ETV Bharat / state

ರಾಜ್ಯಸಭೆ ಚುನಾವಣೆ: ಅತೃಪ್ತ ಜೆಡಿಎಸ್ ಶಾಸಕರ ಮತಗಳ ಮೇಲೆ ಕಾಂಗ್ರೆಸ್, ಬಿಜೆಪಿ ಕಣ್ಣು ! - ಅತೃಪ್ತ ಜೆಡಿಎಸ್ ಶಾಸಕರ ಮತಗಳ ಮೇಲೆ ಕಾಂಗ್ರೆಸ್ ಕಣ್ಣು

ರಾಜ್ಯಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಹೆಚ್ಚುವರಿ ಅಭ್ಯರ್ಥಿಯನ್ನು ಗೆಲ್ಲಿಸಲು ತಂತ್ರಗಾರಿಕೆ ರೂಪಿಸತೊಡಗಿವೆ.

rajya-sabha-polls-bjp-and-congress-eye-on-jds-rebel-mlas-votes
ರಾಜ್ಯಸಭೆ ಚುನಾವಣೆ: ಅತೃಪ್ತ ಜೆಡಿಎಸ್ ಶಾಸಕರ ಮತಗಳ ಮೇಲೆ ಕಾಂಗ್ರೆಸ್, ಬಿಜೆಪಿ ಕಣ್ಣು !
author img

By

Published : Jun 3, 2022, 7:51 PM IST

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಗೆಲುವಿಗಾಗಿ ಮೂರೂ ರಾಜಕೀಯ ಪಕ್ಷಗಳು ಸಕಲ ರೀತಿಯ ಪ್ರಯತ್ನಗಳನ್ನೂ ನಡೆಸಿವೆ. ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಒತ್ತಡಕ್ಕೆ ಮಣಿದು ನಾಮಪತ್ರ ವಾಪಸ್​​ ಪಡೆಯುತ್ತಾರೆಂಬ ನಂಬಿಕೆ ಹುಸಿಯಾಗಿದ್ದು, ಚುನಾವಣೆ ಈಗ ರೋಚಕ ಘಟ್ಟ ತಲುಪಿದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಹೆಚ್ಚುವರಿ ಅಭ್ಯರ್ಥಿಯನ್ನು ಗೆಲ್ಲಿಸಲು ತಂತ್ರಗಾರಿಕೆ ರೂಪಿಸತೊಡಗಿವೆ. ಎರಡೂ ಪಕ್ಷಗಳು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅತೃಪ್ತ ಶಾಸಕರ ಮತಗಳನ್ನು ಸೆಳೆದು ತಮ್ಮ ಪಕ್ಚದ ರಾಜ್ಯಸಭೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಲೆಕ್ಕಾಚಾರ ಹಾಕತೊಡಗಿವೆ.

ಬಿಜೆಪಿಯು ಮೂವರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ಚಿತ್ರ ನಟ ಜಗ್ಗೇಶ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಲೆಹರ್ ಸಿಂಗ್ ಅಭ್ಯರ್ಥಿಗಳಾಗಿದ್ದು, ಇವರಲ್ಲಿ ಇಬ್ಬರನ್ನು (ನಿರ್ಮಲಾ ಸೀತರಾಮನ್, ನಟ ಜಗ್ಗೇಶ್ ) ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಬಿಜೆಪಿ ಗೆಲ್ಲಿಸಿಕೊಳ್ಳಲಿದೆ. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವಿಗಾಗಿ ಬಿಜೆಪಿ ಶಾಸಕರ ದ್ವಿತೀಯ ಪ್ರಾಶಸ್ತ್ಯದ ಮತಗಳ ಜೊತೆಗೆ ಜೆಡಿಎಸ್​​ನ ಅತೃಪ್ತ ಶಾಸಕರ ಮತಗಳನ್ನು ಪಡೆಯಲು ಬಿಜೆಪಿ ಗಾಳ ಬೀಸಿದೆ ಎಂದು ತಿಳಿದುಬಂದಿದೆ.

ಜೆಡಿಎಸ್ ಶಾಸಕರ ಮೇಲೆ ಕಣ್ಣು: ಜೆಡಿಎಸ್​​ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ ದೇವೇಗೌಡ, ಕೋಲಾರದ ಶ್ರೀನಿವಾಸ ಗೌಡ, ಗುಬ್ಬಿ ಶಾಸಕ ಶ್ರೀನಿವಾಸ ಸೇರಿದಂತೆ ಹಲವು ಶಾಸಕರ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ. ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲಿನ ಅತೃಪ್ತ ಶಾಸಕರು ಮತ್ತು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಲು ಆಸಕ್ತಿ ವಹಿಸಿರುವ ಕೈ ಶಾಸಕರ ಮತ ಸೆಳೆಯುವ ಸಾಧ್ಯತೆಗಳ ಬಗ್ಗೆಯೂ ಬಿಜೆಪಿ ತನ್ನ ಪ್ರಯತ್ನ ಮುಂದುವರೆಸಿದೆ ಎನ್ನಲಾಗಿದೆ.

'ಕೈ' ತಂತ್ರ: ಕಾಂಗ್ರೆಸ್ ಪಕ್ಷ ಸಹ ತನ್ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲ್ಲಿಸಿಕೊಳ್ಳಲು ಜೆಡಿಎಸ್​​ನ ಅತೃಪ್ತ ಶಾಸಕರ ಮತಗಳನ್ನು ಸೆಳೆಯಲು ಕಾರ್ಯ ತಂತ್ರ ರೂಪಿಸತೊಡಗಿದೆ ಎಂದು ಹೇಳಲಾಗಿದೆ. ಜೆಡಿಎಸ್​​ನ ಶಾಸಕರಾದ ಶ್ರೀನಿವಾಸಗೌಡ, ಶಿವಲಿಂಗೇಗೌಡ, ಗುಬ್ಬಿ ಶಾಸಕ ಶ್ರೀನಿವಾಸ, ಜಿ.ಟಿ ದೇವೇಗೌಡ ಸೇರಿದಂತೆ ಹಲವರ ಮತ ಸೆಳೆಯಲು ಸಾಧ್ಯವೇ ಎನ್ನುವ ಪ್ರಯತ್ನ ನಡೆಸಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಕಾಂಗ್ರೆಸ್, ​ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿರುವ ಹಾಗೂ ಭಾರತೀಯ ಜನತಾ ಪಕ್ಷದಲ್ಲಿ ಅತೃಪ್ತರಾಗಿರುವ ಶಾಸಕರ ಮತಗಳನ್ನು ಪಡೆಯುವ ಕುರಿತಂತೆಯೂ ರಹಸ್ಯ ಸಮಾಲೋಚನೆ ನಡೆಸುತ್ತಿದೆ ಎನ್ನಲಾಗಿದೆ.

ಕುದುರೆ ವ್ಯಾಪಾರದ ಶಂಕೆ: ನಾಲ್ಕನೇ ಸ್ಥಾನಕ್ಕೆ ಮೂರು ಪಕ್ಷಗಳು ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಅತೃಪ್ತ ಶಾಸಕರನ್ನು ಗೆಲುವಿಗಾಗಿ ಅತೃಪ್ತ ಶಾಸಕರ ಮತ ಪಡೆಯಲು ಕುದುರೆ ವ್ಯಾಪಾರಕ್ಕೆ ಸಹ ವೇದಿಕೆ ಸಜ್ಜಾಗಿದೆ ಎಂದೂ ಸಹ ಹೇಳಲಾಗಿದೆ. ಚುನಾವಣೆಗೆ ಸ್ಪರ್ಧೆ ಮಾಡಿದವರಲ್ಲಿ ಜೆಡಿಎಸ್​​ನ ಕುಪ್ಪೇಂದ್ರ ರೆಡ್ಡಿ ಅತಿ ಹೆಚ್ಚು ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಸಹ ಅಲ್ಪ-ಸ್ವಲ್ಪ ಮಟ್ಟಿಗೆ ಹಣ ವೆಚ್ಚ ಮಾಡಲು ಸಿದ್ಧರಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಹೀಗಾಗಿತ್ತು: ಈ ಹಿಂದಿನ ರಾಜ್ಯ ಸಭೆ ಚುನಾವಣೆ ವೇಳೆಯೂ ಕಾಂಗ್ರೆಸ್ ಪಕ್ಷವು ಜೆಡಿಎಸ್ ಸುಮಾರು 7 ಜನ ಅತೃಪ್ತ ಶಾಸಕರ ಮತಗಳನ್ನು ಪಡೆದು ರಾಜ್ಯಸಭೆ ಚುನಾವಣೆಯಲ್ಲಿ ತನ್ನ ಹೆಚ್ಚುವರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿತ್ತು. ಆಗಿನ ಜೆಡಿಎಸ್ ಶಾಸಕರಾದ ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಮಾಗಡಿಯ ಬಾಲಕೃಷ್ಣ, ಅಖಂಡ ಶ್ರೀನಿವಾಸ ಮೂರ್ತಿ ಸೇರಿದಂತೆ 7 ಜನ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ಕೈಕೊಟ್ಟು ಕಾಂಗ್ರೆಸ್​​ ಕೈ ಹಿಡಿದಿದ್ದರು. ಹಿಂದಿನ ಘಟನೆಯೇ ಈ ಬಾರಿ ಪುನರಾವರ್ತನೆ ಆಗಬಹುದು ಎನ್ನುವ ಲೆಕ್ಕಾಚಾರವೂ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ್ದಾಗಿದೆ.

ಇದನ್ನೂ ಓದಿ: ರಂಗೇರಿದ ರಾಜ್ಯಸಭೆ ಕದನ ಕಣ: ಆರೂ ನಾಮಪತ್ರಗಳು ಕ್ರಮಬದ್ಧ.. ಕುತೂಹಲ ಕೆರಳಿಸಿದ ಚುನಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.