ಬೆಂಗಳೂರು : ಮಹದಾಯಿ ಅಧಿಸೂಚನೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗುವ ಸಂಬಂಧ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ, ನೋಟಿಫಿಕೇಷನ್ ಹೊರಡಿಸಿರುವ ಕುರಿತು ಸಿಎಂ ಜೊತೆ ಸಮಾಲೋಚಿಸಿದರು. ಸದ್ಯ ಯೋಜನೆ ಅನುಷ್ಠಾನ, ನೀರಿನ ಸಂಪೂರ್ಣ ಬಳಕೆಗೆ ರಾಜ್ಯ ಸರ್ಕಾರ ಯಾವ ರೀತಿ ಮುಂದುವರೆಯಬೇಕು, ಇದರಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಚರ್ಚೆ ನಡೆಸಿದರು.
ಸರ್ಕಾರದ ಮುಂದಿರುವ ಮಹದಾಯಿ ಯೋಜನೆ ಸವಾಲುಗಳಿವು..
1.ಮೊದಲು ಕೇಂದ್ರ ಸರ್ಕಾರ ಮಹದಾಯಿ ಜಲ ನಿರ್ವಹಣಾ ಪ್ರಾಧಿಕಾರ ರಚಿಸಬೇಕು.
2.ಬಳಿಕ ರಾಜ್ಯ ಸರ್ಕಾರ ಮಹದಾಯಿ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಬೇಕು.
3.ಯೋಜನೆ ವಿಸ್ತಾರ, ಯೋಜನೆ ವೆಚ್ಚ, ಯೋಜನೆಗೆ ಅಗತ್ಯವಾದ ಪ್ರದೇಶಗಳ ಬಗ್ಗೆ ವರದಿ ಸಿದ್ಧಪಡಿಸಬೇಕು.
4.ಯೋಜನೆಗೆ ಕೇಂದ್ರ ಜಲ ಆಯೋಗದ ನಿರಪೇಕ್ಷಣಾ ಪತ್ರವನ್ನ ರಾಜ್ಯ ಸರ್ಕಾರ ಪಡೆಯಬೇಕು.
5.ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು.
6. ಯೋಜನೆಗೆ ಸಕಲ ಸಿದ್ಧತೆ ಬಳಿಕ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಬೇಕು.
7.ಯೋಜನೆಗೆ ಈ ವರ್ಷದ ಬಜೆಟ್ ಅನುದಾನ ಮೀಸಲಿಡಬೇಕು.
8. ಸ್ಥಗಿತಗೊಂಡಿರೋ ಕಳಸಾ ಬಂಡೂರಿ ಯೋಜನೆಗೆ ಚಾಲನೆ ನೀಡಬೇಕು.