ETV Bharat / state

ಬರ್ತೀವೆಂದು ಜಾರಿಕೊಂಡ ಕೈ ನಾಯಕರು, ಜಾರಕಿಹೊಳಿ ಈಗ ಏಕಾಂಗಿ..!?

author img

By

Published : Apr 25, 2019, 11:29 PM IST

ತಮ್ಮೊಂದಿಗೆ ಇತರೆ ರೆಬೆಲ್ ಶಾಸಕರು ಕೂಡ ಕೈ ಜೋಡಿಸಬಹುದು ಎಂಬ ನಿರೀಕ್ಷೆ ಹೊಂದಿದ್ದ ರಮೇಶ್ ಗೆ ನಿರಾಸೆ ಉಂಟಾಗಿದ್ದು ಯಾವೊಬ್ಬ ಶಾಸಕರು ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿಲ್ಲ. ರಮೇಶ್ ಜಾರಕಿಹೊಳಿಗೆ ಕೈ ಕೊಟ್ರು ಅತೃಪ್ತ ಶಾಸಕರು ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

ರಮೇಶ್ ಜಾರಕಿಹೊಳಿ ಈಗ ಏಕಾಂಗಿ..!?

ಬೆಂಗಳೂರು: ಅತೃಪ್ತ ಕಾಂಗ್ರೆಸ್ ಶಾಸಕರನ್ನ ನಂಬಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದ್ಯ ಏಕಾಂಗಿಯಾಗಿದ್ದಾರೆ. ತಮ್ಮೊಂದಿಗೆ ಇತರೆ ರೆಬೆಲ್ ಶಾಸಕರು ಕೂಡ ಕೈ ಜೋಡಿಸಬಹುದು ಎಂಬ ನಿರೀಕ್ಷೆ ಹೊಂದಿದ್ದ ರಮೇಶ್ ಗೆ ನಿರಾಸೆ ಉಂಟಾಗಿದ್ದು ಯಾವೊಬ್ಬ ಶಾಸಕರು ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿಲ್ಲ. ರಮೇಶ್ ಜಾರಕಿಹೊಳಿಗೆ ಅತೃಪ್ತ ಶಾಸಕರು ಕೈ ಕೊಟ್ರು ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

ರಮೇಶ್ ಜಾರಕಿಹೊಳಿ ಈಗ ಏಕಾಂಗಿ..!?

ಹುಸಿಯಾದ ನಿರೀಕ್ಷೆ
ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಳ್ಳೋದಕ್ಕೆ ಹಿಂದೇಟು ಹಾಕುತ್ತಿರುವ ಶಾಸಕರು ಫಲಿತಾಂಶ ಪ್ರಕಟ ಆಗುವವರೆಗೂ ನಿಮ್ಮ ಜೊತೆ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಎನ್ನಲಾಗುತ್ತಿದೆ. ಶಾಸಕ ನಾಗೇಂದ್ರ ಯಾವುದೇ ರೀತಿಯಲ್ಲೂ ಮುಖಕ್ಕೆ ಸಿಕ್ಕಿಲ್ಲ ಇನ್ನೊಂದೆಡೆ ಆಪ್ತರೆಂದೇ ಗುರುತಿಕೊಂಡಿದ್ದ ಮಹೇಶ್ ಕುಮಟಳ್ಳಿ ಕೂಡ ಮೊಬೈಲ್ ಸ್ವಿಚ್ ಆಫ್ ಮಾಡಿ ಕೊಂಡಿದ್ದು ಯಾರ ಕೈಗೂ ಸಿಗುತ್ತಿಲ್ಲ. ಶಾಸಕರು ಸಂಪರ್ಕಕ್ಕೆ ಸಿಗದ ಹಿನ್ನೆಲೆ ಮತ್ತಷ್ಟು ಆಕ್ರೋಶಗೊಂಡಿರುವ ರಮೇಶ್ ಜಾರಕಿಹೊಳಿ, ನಾನೊಬ್ಬನೇ ರಾಜೀನಾಮೆ ನೀಡಲ್ಲ. ಗುಂಪಿನಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ನಿನ್ನೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾಗದೆ ಹೋಗಿದ್ದಾರೆ.

ಪಕ್ಷದಲ್ಲೂ ನಿರ್ಲಕ್ಷ
ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳುತ್ತಿದ್ದರು ಕೂಡ ಇದುವರೆಗೂ ಯಾವುದೇ ರೀತಿ ರಮೇಶ್ ಮನವೊಲಿಸುವ ಕಾರ್ಯ ಮಾಡುತ್ತಿಲ್ಲ. ಒಂದು ರೀತಿ ಇವರು ಪಕ್ಷಕ್ಕೂ ಬೇಡವಾಗಿದ್ದಾರೆ. ರಾಜೀನಾಮೆ ಕೊಟ್ಟು ಬೇಕಾದ್ರೆ ಹೋಗಲಿ ಎಂಬ ತೀರ್ಮಾನಕ್ಕೆ ಬಂದಿರುವ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಮನವೊಲಿಸುವ ಮಾತನಾಡಿದರು ಆಂತರಿಕವಾಗಿ ಈ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನು ಅರಿತಿರುವ ಇತರೆ ಅತೃಪ್ತ ಶಾಸಕರು ರಮೇಶ್ ರತ್ತ ಗಮನ ಹರಿಸುತ್ತಿಲ್ಲ. ನಾಳೆ ಬೆಳಗ್ಗೆವರೆಗೂ ಚಿತ್ರಣ ನೋಡಿ ಒಬ್ಬರೇ ರಾಜೀನಾಮೆ ಕೊಡುವ ಬಗ್ಗೆ ರಮೇಶ್ ಜಾರಕಿಹೊಳಿ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಶಾಸಕ ನಾಗೇಂದ್ರ ಇದುವರೆಗೂ ರಮೇಶ್ ಜೊತೆ ಆಪ್ತ ರಾಗಿಯೇ ಗುರುತಿಸಿಕೊಂಡಿದ್ದರು. ಆದರೆ ಈಗ ಅವರು ರಮೇಶ್ ವಿರುದ್ಧ ವೈಯಕ್ತಿಕವಾಗಿ ನೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಳ್ಳಾರಿ ಲೋಕಸಭೆ ಚುನಾವಣೆಗೆ ಸೋದರ ವೆಂಕಟೇಶ್ ಪ್ರಸಾದ್ ಅಭ್ಯರ್ಥಿ ಆಗುತ್ತಾರೆ ಎಂಬ ನಂಬಿಕೆಯಲ್ಲಿ ನಾಗೇಂದ್ರ ಇದ್ದರು. ಇದಾದ ಬಳಿಕ ಮುಂದಿನ ದಿನಗಳಲ್ಲಿ ತಾವು ಕೂಡ ಬಿಜೆಪಿಗೆ ಸೇರಿದರಾಯಿತು ಎಂದು ತೀರ್ಮಾನಿಸಿದ್ದರು. ಆದರೆ ಇಲ್ಲಿ ಅವರ ಆಶಯಕ್ಕೆ ವ್ಯತಿರಿಕ್ತವಾಗಿ ರಮೇಶ್ ಜಾರಕಿಹೊಳಿ ತಮ್ಮ ಸಂಬಂಧಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ಕೊಡಿಸಿದ್ದು ನಾಗೇಂದ್ರ ಗೆ ತೀವ್ರ ಬೇಸರ ಉಂಟುಮಾಡಿದೆ. ಇದರಿಂದಾಗಿಯೇ ಈಗ ಅವರು ರಮೇಶ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

Intro:newsBody:ರಾಜೀನಾಮೆ ಕೊಡುವುದಾಗಿ ಘೋಷಿಸಿದ್ದ ರಮೇಶ್ ಈಗ ಏಕಾಂಗಿ!?

ಬೆಂಗಳೂರು: ಅತೃಪ್ತ ಕಾಂಗ್ರೆಸ್ ಶಾಸಕರನ್ನ ನಂಬಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದ್ಯ ಏಕಾಂಗಿಯಾಗಿದ್ದಾರೆ.
ತಮ್ಮೊಂದಿಗೆ ಇತರೆ ರೆಬೆಲ್ ಶಾಸಕರು ಕೂಡ ಕೈ ಜೋಡಿಸಬಹುದು ಎಂಬ ನಿರೀಕ್ಷೆ ಹೊಂದಿದ್ದ ರಮೇಶ್ ಗೆ ನಿರಾಸೆ ಉಂಟಾಗಿದ್ದು ಯಾವೊಬ್ಬ ಶಾಸಕರು ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿಲ್ಲ. ರಮೇಶ್ ಜಾರಕಿಹೊಳಿಗೆ ಕೈ ಕೊಟ್ರು ಅತೃಪ್ತ ಶಾಸಕರು ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.
ಹುಸಿಯಾದ ನಿರೀಕ್ಷೆ
ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಳ್ಳೋದಕ್ಕೆ ಹಿಂದೇಟು ಹಾಕುತ್ತಿರುವ ಶಾಸಕರು ಫಲಿತಾಂಶ ಪ್ರಕಟ ಆಗುವವರೆಗೂ ನಿಮ್ಮ ಜೊತೆ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಎನ್ನಲಾಗುತ್ತಿದೆ. ಶಾಸಕ ನಾಗೇಂದ್ರ ಯಾವುದೇ ರೀತಿಯಲ್ಲೂ ಮುಖಕ್ಕೆ ಸಿಕ್ಕಿಲ್ಲ ಇನ್ನೊಂದೆಡೆ ಆಪ್ತರೆಂದೇ ಗುರುತಿಕೊಂಡಿದ್ದ ಮಹೇಶ್ ಕುಮಟಳ್ಳಿ ಕೂಡ ಮೊಬೈಲ್ ಸ್ವಿಚ್ ಆಫ್ ಮಾಡಿ ಕೊಂಡಿದ್ದು ಯಾರ ಕೈಗೂ ಸಿಗುತ್ತಿಲ್ಲ.
ಶಾಸಕರು ಸಂಪರ್ಕಕ್ಕೆ ಸಿಗದ ಹಿನ್ನೆಲೆ ಮತ್ತಷ್ಟು ಆಕ್ರೋಶಗೊಂಡಿರುವ ರಮೇಶ್ ಜಾರಕಿಹೊಳಿ, ನಾನೊಬ್ಬನೇ ರಾಜೀನಾಮೆ ನೀಡಲ್ಲ. ಗುಂಪಿನಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ನಿನ್ನೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾಗದೆ ಹೋಗಿದ್ದಾರೆ.
ಪಕ್ಷದಲ್ಲೂ ನಿರ್ಲಕ್ಷ
ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳುತ್ತಿದ್ದರು ಕೂಡ ಇದುವರೆಗೂ ಯಾವುದೇ ರೀತಿ ರಮೇಶ್ ಮನವೊಲಿಸುವ ಕಾರ್ಯ ಮಾಡುತ್ತಿಲ್ಲ. ಒಂದು ರೀತಿ ಇವರು ಪಕ್ಷಕ್ಕೂ ಬೇಡವಾಗಿದ್ದಾರೆ. ರಾಜೀನಾಮೆ ಕೊಟ್ಟು ಬೇಕಾದ್ರೆ ಹೋಗಲಿ ಎಂಬ ತೀರ್ಮಾನಕ್ಕೆ ಬಂದಿರುವ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಮನವೊಲಿಸುವ ಮಾತನಾಡಿದರು ಆಂತರಿಕವಾಗಿ ಈ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನು ಅರಿತಿರುವ ಇತರೆ ಅತೃಪ್ತ ಶಾಸಕರು ರಮೇಶ್ ರತ್ತ ಗಮನ ಹರಿಸುತ್ತಿಲ್ಲ. ನಾಳೆ ಬೆಳಿಗ್ಗೆ ವರೆಗೂ ಚಿತ್ರಣ ನೋಡಿ ಒಬ್ಬರೇ ರಾಜೀನಾಮೆ ಕೊಡುವ ಬಗ್ಗೆ ರಮೇಶ್ ಜಾರಕಿಹೊಳಿ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.
ನಾಗೇಂದ್ರ ಬೇಸರ
ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಶಾಸಕ ನಾಗೇಂದ್ರ ಇದುವರೆಗೂ ರಮೇಶ್ ಜೊತೆ ಆಪ್ತ ರಾಗಿಯೇ ಗುರುತಿಸಿಕೊಂಡಿದ್ದರು. ಆದರೆ ಈಗ ಅವರು ರಮೇಶ್ ವಿರುದ್ಧ ವೈಯಕ್ತಿಕವಾಗಿ ನೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಬಳ್ಳಾರಿ ಲೋಕಸಭೆ ಚುನಾವಣೆಗೆ ಸೋದರ ವೆಂಕಟೇಶ್ ಪ್ರಸಾದ್ ಅಭ್ಯರ್ಥಿ ಆಗುತ್ತಾರೆ ಎಂಬ ನಂಬಿಕೆಯಲ್ಲಿ ನಾಗೇಂದ್ರ ಇದ್ದರು. ಇದಾದ ಬಳಿಕ ಮುಂದಿನ ದಿನಗಳಲ್ಲಿ ತಾವು ಕೂಡ ಬಿಜೆಪಿಗೆ ಸೇರಿದರಾಯಿತು ಎಂದು ತೀರ್ಮಾನಿಸಿದ್ದರು. ಆದರೆ ಇಲ್ಲಿ ಅವರ ಆಶಯಕ್ಕೆ ವ್ಯತಿರಿಕ್ತವಾಗಿ ರಮೇಶ್ ಜಾರಕಿಹೊಳಿ ತಮ್ಮ ಸಂಬಂಧಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ಕೊಡಿಸಿದ್ದು ನಾಗೇಂದ್ರ ಗೆ ತೀವ್ರ ಬೇಸರ ಉಂಟುಮಾಡಿದೆ. ಇದರಿಂದಾಗಿಯೇ ಈಗ ಅವರು ರಮೇಶ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.Conclusion:news

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.