ಬೆಂಗಳೂರು: ಮಹಾನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಪೀಪಲ್ ಟ್ರೀ ಹಾಸ್ಪಿಟಲ್ಸ್ ಅಡ್ವಾನ್ಸ್ಡ್ ಸೆಂಟರ್ ಫಾರ್ ಹಾರ್ಟ್ ಕೇರ್, ಅಪರೂಪದ ಹೃದಯ ವಾಲ್ವ್ ಜೋಡಣೆ ಮಾಡಿದ್ದು, ರಾಜ್ಯದಲ್ಲೇ ಇಂಥಹದ್ದೊಂದು ಪ್ರಯತ್ನ ನಡೆಸಿದ ಐದನೇ ಪ್ರಯತ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಫತೀಲ್ ರೆಹಮಾನ್ ಅಹ್ಮದ್ ಅಲೌಬ್(ರೋಗಿ) ಅವರು 2010 ಮತ್ತು 2011 ರಲ್ಲಿ ಎರಡು ಬಾರಿ ಮಿಟ್ರಲ್ ವಾಲ್ವ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2011ರಲ್ಲಿ ಅವರ ಆರಂಭಿಕ ಮಿಟ್ರಲ್ ವಾಲ್ವ್ ಅನ್ನು ಬಯೋಪ್ರೊಸ್ಟೆಟಿಕ್ ಮಿಟ್ರಲ್ ವಾಲ್ವ್ ಗೆ ಬದಲಾಯಿಸಲಾಯಿತು. ಅವರ ದೇಹದಲ್ಲಿರುವ ಕವಾಟದ ಕಾರ್ಯಕ್ಷಮತೆ ಕ್ಷೀಣಿಸಿದ ಕಾರಣ ರೋಗಿಯು ತನ್ನ ಕವಾಟದಾದ್ಯಂತ ತೀವ್ರವಾದ ಮಿಟ್ರಲ್ ರಿಗರ್ಗಿಟೇಶನ್ ಸಮಸ್ಯೆಯಿಂದ ಬಳಲುತ್ತಿದ್ದು, ಹಾಗೂ ಇದೇ ಕಾರಣಕ್ಕೆ ಪೀಪಲ್ ಟ್ರೀ ಆಸ್ಪತ್ರೆಗೆ ಬಂದರು. ರೋಗಿಯು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆ, ಸ್ಪ್ಲೇನೋಮೆಗಾಲಿ, ಥ್ರಂಬೋಸೈಟೋಪೆನಿಯಾ ಮತ್ತು ಡ್ಯುವೋಡೆನಲ್ ಅಲ್ಸರ್ ಅನ್ನು ಹೊಂದಿದ್ದರು.
ಈ ಕೊಮೊರ್ಬಿಡಿಟಿಗಳ ಕಾರಣದಿಂದಾಗಿ ಅನೇಕ ಕೇಂದ್ರಗಳು ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದವು. ಪೀಪಲ್ ಟ್ರೀ ಹಾಸ್ಪಿಟಲ್ಸ್ ಅಡ್ವಾನ್ಸ್ಡ್ ಸೆಂಟರ್ ಫಾರ್ ಹಾರ್ಟ್ ಕೇರ್ನಲ್ಲಿ ರೋಗಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇಲ್ಲಿ ಇದಾದ ಬಳಿಕ ವೈದ್ಯರುಗಳು ಪ್ರಮುಖ ನಿರ್ಧಾರ ಕೈಗೊಂಡು ನೀಡಿದ ಚಿಕಿತ್ಸೆ ಇಂದು ರಾಜ್ಯದಲ್ಲಿಯೇ ಅಪರೂಪದ ಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಪರೂಪದ ಚಿಕಿತ್ಸೆ: ಮಿನಿಮಲ್ ಇನ್ ವೇಸಿವ್ ಟ್ರಾನ್ಸ್ಕ್ಯಾಥೆಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್ಮೆಂಟ್ ಹೆಸರಿನಿಂದ ಗುರುತಿಸಿಕೊಂಡಿರುವ ಈ ಚಿಕಿತ್ಸೆ ದೇಶಾದ್ಯಂತ ಅತ್ಯಂತ ಅಪರೂಪವಾಗಿ ನಡೆಸುವ ಒಂದು ಅತ್ಯಾಧುನಿಕ ಪ್ರಕ್ರಿಯೆಯಾಗಿದ್ದು, ಒಮ್ಮೆ ತೆರೆದ ಹೃದಯ ಚಿಕಿತ್ಸೆಗೆ ಒಳಗಾದ ಹಿರಿಯ ನಾಗರಿಕರಿಗೆ ಇದು ಮಾತ್ರ ಏಕೈಕ ಸಂಭವನೀಯ ಆಯ್ಕೆಯಾಗಿದೆ.
ಮತ್ತೊಮ್ಮೆ ಎದೆಯ ಭಾಗವನ್ನ ತೆರೆದು ಶಸ್ತ್ರಚಿಕಿತ್ಸೆ ನಡೆಸುವ ವಿಧಾನ ಅಪಾಯಕಾರಿಯಾಗಿದ್ದು, ಇದರ ಬದಲು ಕಡಿಮೆ ಪರಿಣಾಮ ಬೀರುವ ಮಿಟ್ರಲ್ ವಾಲ್ವ್ ರಿಪ್ಲೇಸ್ಮೆಂಟ್ ಒಂದು ನವೀನ ವಿಧಾನವಾಗಿದ್ದು, ಇದರಲ್ಲಿ ಕ್ಯಾತಿಟರ್ ಅನ್ನು ದೇಹದ ಕೆಳಗಿನ ಕೈ ಇಲ್ಲವೇ ಕಾಲಿನ ಮೂಲಕ ನಾಳಗಳನ್ನು ರಕ್ತನಾಳದ ಮೂಲಕ ಸೇರಿಸಲಾಗುತ್ತದೆ.
ಅಲ್ಲಿಂದ ಹೃದಯವನ್ನು ತಲುಪಿ ಅಗತ್ಯ ಸ್ಥಳದಲ್ಲಿ ವಾಲ್ವ್ ಮರುಜೊಡನೆ ಮಾಡುವ ಕಾರ್ಯ ಪೂರೈಸಲಾಯಿತು. ನಂತರ, ರೋಗಿಯನ್ನು ಸ್ಥಿರ ಸ್ಥಿತಿಯಲ್ಲಿ ಐಸಿಯುಗೆ ವರ್ಗಾಯಿಸಲಾಯಿತು ಮತ್ತು 5 ದಿನಗಳ ನಂತರ ಬಿಡುಗಡೆ ಮಾಡಲಾಯಿತು. ಪ್ರಸ್ತುತ ರೋಗಿ ಆರೋಗ್ಯವಂತರಾಗಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಜಾಗೃತಿ: ಇಂದು ರೋಗಿಯ ಜೊತೆ ಪೀಪಲ್ ಟ್ರೀ ಆಸ್ಪತ್ರೆಯ ವೈದ್ಯರು ಸುದ್ದಿಗೋಷ್ಠಿ ನಡೆಸಿ ಒಟ್ಟಾರೆ ಚಿಕಿತ್ಸೆಯ ವಿವರ ಹಾಗೂ ರೋಗಿಯ ಸದ್ಯದ ಸ್ಥಿತಿಯನ್ನು ವಿವರಿಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೀಪಲ್ ಟ್ರೀ ಆಸ್ಪತ್ರೆಗಳ ಎಂಡಿ, ಸಿಇಒ ಡಾ.ಜೋತಿ ಎಸ್ ನೀರಜಾ, "ಜೀವ ಉಳಿಸಲು ಬದ್ಧವಾಗಿರುವ ಅತ್ಯಂತ ಸಮರ್ಪಿತ ಮತ್ತು ಭಾವೋದ್ರಿಕ್ತ ಹೃದ್ರೋಗ ಚಿಕಿತ್ಸಾ ತಂಡವನ್ನು ನಾವು ಹೊಂದಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ! ತಂಡವು ಇತ್ತೀಚಿನ ಎಲ್ಲಾ ಸುಧಾರಿತ ಕಾರ್ಯವಿಧಾನಗಳನ್ನು ನಿರ್ವಹಿಸಲು ಉತ್ತಮ ತರಬೇತಿ ಪಡೆದಿದೆ. ನಾವು ಹೃದಯದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜಾಗೃತಿ ಮೂಡಿಸಲು ಬದ್ಧರಾಗಿದ್ದೇವೆ” ಎಂದರು.
ಡಾ. ಪ್ರಸಾದ್ ಭಟ್ (ಹೃದಯ ತಜ್ಞ), ಡಾ. ದಿವಾಕರ್ (ಹೃದಯ ತಜ್ಞ), ಡಾ. ಅಕ್ಷಯ್ (ಹೃದಯ ಎದೆಗೂಡಿನ ಶಸ್ತ್ರಚಿಕಿತ್ಸಕ), ಡಾ. ಮಂಜುನಾಥ್ (ಹೃದಯ ತಜ್ಞ), ಡಾ. ಸುಮಾ ಕೆ ರಾವ್ (ಹೃದಯ ಅರಿವಳಿಕೆ ಮತ್ತು ಇಂಟೆನ್ಸಿವಿಸ್ಟ್ ತಜ್ಞರು) ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ನಮ್ಮ ರೋಗಿಯು ಸುಡಾನ್ನ 60 ವರ್ಷದ ವ್ಯಕ್ತಿಯಾಗಿದ್ದು, ಕಳೆದ 10 ವರ್ಷಗಳ ಹಿಂದೆ ಎರಡು ಬಾರಿ ಮಿಟ್ರಲ್ ವಾಲ್ವ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಜೈವಿಕ ಕವಾಟವು ಹದಗೆಟ್ಟಿತ್ತು, ಆದ್ದರಿಂದ ಅವರು ತೀವ್ರವಾದ ಮಿಟ್ರಲ್ ರಿಗರ್ಗಿಟೇಶನ್ ಅನ್ನು ಅನುಭವಿಸುತ್ತಿದ್ದರು. ಇದರಿಂದಾಗಿ ಹಲವಾರು ರೋಗಲಕ್ಷಣಗಳು ಕಾಣಿಸಿಕೊಂಡವು ಎಂದು ವಿವರಿಸಿದರು. ಹೃದ್ರೋಗ ತಜ್ಞ ಡಾ.ಪ್ರಸಾದ್ ಭಟ್ ನೂತನ ಚಿಕಿತ್ಸೆಯ ಸಂಪೂರ್ಣ ವಿವರ ನೀಡಿದರು.
ಇದನ್ನೂ ಓದಿ: ಕಿಮ್ಸ್ನಿಂದ ಮತ್ತೊಂದು ಸಾಧನೆ: ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ಬಡರೋಗಿಯ ಜೀವ ಉಳಿಸಿದ ಸಂಜೀವಿನಿ