ETV Bharat / state

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಇಂದು ಅಥವಾ ನಾಳೆ ಎಸ್​ಐಟಿ ತಂಡ ರಚನೆ!

author img

By

Published : Mar 11, 2021, 1:23 PM IST

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅಥವಾ ನಾಳೆ ಎಸ್​ಐಟಿ ತಂಡ ರಚನೆಯಾಗುವ ಸಾಧ್ಯತೆಯಿದೆ.

Today or tomorrow SIT team ready, Today or tomorrow SIT team ready to investigate, Ramesh jarkiholi cd case, Ramesh jarkiholi cd case news, ಇಂದು ಅಥವಾ ನಾಳೆ ಎಸ್​ಐಟಿ ತಂಡ ರಚನೆ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅಥವಾ ನಾಳೆ ಎಸ್​ಐಟಿ ತಂಡ ರಚನೆ, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ, ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ  ಸುದ್ದಿ,
ಸಂಗ್ರಹ ಚಿತ್ರ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ತಂಡಕ್ಕೆ ವಹಿಸಲಾಗಿದ್ದು, ಇಂದು ಅಥವಾ ನಾಳೆಗೆ ಪೂರ್ಣ ತಂಡ ರಚನೆಯಾಗಲಿದೆ‌.

ಈಗಾಗಲೇ ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್​ಐಟಿ ರಚನೆ ಮಾಡಿರುವ ರಾಜ್ಯ ಸರ್ಕಾರ ಸಿಡಿ ಹಿಂದೆ ಇರುವ ಕಾಣದ ಕೈಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಬುಧವಾರ ಆದೇಶಿಸಿತ್ತು. ತಂಡದಲ್ಲಿ ಎಷ್ಟು ಮಂದಿ ಅಧಿಕಾರಿಗಳು ಇರಬೇಕು, ಸಿಬ್ಬಂದಿ ಎಷ್ಟು ಇರಬೇಕು ಎಂಬುದರ ಬಗ್ಗೆ ಸಂಪೂರ್ಣ ತಂಡ ರಚನೆಯಾಗಲಿದೆ.

ಸಿಡಿ ಹಿಂದಿರುವ ಷಡ್ಯಂತ್ರದ ಬಗ್ಗೆ ತನಿಖೆ

ಪ್ರಕರಣದಲ್ಲಿ ಸಿಡಿ ಬಿಡುಗಡೆ ಮಾಡಿದ್ದು ಯಾರು?, ಎಲ್ಲಿಂದ ಬಂತು?, ಸಿಡಿ ರಿಲೀಸ್​ಗೆ ಕುಮ್ಮಕ್ಕು ಕೊಡಲಾಗಿದ್ಯಾ?, ಸಿಡಿ ಅಸಲಿಯೋ ಅಥವಾ ನಕಲಿಯೋ? ಸೇರಿದಂತೆ ಸಿಡಿ ಹಿಂದಿನ ಕಾಣದ ಕೈಗಳ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿ ಎಸ್ಐಟಿ ಮೇಲಿದೆ.

ಈಗಾಗಲೇ ಸಿಡಿ ಬಿಡುಗಡೆ ಹಿಂದೆ ಷಡ್ಯಂತ್ರ ಇದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಷಡ್ಯಂತ್ರ ನಡೆಸಿದವರು ಯಾರು?, ಯಾಕೆ ಷಡ್ಯಂತ್ರ ನಡೆಸಲಾಗಿದೆ ಎಂದು ತನಿಖೆ ಕೈಗೊಂಡು ಈ ಬಗ್ಗೆ ಸರ್ಕಾರಕ್ಕೆ ಎಸ್ಐಟಿ ವರದಿ ನೀಡಲಿದೆ.

ವರದಿಯಲ್ಲಿನ ಪ್ರಮುಖ ಅಂಶಗಳ‌ ಆಧಾರದ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಿದ ಬಳಿಕ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.