ETV Bharat / state

ರಾಜಕೀಯ ತಂತ್ರಗಾರಿಕೆಯಲ್ಲಿ ಗೆದ್ದ ಲಕ್ಷ್ಮಣ ಸವದಿ: ಠುಸ್ಸಾದ ರಮೇಶ್​ ಜಾರಕಿಹೊಳಿ ಮಂತ್ರ - assembly election 2023

ರಾಜಕೀಯ ಅಖಾಡದಲ್ಲಿ ಭಾರೀ ತಂತ್ರಗಾರಿಕೆಗಳ ಮಧ್ಯೆ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ವಿರುದ್ಧ ಸೆಟೆದು ನಿಂತು ಕಾಂಗ್ರೆಸ್​ ಸೇರಿದ್ದ ಸವದಿ ಮತದಾರನ ಆಶೀರ್ವಾದ ಪಡೆದಿದ್ದಾರೆ.

ರಾಜಕೀಯ ತಂತ್ರಗಾರಿಕೆಯಲ್ಲಿ ಗೆದ್ದ ಲಕ್ಷ್ಮಣ ಸವದಿ

author img

By

Published : May 13, 2023, 12:45 PM IST

ಚಿಕ್ಕೋಡಿ: ರಾಜಕೀಯ ತಂತ್ರಗಾರಿಕೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಗೆಲುವು ಸಾಧಿಸುವ ಮೂಲಕ ರಾಜಕೀಯ ರಣರಂಗದಲ್ಲಿ ಇತಿಹಾಸ ಬರೆದಿದ್ದಾರೆ. ಬಿಜೆಪಿ ತೊರೆದು ಅಥಣಿ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದ ಸವದಿ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಿರುದ್ಧ 55 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಟಿಕೆಟ್​ ಸಿಗದ್ದಕ್ಕೆ ಮುನಿಸಿಕೊಂಡು ಬಿಜೆಪಿ ಹೈಕಮಾಂಡ್​ ವಿರುದ್ಧ ಸೆಡ್ಡು ಹೊಡೆದು ಕಾಂಗ್ರೆಸ್​ ಸೇರಿದ್ದ ಸವದಿ ಅಥಣಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಬೆಳಗಾವಿ ಸಾಹುಕಾರ, ಸಚಿವ ರಮೇಶ್​ ಜಾರಕಿಹೊಳಿ ಅವರು ಮಹೇಶ್​ ಕುಮಟಳ್ಳಿಗೆ ಟಿಕೆಟ್​ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅಖಾಡದಲ್ಲಿ ಕುಮಟಳ್ಳಿಗೆ ಸೋಲುವ ಮೂಲಕ ಭಾರಿ ಮುಖಭಂಗಕ್ಕೀಡಾಗಿದ್ದಾರೆ.

ರಾಜಕೀಯ ಹಾದಿ: ಬದಲಾದ ರಾಜಕೀಯ ಸನ್ನಿವೇಶಗಳಿಂದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಇದೀಗ ರಾಜ್ಯ ರಾಜಕೀಯದ ಕೇಂದ್ರ ಬಿಂದು ಆಗಿದ್ದಾರೆ. ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾದ ಅವರು, ರಾಜಕೀಯ ರಣರಂಗದ ಬಹು ಚರ್ಚಿತ ವ್ಯಕ್ತಿಗಳಲ್ಲಿ ಒಬ್ಬರು.

ಲಕ್ಷ್ಮಣ್ ಸವದಿ ಬೆಳೆದು ಬಂದ ದಾರಿ: ಲಕ್ಷ್ಮಣ ಸಂಗಪ್ಪ ಸವದಿ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು ಗ್ರಾಮದವರು. ತಂದೆ ಸಂಗಪ್ಪ ಪರಪ್ಪ ಸವದಿ, ತಾಯಿ ಸಲ್ಯಾವ್ವ ಸಂಗಪ್ಪ ಸವದಿ. 16 ಫೆ. 1960ರಲ್ಲಿ ಸತ್ತಿ ಎಂಬ ಗ್ರಾಮದಲ್ಲಿ ಜನಿಸಿದ ಲಕ್ಷ್ಮಣ್ ಸವದಿ, ಮೂಲತಃ ಕೃಷಿ ಕುಟುಂಬದವರು. ಅಥಣಿಯ ಎಸ್​ಎಂಎಸ್​ ಕಾಲೇಜಿನಲ್ಲಿ (1978ರಲ್ಲಿ) ಪಿಯುಸಿ ಪಾಸ್ ಮಾಡಿರುವ ಸವದಿ, ರಾಜಕೀಯಕ್ಕೆ ಧುಮುಕಿದ್ದು ಬಲು ರೋಚಕ! ಪತ್ನಿಯ ಹೆಸರು ಪುಷ್ಪಾ ಲಕ್ಷ್ಮಣ ಸವದಿ. ಇವರಿಗೆ ಮೂರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳೂ ಇದ್ದಾರೆ.

ರಾಜಕೀಯ ಜೀವನ: 1995 -1999 ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ಮೊದಲ ಬಾರಿ ಆಯ್ಕೆಯಾದರು. 2ನೇ ಬಾರಿ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಮರು ಆಯ್ಕೆದ ಅವರು, ಕೆಲವೇ ದಿನಗಳಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆ ಆಗಿ ಗಮನ ಸೆಳೆದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸವದಿ, ಅಂದಿನ ಕಾಂಗ್ರೆಸ್ ಅಭ್ಯರ್ಥಿ ಶಹಜಾನ್ ಡೊಂಗರಗಾಂವ್ ವಿರುದ್ಧ 3109 ಮತಗಳಿಂದ ಪರಭಾವಗೊಂಡರು. ಬಳಿಕ ಹೋರಾಟದ ಹಾದಿ ಅವರನ್ನು ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದ್ದು ಇತಿಹಾಸವಾಗುತ್ತದೆ.

ಎಸ್.ಎಂ. ಕೃಷ್ಣ ಸರ್ಕಾರದ (2000ನೇ ಇಸವಿ) ಅವಧಿಯಲ್ಲಿ ಪಂಪ್‌ಸೆಟ್​​ಗೆ ವಿದ್ಯುತ್‌ ಮೀಟರ್‌ ಅಳವಡಿಸುವುದನ್ನು ವಿರೋದಿಸಿ ರೈತ ಹಿತರಕ್ಷಣಾ ಸಮಿತಿಯೊಂದನ್ನು ಸಂಘಟನೆ ಮಾಡುವ ಮೂಲಕ ಬೃಹತ್ ರೈತ ಪ್ರತಿಭಟನಾ ಜಾಥಾ ನಡೆಸಿದರು. ಈ ಮೂಲಕ ಪಂಪ್‌ಸೆಟ್​​ಗಳಿಗೆ ಮೀಟರ್ ಅಳವಡಿಸುವುದನ್ನು ಹಿಂತೆಗೆದುಕೊಳ್ಳುವ ಸರ್ಕಾರ ಆದೇಶ ಮಾಡುತ್ತದೆ. ಈ ಆದೇಶದ ರೂವಾರಿ ಎನ್ನುವ ಹಿರಿಮೆ ಅವರಿಗೆ ಸಲ್ಲುತ್ತದೆ. 2001ರಲ್ಲಿ ರೈತರ ಹಿತದೃಷ್ಟಿಯಿಂದ ಹಿಪ್ಪರಗಿ ಬ್ಯಾರೇಜ್ ನೀರಾವರಿ ಕಾಲುವೆಗಾಗಿ ಹೋರಾಟ ನಡೆಸಿ, ಹಿಪ್ಪರಗಿ ಬ್ಯಾರೇಜ್ ನೀರಾವರಿ ಕಾಲುವೆ ಪೂರ್ಣಗೊಳಿಸಿದ ಖ್ಯಾತಿ ಕೂಡ ಇವರಿಗೆ ಸಲ್ಲುತ್ತದೆ.

2002 ಬೆಳಗಾವಿ ಡಿಸಿಸಿ ಬ್ಯಾಂಕ್​ಗೆ ನಿರ್ದೇಶಕರಾಗಿ ಮರು ಆಯ್ಕೆಯಾದರು. 2004ರಲ್ಲಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್​ನ ನಿರ್ದೇಶಕರಾಗಿ ಆಯ್ಕೆಯಾದ ಸವದಿ, ಅನಂತ್‌ ಕುಮಾರ್ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2004 ರಲ್ಲಿ ಬಿಜೆಪಿ ಪಕ್ಷದಿಂದ ಕಣಕ್ಕೆ ಇಳಿದ ಸವದಿ, ಅಂದಿನ ಕಾಂಗ್ರೆಸ್ ಅಭ್ಯರ್ಥಿ ಶಹಜಾನ್ ಡೊಂಗರಗಾಂವ್ ವಿರುದ್ಧ 31253 ಮತಗಳ ಅಂತರದಿಂದ ಗೆಲುವು ಸಾಧಿಸುವ ಜೊತೆಗೆ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಮರು ಆಯ್ಕೆ ಆದರು. 2005, 2006, 2007, 2008ರಲ್ಲಿ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.

ಅದೇ ಕ್ಷೇತ್ರದಿಂದ 2008ರಲ್ಲಿ ಎರಡನೇ ಬಾರಿಗೆ ಬಿಜೆಪಿ ಪಕ್ಷದಿಂದ ಶಾಸಕರಾಗಿ ಮರು ಆಯ್ಕೆ ಅವರು, ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಹಕಾರಿ ಸಚಿವರಾಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯ ನಿರ್ವವಹಿಸಿದರು. ಅದೇ ವರ್ಷ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್‌ ಮತ್ತು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ ಮರು ಆಯ್ಕೆ ಕೂಡ ಆದರು.

2009ರಲ್ಲಿ ಸಹಕಾರಿ ಸಚಿವರಾಗಿ ಕಾರ್ಯ ನಿರ್ವವಹಿಸಿದ ಅವರು, ರೈತರಿಗೆ ಶೇ.1ರಷ್ಟು ಕೃಷಿ ಸಾಲವನ್ನು ವಿತರಿಸಲು ಪ್ರಥಮ ಬಾರಿಗೆ ಕರಡು ಸಿದ್ಧಪಡಿಸಿ ಅನುಷ್ಠಾನಗೊಳಿಸಿದ ಶ್ರೇಯಸ್ಸು ಕೂಡ ಇವರಿಗೇ ಸಲ್ಲುತ್ತದೆ. ವೈದ್ಯನಾಥ ಸಮಿತಿ ವರದಿ ಅನುಷ್ಠಾನಗೊಳಿಸುವುದರಲ್ಲಿ ಇವರದ್ದು ಪ್ರಮುಖ ಪಾತ್ರ. 2010ರಲ್ಲಿ ಶೇ. 90ರಷ್ಟು ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಗಳು ಹಾಗೂ ಒಕ್ಕೂಟಗಳನ್ನು ಆಡಳಿತಕ್ಕೆ ಒಳಪಡುವಲ್ಲಿ ಇವರದ್ದೇ ಮುಂದಾಳತ್ವ. 2012ರಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರಾಗಿ ನೇಮಕಗೊಂಡ ಸವದಿ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದಗೌಡ ಅವರ ಸಚಿವ ಸಂಪುಟದಲ್ಲಿ ಸಹಕಾರ ಹಾಗೂ ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಚಿವರಾಗಿ ಸೇವೆ ಸಲ್ಲಿಸಿದರು. ಜೊತೆಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯ ನಿರ್ವವಹಿಸಿದರು.

2013ರಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಸವದಿ, ಮೂರನೇ ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದರು. ಅದೇ ವರ್ಷ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿಯೂ ಮರು ಆಯ್ಕೆ, ಜೊತೆಗೆ ಭಾರತೀಯ ಜನತಾ ಸಂಘಟನಾಕಾರರಾಗಿ ನೇಮಕಕೊಂಡರು. 2018ರಲ್ಲಿ ಬಿಜೆಪಿ ಪಕ್ಷದಿಂದ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದ ಲಕ್ಷ್ಮಣ್ ಸವದಿ, ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಕುಮಠಳ್ಳಿ ವಿರುದ್ಧ ಕೇವಲ 2741 ಮತಗಳ ಅಂತರದಿಂದ ಸೋಲಿನ ರುಚಿ ನೋಡಿದರು.

ಸೋತರು ಬಾಗಿಲು ತೆರೆದ ಅದೃಷ್ಟ: 2019ರಲ್ಲಿ ಬಿಜೆಪಿಯ ರಾಜ್ಯ ರೈತ ಮೋರ್ಚಾದ ಅಧ್ಯಕ್ಷರಾಗಿ ನೇಮಕಕೊಂಡ ಸವದಿ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ 20 ಆಗಸ್ಟ್​​ 2019ರಲ್ಲಿ ರಾಜ್ಯದ 11ನೇ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ 27 ಸೆಪ್ಟ್​ಂಬರ್ 2019ರಲ್ಲಿ ಸಾರಿಗೆ ಇಲಾಖೆ ಸಚಿವರಾಗಿ ಜೊತೆಗೆ ಕೃಷಿ ಇಲಾಖೆ ಹಾಗೂ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಯಲ್ಲಿ ಗಮನ ಸೆಳೆದರು. 2020ರಲ್ಲಿ ಅಥಣಿ ತಾಲೂಕಿನ ನಾಗನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಸವದಿ, 5 ಫೆ. 2020 ರಂದು ಪರಿಷತ್ ಸದಸ್ಯರು ಕೂಡ ಆದರು.

ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಾದ ಕೆಲವು ಬದಲಾವಣೆ ಹಾಗೂ ಬೆಳವಣಿಗೆ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಸ್ಥಾನಕ್ಕೆ (14 ಮಾ. 2023) ರಾಜೀನಾಮೆ ನೀಡಿದ ಸವದಿ, ಅಂದೇ ಬಿಜೆಪಿ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಕೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.