ETV Bharat / state

ಅವಹೇಳನ ಮಾಡುವ ನೈತಿಕ ತಳಹದಿ ಕಾಂಗ್ರೆಸ್​​ಗಿಲ್ಲ: ಪೇ ಸಿಎಂ ಕ್ಯಾಂಪೇನ್​ಗೆ ರವಿಕುಮಾರ್ ಕಿಡಿ

ಪ್ರತಿಪಕ್ಷ ಕಾಂಗ್ರೆಸ್, ಮುಖ್ಯಮಂತ್ರಿಗಳ ಬಗ್ಗೆ ಪೇ ಸಿಎಂ ಎಂದಿದೆ. ಎಷ್ಟು ಪೇ ಮಾಡಿದೆ. ನಿಮ್ಮ ಕಾಂಗ್ರೆಸ್ ನಾಯಕರು ಎಷ್ಟು ಮಂದಿ ಮುಖ್ಯಮಂತ್ರಿಗಳಿಗೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಪೇಮೆಂಟ್ ನೀಡಿದ್ದಾರೆ? ಇಂತಹ ಕೆಲಸಕ್ಕೆ ನಾವು ಹಣ ನೀಡಿದ್ದೇವೆ ಎಂಬುದನ್ನು ತಿಳಿಸಿ. ಹಣ ನೀಡಿರುವ ವಿಚಾರವಾಗಿ ನೀವೇನಾದರೂ ದೂರು ದಾಖಲಿಸಿದ್ದೀರಾ? ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರಶ್ನಿಸಿದರು.

ravikumar-slams-congress-for-pay-cm-campaign
ಅವಹೇಳನ ಮಾಡುವ ನೈತಿಕ ತಳಹದಿ ಕಾಂಗ್ರೆಸ್​​ಗಿಲ್ಲ: ಪೇ ಸಿಎಂ ಕ್ಯಾಂಪೇನ್​ಗೆ ರವಿಕುಮಾರ್ ಕಿಡಿ
author img

By

Published : Sep 21, 2022, 8:36 PM IST

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ ನಾಯಕರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಹಗರಣಗಳಲ್ಲಿ ಭಾಗಿಯಾಗಿದೆ. ಬಿಜೆಪಿ ವಿರುದ್ಧ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ದೂರಿದ್ದಾರೆ.

ವಿಧಾನಸೌಧದ ಕೆಂಗಲ್ ಗೇಟ್​​ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭ ಸಾಕಷ್ಟು ಹಗರಣಗಳು ನಡೆದಿದ್ದು, ಇದಕ್ಕಾಗಿ ತಾವು ಅಧಿಕಾರ ಕಳೆದುಕೊಂಡಿದ್ದೇವೆ ಎಂಬ ನೆನಪು ಅವರಿಗಿಲ್ಲ. ಇದೀಗ ಪೇ ಸಿಎಂ ಕ್ಯಾಂಪೇನ್ ಮೂಲಕ ಸಿಎಂ ಅವಹೇಳನ ಮಾಡುವ ವಿಫಲ ಯತ್ನಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಸಿಎಂ ಬಗ್ಗೆ ಪೇ ಸಿಎಂ ಎಂದಿದೆ. ಎಷ್ಟು ಪೇ ಮಾಡಿದೆ. ನಿಮ್ಮ ಕಾಂಗ್ರೆಸ್ ನಾಯಕರು ಎಷ್ಟು ಮಂದಿ ಮುಖ್ಯಮಂತ್ರಿಗಳಿಗೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಪೇಮೆಂಟ್ ನೀಡಿದ್ದಾರೆ? ಇಂತಹ ಕೆಲಸಕ್ಕೆ ನಾವು ಹಣ ನೀಡಿದ್ದೇವೆ ಎಂಬುದನ್ನು ತಿಳಿಸಿ. ಹಣ ನೀಡಿರುವ ವಿಚಾರವಾಗಿ ನೀವೇನಾದರೂ ದೂರು ದಾಖಲಿಸಿದ್ದೀರಾ? ಎಂದು ಪ್ರಶ್ನಿಸಿದರು.

ಆಧಾರ ರಹಿತ ಆರೋಪ ಇದಾಗಿದೆ. ನೈತಿಕ ತಳಹದಿ ಹೊಂದಿಲ್ಲ ಮತ್ತು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಕ್ಷುಲ್ಲಕ ಹಾಗೂ ಕೆಟ್ಟ ಅಭ್ಯಾಸವಾಗಿದೆ. ಅನಗತ್ಯ ಆರೋಪ ಮಾಡುವ ಬದಲು ನಿಮ್ಮ ಬಳಿ ಆಧಾರವಿದ್ದರೆ ಪ್ರದರ್ಶಿಸಿ. ಆಧಾರ ರಹಿತ ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.

ಹೈದರಾಬಾದ್​ನಲ್ಲೂ ರಾರಾಜಿಸಿದ ಪೋಸ್ಟರ್​: ಹೈದ್ರಾಬಾದ್​​ನಲ್ಲಿ ನೀವು, ತೆಲಂಗಾಣ ಸರ್ಕಾರ ಸೇರಿ 40% ಸಿಎಂ ಎಂದು ಪೋಸ್ಟರ್ ಹಾಕಿಸಿದ್ದೀರಿ. ಎರಡು ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಇರಬೇಕಾಗುತ್ತದೆ. ಕೇರಳ ಸಿಎಂ ರಾಜ್ಯಕ್ಕೆ ಆಗಮಿಸಿದಾಗ ನಾವು ಸಹ ಪೋಸ್ಟರ್ ಅಳವಡಿಸಬಹುದಿತ್ತು. ಆದರೆ, ಎರಡು ರಾಜ್ಯಗಳ ನಡುವೆ ರಚನಾತ್ಮಕ ಸಂಬಂಧ ಇರಬೇಕು ಎಂಬ ಉದ್ದೇಶದಿಂದ ನಾವು ಆ ಕಾರ್ಯ ಮಾಡಿಲ್ಲ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಾಕೆ ಜೈಲಿಗೆ ಹೋಗಿದ್ದರು ಎಂದು ನಾವು ಕ್ಯಾಂಪೇನ್ ಮಾಡಿದ್ದೇವಾ? ಸದನದ ಒಳಗೆ - ಹೊರಗೆ ಚರ್ಚಿಸಲು ಅವಕಾಶ ಇದೆ. ಚರ್ಚೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಿ. ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರು ಪಲಾಯನ ಮಾಡಲ್ಲ. ಹಗರಣವನ್ನು ಮುಚ್ಚಿಡುವ ಸರ್ಕಾರ ಮತ್ತು ನಾಯಕರು ಕಾಂಗ್ರೆಸ್​ನವರು. ಶಿಕ್ಷಣ ಇಲಾಖೆ ವೈದ್ಯಕೀಯ ಸೀಟು ವಿತರಣೆ, ಹಾಸಿಗೆ ದಿಂಬುಗಳಲ್ಲಿ ಹಗರಣ ಮಾಡಿದ್ದಾರೆ. ಇವರ ಹಗರಣವನ್ನು ನಾವು ಬಯಲು ಮಾಡುತ್ತೇವೆ ನಮ್ಮ ಹಗರಣ ಏನಾದರೂ ಇದ್ದರೆ ಅವರು ಬಯಲು ಮಾಡಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಪೇ ಸಿಎಂ ಪೋಸ್ಟರ್​​.. ಕಾಂಗ್ರೆಸ್, ಬಿಜೆಪಿಯಿಂದ ಪರ-ವಿರೋಧದ ಅಭಿಪ್ರಾಯ ವ್ಯಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.