ಬೆಂಗಳೂರು: ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ನಾಲ್ಕು ದಿನ ನಿರಂತರವಾಗಿ ಅತ್ಯಾಚಾರವೆಸಗಿದ್ದ ನಾಲ್ವರು ಹಾಗೂ ಸಹಕರಿಸಿದ ಇಬ್ಬರು ಮಹಿಳೆಯರನ್ನು ಎಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇಶವಮೂರ್ತಿ, ರಫೀಕ್, ಶರತ್, ಸತ್ಯರಾಜು ರಾಜೇಶ್ವರಿ ಹಾಗೂ ಕಲಾವತಿ ಎಂದು ಗುರುತಿಸಲಾಗಿದೆ.
ಸಂತ್ರಸ್ತೆಯು ಆರೋಪಿ ರಾಜೇಶ್ವರಿ ಬಳಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದಳು. ಜ್ಯೂಸ್ನಲ್ಲಿ ಪ್ರಜ್ಞೆ ತಪ್ಪಿಸುವ ಔಷಧಿ ಬೆರೆಸಿ ಕೊಟ್ಟಿದ್ದ ರಾಜೇಶ್ವರಿ ಆರೋಪಿ ಕೇಶವಮೂರ್ತಿ ಅತ್ಯಾಚಾರವೆಸಗಲು ಸಾಥ್ ನೀಡಿದ್ದಳು. ಪ್ರಜ್ಞೆ ಬಂದ ನಂತರ ಸ್ನಾನ ಮಾಡಿಸಿ ಅಪ್ರಾಪ್ತೆಯನ್ನು ಮನೆಗೆ ಕಳಿಸಿದ್ದ ರಾಜೇಶ್ವರಿ ಯಾರಿಗೂ ವಿಷಯ ತಿಳಿಸದಂತೆ ಬೆದರಿಸಿದ್ದಳು. ನಂತರ ಇದೇ ರೀತಿ ನಾಲ್ಕು ದಿನಗಳ ಕಾಲ ಉಳಿದ ಆರೋಪಿಗಳನ್ನು ಮನೆಗೆ ಕರೆಸಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಲು ನೆರವಾಗಿದ್ದಳು. ಅತ್ಯಾಚಾರ ಮಾಡಿದವರಿಂದ ಹಣ ಪಡೆದುಕೊಳ್ಳುತ್ತಿದ್ದಳು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಏಕಸದಸ್ಯ ಪೀಠಕ್ಕೆ ಸಂತ್ರಸ್ತೆ ಅರ್ಜಿಗಳು ವರ್ಗಾವಣೆ
ನಾಲ್ಕು ದಿನಗಳ ಬಳಿಕ ತೀವ್ರ ಅಸ್ವಸ್ಥಳಾದ ಅಪ್ರಾಪ್ತೆ ತನ್ನ ಪೋಷಕರಿಗೆ ಅಸಲಿ ವಿಷಯ ತಿಳಿಸಿದ್ದಾಳೆ. ಬಳಿಕ ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರಿಗೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ದೂರಿನ ಬಳಿಕ ಆರು ಮಂದಿ ಆರೋಪಿಗಳನ್ನು, ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.