ಬೆಂಗಳೂರು: ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯದ ಮರು ಹಂಚಿಕೆ ಮಾಡಲಾಗಿದೆ. ಅಕ್ಟೋಬರ್ 18ರ ಆದೇಶ ಪರಿಷ್ಕರಣೆ ಮಾಡಿ ಇಂದು ಮರು ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಶಿವಯೋಗಿ ಕಳಸದ್ಗೆ ಕೊಕ್ ನೀಡಲಾಗಿದೆ.
ಪ್ರಮುಖವಾಗಿ ರಾಜ್ಯದ ಎಲ್ಲಾ ಸಂಸದ ಮತ್ತು ಶಾಸಕರ ಕ್ಷೇತ್ರದ ಅಭಿವೃದ್ಧಿ ವಿಷಯವನ್ನು ರವಿ.ಎ.ಎಸ್ಗೆ ವಹಿಸಿದ್ದರೆ, ಶಿವಮೊಗ್ಗ ಸಂಸದ ಮತ್ತು ಶಾಸಕರ ಕ್ಷೇತ್ರಗಳ ಅಭಿವೃದ್ಧಿ ವಿಷಯ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ರವಿ ಅವರಿಗೆ ಪ್ರತ್ಯೇಕವಾಗಿ ಹಂಚಿಕೆ ಮಾಡಿ ತವರು ಜಿಲ್ಲೆಗೆ ವಿಶೇಷ ಆಧ್ಯತೆ ನೀಡಿ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಸೇವಾ ವಿಷಯ ಹೊರತುಪಡಿಸಿದಂತೆ ಹಣಕಾಸು, ಇಂಧನ, ನಗರಾಭಿವೃದ್ಧಿ, ಕಡತ ಸಂಬಂಧ, ನಿಯಮಾವಳಿ ವಿಷಯ, ಅಂತರರಾಜ್ಯ ಜಲವ್ಯಾಜ್ಯ, ಮೂಲಸೌಕರ್ಯ, ಸಂಪುಟ ವಿಷಯ, ಕೇಂದ್ರ ಮತ್ತು ಇತರ ರಾಜ್ಯಗಳೊಂದಿಗೆ ವ್ಯವಹಾರ ವಹಿಸಲಾಗಿದೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ಎಸ್. ಸೆಲ್ವ ಕುಮಾರ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗೃಹ, ಜಲಸಂಪನ್ಮೂಲ, ಸಣ್ಣ ನೀರಾವರಿ, ವಾಣಿಜ್ಯ ಮತ್ತು ಕೈಗಾರಿಕೆ, ಸಣ್ಣ ಕೈಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ವಾಣಿಜ್ಯ ತೆರಿಗೆ, ಕನ್ನಡ ಮತ್ತು ಸಂಸ್ಕೃತಿ, ಯೋಜನೆ, ಅರಣ್ಯ ಮತ್ತು ಪರಿಸರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಿಎಂ ಸಚಿವಾಲಯ ಸಂಬಂಧಿತ ವಿಷಯ, ಸಂಪುಟ ವಿಷಯ, ಗಣ್ಯರ ಜೊತೆ ಸಮನ್ವಯತೆ ಜವಾಬ್ದಾರಿಯನ್ನು ನೀಡಲಾಗಿದೆ.
ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಡಾ. ವಿಶಾಲ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ, ಪ್ರವಾಸೋದ್ಯಮ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಖಜಾನೆ ಮತ್ತು ಅಬಕಾರಿ ಸೇವಾ ವಿಷಯ, ಸಿಎಂ ಗೃಹ ಕಚೇರಿಗೆ ನಿಯುಕ್ತಿಗೊಳ್ಳುವ ಸಿಬ್ಬಂದಿ ಜೊತೆ ಸಮನ್ವಯತೆಯ ಜವಬ್ದಾರಿಯನ್ನು ನೀಡಲಾಗಿದೆ.
ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿ ರಾಜಪ್ಪ, ಜವಳಿ, ಮಾಹಿತಿ, ಯುವಜನಸೇವೆ ಮತ್ತು ಕ್ರೀಡೆ, ಕೌಶಲ್ಯಾಭಿವೃದ್ದಿ, ಸಕ್ಕರೆ, ಸಿಎಂ ಜೊತೆ ಗಣ್ಯರು ಮತ್ತು ನಾಗರಿಕರ ಸಭೆ, ಗೃಹ ಕಚೇರಿ ಮತ್ತು ನಿವಾಸದ ಜೊತೆ ಸಮನ್ವಯತೆ ನೀಡಲಾಗಿದೆ. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಪಿ.ಎ ಗೋಪಾಲ್, ಸಿಎಂಆರ್‌ಎಫ್ ಮುಖ್ಯಮಂತ್ರಿಗಳ ಎರಡನೇ ಖಾಸಗಿ ಕಾರ್ಯದರ್ಶಿ ವಿಶ್ವನಾಥ್ ಹಿರೇಮಠ, ಆಹಾರ ಮತ್ತು ನಾಗರಿಕ ಸರಬರಾಜು, ಸಹಕಾರ, ಕಾರ್ಮಿಕ, ಕಾನೂನು ಮತ್ತು ಸಂಸದೀಯ ವ್ಯವಹಾರ, ಸಾರ್ವಜನಿಕ ಉದ್ದಿಮೆ, ಪಶುಸಂಗೋಪನೆ ನೀಡಲಾಗಿದೆ.
ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ರವಿ ಎ.ಆರ್, ಸಂಸದ, ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳು, ಜನತಾ ದರ್ಶನ, ಶಿವಮೊಗ್ಗ ಸಂಸದ, ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳು. ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಕೆ.ಬಿ ಪ್ರಕಾಶ್, ಸಿಎಂ ಸಚಿವಾಲಯದ ಆಡಳಿತ, ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ಡಾ.ಎ. ಲೋಕೇಶ್, ಸಿಎಂ ನಿವಾಸದ ಉಸ್ತುವಾರಿ, ಸಿಎಂ ವಿಶೇಷಾಧಿಕಾರಿ ಹೆಚ್.ಎಸ್ ಸತೀಶ್, ಗೃಹ ಕಚೇರಿ ಕೃಷ್ಣಾ ಉಸ್ತುವಾರಿಯನ್ನು ವಹಿಸಲಾಗಿದೆ.