ಬೆಂಗಳೂರು: ಅಣ್ಣಾ ತಂಗಿಯರ ಬಂಧಕ್ಕೆ ಹೆಸರುವಾಸಿ ರಕ್ಷಾ ಬಂಧನ ಹಬ್ಬ. ಇನ್ನೇನು ಈ ಹಬ್ಬಕ್ಕೆ ಕೆಲವೇ ದಿನ ಬಾಕಿ ಉಳಿದಿದೆ. ಆದ್ರೆ ದೇಶಕಾಯೋ ಸೈನಿಕರಿಗೆ ಮಾತ್ರ ರಕ್ಷಾ ಬಂಧನ ಮಿಸ್ ಮಾಡಿಕೊಳ್ತಿರೊ ಬೆನ್ನಲ್ಲೆ ಇಲ್ಲೊಂದು ಮಹಿಳೆಯರ ತಂಡ ಸೈನಿಕರಿಗೆ ರಕ್ಷಾ ಬಂಧನದ ಸಿಹಿ ಹುಣಿಸಿದ್ದಾರೆ.
ಹೌದು, ದೇಶಸೇವೆಗಾಗಿ ಕುಟುಂಬವನ್ನ ಬಿಟ್ಟು ಬಂದಿದ್ದ ವೀರ ಸೈನಿಕರಿಗೆ ಶುಭ ಕೋರೋಕೆ ಅಂತ ಪ್ರಜಾಪಿತ ಬ್ರಹ್ಮಕುಮಾರಿ ಸಿಬ್ಬಂದಿ ಮುಂದಾಗಿದ್ದು, ಯಲಹಂಕ ಬಳಿಯ ತರಬೇತಿ ಸಂಸ್ಥೆಯ ಸೈನಿಕರಿಗೆ ರಾಕಿ ಕಟ್ಟುವ ಮುಖಾಂತರ ರಕ್ಷಾ ಬಂಧನವನ್ನ ಆಚರಿಸಿದ್ರು.
ನಂತರ ಈ ಕುರಿತು ಪ್ರತಿಕ್ರಿಯಿಸಿರುವ ಬ್ರಹ್ಮಕುಮಾರಿ ಸಂಸ್ಥೆಯ ಸದಸ್ಯೆ, ಯೋಧರು ಮಳೆ, ಚಳಿ, ಬಿಸಿಲೆನ್ನದೆ ಗಡಿಯಲ್ಲಿ ಕಾವಲು ಕಾಯುವ ಮೂಲಕ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ಯೋಧರಿಗೆ ಶುಭ ಕೋರಿದ್ದು ಅವಿಸ್ಮರಣೀಯ ಎಂದರು.