು ಎಂಟಿಬಿ ನಾಗರಾಜ್​ ನಿರ್ಧರಿಸಿದ್ದಾರೆ. ನಮ್ಮ ನಡುವಿನ ಗೊಂದಲವನ್ನ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

Intro:Body:

Rebel Congress MLA MTB Nagaraj

Conclusion:
Last Updated : Jul 13, 2019, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.