ETV Bharat / state

ಸಿಎಂ ಕಚೇರಿಯಲ್ಲಿ ಕಡತ ನಾಪತ್ತೆ ಆರೋಪ ಆಧಾರರಹಿತ: ರಾಕೇಶ್ ಸಿಂಗ್ ಸ್ಪಷ್ಟನೆ - ತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಬಿಬಿಎಂಪಿ ಜಾಹೀರಾತು ನೀತಿ ಕುರಿತ ಕಡತ ಕಣ್ಮರೆಯಾಗಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಆಧಾರರಹಿತ ಮತ್ತು ಸುಳ್ಳಿನಿಂದ ಕೂಡಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳಿದ್ದಾರೆ.

rakesh singh
ರಾಕೇಶ್ ಸಿಂಗ್
author img

By

Published : Nov 27, 2022, 8:27 AM IST

ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಮಹತ್ವದ ಕಡತವೊಂದು ಕಣ್ಮರೆಯಾಗಿದೆ ಎಂಬ ಆರೋಪ ಆಧಾರರಹಿತ ಹಾಗೂ ಸುಳ್ಳಿನಿಂದ ಕೂಡಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಡತ ಸಂಖ್ಯೆ ಯುಡಿಡಿ/439/ಎಂಎನ್ ಯು/2018 (ಪಾರ್ಟ್ 2)ರಲ್ಲಿ ಬಿಬಿಎಂಪಿ ಜಾಹೀರಾತು ನೀತಿ ಬಗ್ಗೆ ಹೆಚ್ಚುವರಿ ಸ್ಪಷ್ಟೀಕರಣ ಕೋರಿ ಸಿಎಂ ಕಚೇರಿಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆ ಸಂಬಂಧ ಹೆಚ್ಚುವರಿ ಸ್ಪಷ್ಟೀಕರಣ ಪಡೆಯಲಾಗಿದೆ. ಈ ಕಡತ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ್ದಲ್ಲ. ಬಿಬಿಎಂಪಿ ಜಾಹೀರಾತು ನೀತಿಗೆ ಸಂಬಂಧಿತ ಎಲ್ಲಾ ಕಡತಗಳು ಸಿಎಂ ಕಚೇರಿಯಲ್ಲಾಗಲಿ, ಸಚಿವರುಗಳ ಕಚೇರಿಯಲ್ಲಾಗಲಿ ನಾಪತ್ತೆಯಾಗಿಲ್ಲ. ನಗರಾಭಿವೃದ್ಧಿ ಇಲಾಖೆ ಬಳಿ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಕಡತ ನಾಪತ್ತೆ ಆರೋಪ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಾಲಯದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಂಬಂಧಿಸಿದ ಮಹತ್ವದ ಕಡತ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರಿಗೆ ನ.22ರಂದು ಪತ್ರ ಬರೆದಿದ್ದು, ಇದು ಅನುಮಾನ ಹುಟ್ಟಲು ಕಾರಣವಾಗಿತ್ತು.

ಇದನ್ನೂ ಓದಿ: ಕಡತ ನಾಪತ್ತೆ: ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಪಂ ಅಧ್ಯಕ್ಷ

ಬಿಬಿಎಂಪಿ ಜಾಹೀರಾತು ನಿಯಮಗಳ ಕುರಿತ ಕಡತವನ್ನು ಸಿಎಂ ಮಾಹಿತಿಗಾಗಿ ಕಳಿಸಲಾಗಿತ್ತು. ಆದರೆ, ಫೈಲ್ ನಮ್ಮ ಕಚೇರಿಗೆ ಹಿಂದಿರುಗಿಸಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು. 2021ರ ಡಿಸೆಂಬರ್ 7ರಂದು ಸಿಎಂ ಕಚೇರಿಗೆ ಕಡತ ರವಾನಿಸಲಾಗಿತ್ತು. ಇದರಲ್ಲಿ ಬಿಬಿಎಂಪಿ ‘ಜಾಹೀರಾತು ನೀತಿ 2019’ಕ್ಕೆ ಸಂಬಂಧಿಸಿದ ಮಾಹಿತಿಯನ್ನು ಲೆಕ್ಕಪತ್ರ ಸಮಿತಿಗೆ ಸಲ್ಲಿಕೆಯಾಗಬೇಕಿರುವುದರಿಂದ ಕಡತ ಮರಳಿಸುವಂತೆ ಕೋರಿದ್ದರು.

ಕಡತ ನಾಪತ್ತೆ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ 'ಸಿಎಂ ಕಚೇರಿಯಲ್ಲಿ ಮಹತ್ವದ ಕಡತಗಳು ನಾಪತ್ತೆಯಾಗಿರುವುದಕ್ಕೆ ಯಾವ ಕಾರಣ ಹುಡುಕುತ್ತಿದ್ದೀರಿ ಬೊಮ್ಮಾಯಿ ಅವರೇ, ಇಲಿ ಕಚ್ಚಿಕೊಂಡು ಹೋಯಿತೇ? , ಹೆಗ್ಗಣ ಹೊತ್ತುಕೊಂಡು ಹೋಯಿತೇ?, ಗಾಳಿಯಲ್ಲಿ ಹಾರಿ ಹೋಯಿತೇ?. ಉತ್ತರ ಪ್ರದೇಶದಲ್ಲಿ 500 ಕೆಜಿ ಗಾಂಜಾವನ್ನು ಇಲಿಗಳು ತಿಂದವಂತೆ! ನಿಮ್ಮದು "ಯುಪಿ ಮಾಡೆಲ್" ಅಲ್ಲವೇ, ನೀವೂ ಅದೇ ಕಾರಣ ಕೊಡುವಿರಾ?' ಎಂದು ಟೀಕಿಸಿತ್ತು.

ಇದನ್ನೂ ಓದಿ: ಕಾಂಗ್ರೆಸ್‌ ಆಡಳಿತದಲ್ಲಿನ ಭ್ರಷ್ಟಾಚಾರ ಕಡತ ತೆಗೆಯೋದಾಗಿ ಹೇಳಿರೋ ಬೊಮ್ಮಾಯಿ ಈವರೆಗೂ ಕಡ್ಲೆಪುರಿ ತಿಂತಿದ್ದರಾ.. ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.