ETV Bharat / state

ರೇಷನ್​ ಕಾರ್ಡ್​ ಇರೋರಿಗಷ್ಟೇ ಅಲ್ಲ, ಅರ್ಜಿ ಸಲ್ಲಿಸಿದವರಗೂ 3ತಿಂಗಳ ಪಡಿತರ - RATION_CARD

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಜಿದಾರರಿಗೂ ಮೂರು‌ ತಿಂಗಳ ಪಡಿತರ ನೀಡುವುದಾಗಿ ರಾಜ್ಯಸರ್ಕಾರ ಘೋಷಿಸಿದೆ.

_RATION_AVAILABLE_RATION_CARD_APPLIED_PEOPLE_ALSO
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ
author img

By

Published : Apr 12, 2020, 11:20 AM IST

ಬೆಂಗಳೂರು:ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಜಿದಾರರಿಗೂ ಮೂರು‌ ತಿಂಗಳ ಪಡಿತರ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು ಲಾಕ್​​​ಡೌನ್ ಮುಗಿಯುವವರಿಗೂ ಪಡಿತರ ವಿತರಣೆ ಮಾಡುವ ಘೋಷಣೆ ಮಾಡಿದೆ.

_RATION_AVAILABLE_RATION_CARD_APPLIED_PEOPLE_ALSO
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಾಗಿ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದು, ಅವರಿಗೆಲ್ಲಾ ಪಡಿತರ ಚೀಟಿ ವಿತರಣಾ ಕಾರ್ಯ ಬಾಕಿ ಇದೆ, ಪಡಿತರ ಚೀಟಿ ಮಂಜೂರಾಗಿಲ್ಲ ಆದರೂ ಅರ್ಜಿ ಸಲ್ಲಿಸಿರುವವರನ್ನೂ ಪಡಿತರ ಯೋಜನೆ ವ್ಯಾಪ್ತಿಯಲ್ಲಿ ಪರಿಗಣಿಸಿ ಏಪ್ರಿಲ್ ನಿಂದ ಜೂನ್ ವರೆಗೆ ಅಕ್ಕಿ ವಿತರಣೆ ಮಾಡಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತೀ ತಿಂಗಳು ಉಚಿತವಾಗಿ10 ಕೆಜಿ ಅಕ್ಕಿ ವಿತರಣೆ ಮಾಡಲಿದ್ದು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತೀ ಕೆಜಿ ಗೆ ರೂ 15 ರಂತೆ 10 ಕೆಜಿ ಅಕ್ಕಿ ವಿತರಣೆ ಮಾಡಲಿದೆ.ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ 1,88,152 ಅರ್ಜಿದಾರರಿಗೆ ಉಚಿತ ಅಕ್ಕಿ ಎಪಿಎಲ್ ಕಾರ್ಡ್ ಗೆ ಅರ್ಜಿಸಲ್ಲಿಸಿದ 61,333 ಅರ್ಜಿದಾರರಿಗೆ ಅಕ್ಕಿ ಪಡೆಯಲು ಅವಕಾಶ ಲಭ್ಯವಾಗಲಿದೆ, ಲಾಕ್ ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಪಡಿತರ ಕಾರ್ಡ್ ಅರ್ಜಿದಾರರಿಗೂ ಅಕ್ಕಿ ಸಿಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.