ETV Bharat / state

ಸಿಡಿ ಪ್ರಕರಣ: ಇಂದು ಎಸ್​ಐಟಿ ವಿಚಾರಣೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರು ಸಾಧ್ಯತೆ.!?

author img

By

Published : Apr 2, 2021, 11:59 AM IST

ಸದ್ಯದ ಮಾಹಿತಿ ಪ್ರಕಾರ ರಮೇಶ್​ ಜಾರಕಿಹೊಳಿ ಇಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವುದು ಅನುಮಾನ ಎಂದು ಹೇಳಲಾಗ್ತಿದೆ. ಆಡುಗೋಡಿಯ ವಿಚಾರಣೆಗೆ ಇಂದು ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಸಮಯ 12 ಗಂಟೆಯಾಗುತ್ತಿದ್ದರೂ ರಮೇಶ್ ಜಾರಕಿಹೊಳಿ ಬರುವ ಲಕ್ಷಣ ಕಾಣಿಸುತ್ತಿಲ್ಲ. ನ್ಯಾಯಾಧೀಶರ ಹಾಗೂ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆ ಸಾರ್ವಜನಿಕವಾಗಿ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿಲ್ಲ.

Ramesh Jarkiholi may be absent for SIT probe today
ಸಿಡಿ ಪ್ರಕರಣ

ಬೆಂಗಳೂರು: ಸಿಡಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನೋಟಿಸ್​ ನೀಡಿದ್ದು, ಇಂದು ಗೈರಾಗುವ ಸಾಧ್ಯತೆಯಿದೆ.

ಆಡುಗೋಡಿಯ ವಿಚಾರಣೆಗೆ ಇಂದು ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಸಮಯ 12 ಗಂಟೆಯಾಗುತ್ತಿದ್ದರೂ ರಮೇಶ್ ಜಾರಕಿಹೊಳಿ ಬರುವ ಲಕ್ಷಣ ಕಾಣಿಸುತ್ತಿಲ್ಲ.

ನ್ಯಾಯಾಧೀಶರ ಹಾಗೂ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆ ಸಾರ್ವಜನಿಕವಾಗಿ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿಲ್ಲ. ಬಂಧನ ಭೀತಿಯಿಂದ ತೆರೆಮರೆಯಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರಾ ಎಂಬ ಅನುಮಾನ ಶುರುವಾಗಿದೆ.

ಈಗಾಗಲೇ ಮೂರು ಬಾರಿ ವಿಚಾರಣೆಗೆ ಹಾಜರಾದಾಗ ಯುವತಿ ವಿಡಿಯೋ ಹೇಳಿಕೆ ಹಾಗೂ ಎಫ್ಐಆರ್ ಪ್ರತಿ ಬಿಟ್ಟು ಯಾವುದೇ ಸಾಕ್ಷ್ಯ ಎಸ್ಐಟಿ ಬಳಿ ಇರಲಿಲ್ಲ. ಸದ್ಯ ಯುವತಿಯೇ ನೇರವಾಗಿ ನ್ಯಾಯಾಧೀಶರ ಮುಂದೆ 164ರ ಅಡಿ ಸ್ಟೇಟ್​ಮೆಂಟ್ ನೀಡಿದ್ದಾಳೆ. ಅಲ್ಲದೇ 161 ರ ಅಡಿ ತನಿಖಾಧಿಕಾರಿ ಮುಂದೆಯೂ ಹೇಳಿಕೆ ನೀಡಿ 300ಕ್ಕೂ ಅಧಿಕ ಪುಟಗಳ ವಾಟ್ಸ್​ಆ್ಯಪ್​ ಚಾಟ್​ ಕೊಟ್ಟಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಮಾಸ್ಕ್ ಹಾಕಿಕೊಳ್ಳುವಂತೆ ಸಚಿವ ಕೆ.ಎಸ್.ಈಶ್ವರಪ್ಪಗೆ ಭದ್ರತಾ ಸಿಬ್ಬಂದಿ ಮನವಿ-VIDEO

ಮಾಜಿ ಸಚಿವರು ಕರೆ ಮಾಡಿದ್ದಾರೆ ಎನ್ನಲಾದ ವಾಟ್ಸ್​ಆ್ಯಪ್​ ಕಾಲ್, ವಿಡಿಯೋ ಕಾಲ್ ಸ್ಕ್ರೀನ್ ಶಾಟ್ಸ್ ಹಾಗೂ ಕೆಲವೊಂದು ಗಿಫ್ಟ್ ಬಿಲ್​ಗಳನ್ನು ತನಿಖಾಧಿಕಾರಿಗೆ ಯುವತಿ ನೀಡಿದ್ದು, ಈ ಎಲ್ಲಾ ಸಾಕ್ಷ್ಯಾಧಾರಗಳ‌ ಆಧಾರದ ಮೇಲೆ ಎಸ್ಐಟಿ ವಿಚಾರಣೆ ನಡೆಸಲಿದೆ.

ಈ ಹಿಂದೆ ಕೇಳಿದ ಎಲ್ಲ ಪ್ರಶ್ನೆಗಳಿಗೂ ‘ಗೊತ್ತಿಲ್ಲ, ವಕೀಲರನ್ನ ಕೇಳಿ ಹೇಳುತ್ತೇನೆ. ಅದು ನಾನಲ್ಲ.. ಅದು ನಕಲಿ ಸಿಡಿ, ಯುವತಿ ಯಾರು ಅಂತಾನೇ ಗೊತ್ತಿಲ್ಲ’ ಎಂದೇ ಮಾಜಿ ಸಚಿವರು ಉತ್ತರಿಸಿದ್ದರು.

ಸದ್ಯದ ಮಾಹಿತಿ ಪ್ರಕಾರ ರಮೇಶ್​ ಜಾರಕಿಹೊಳಿ ಇಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವುದು ಅನುಮಾನ ಎಂದು ಹೇಳಲಾಗ್ತಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.