ETV Bharat / state

ಸಾವಿನ ದವಡೆಯಲ್ಲಿ ಇದ್ದಾಗಲೇ ಅಶೋಕ್​ ಗಸ್ತಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಸತ್ತಿನಲ್ಲಿ ಕೇಳಲು ಸಿದ್ಧಪಡಿಸಿದ್ದ ಪ್ರಶ್ನೆಗಳಿವು!

ಕೊರೊನಾಗೆ ಪ್ರಾಣ ಪಕ್ಷಿ ಹಾರಿ ಹೋಗುವ ಮುನ್ನ ಅಶೋಕ್ ಗಸ್ತಿ‌ ಅವರು ತಮ್ಮ ಕೈಯ್ಯಾರ ಪೇಪರ್​ನಲ್ಲಿ ಬರೆದಿದ್ದ ಪ್ರಶ್ನೆಗಳು ಈಟಿವಿ ಭಾರತಗೆ ಲಭ್ಯವಾಗಿವೆ. ಕೊರೊನಾ ಚಿಕಿತ್ಸೆಯಲ್ಲಿದ್ದ ವೇಳೆ ಅಶೋಕ್ ಗಸ್ತಿ ಅವರು ತಮ್ಮ ಜಿಲ್ಲೆ ರಾಯಚೂರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಂಬಂಧ ಅಧಿವೇಶನದ ವೇಳೆ ಕೇಳಲೆಂದು ಕೆಲ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಚೇತರಿಕೆ ಕಂಡ ಬಳಿಕ ಸಂಸತ್ ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಕೇಳಬೇಕೆಂದಿದ್ದ ಪ್ರಶ್ನೆಗಳನ್ನು ಅವರು ಕಾಗದಗಳಲ್ಲಿ ಕೈಯ್ಯಾರೆ ಬರೆದುಕೊಂಡಿದ್ದರು. ಕೆಂಪು ಇಂಕಿನಲ್ಲಿ ಪ್ರಶ್ನೆಗಳನ್ನು ಬರೆದಿದ್ದ ಕಾಗದದ ತುಣುಕು ಅವರ ಕೊಠಡಿಯಲ್ಲಿ ವೈದ್ಯರಿಗೆ ದೊರೆತಿದೆ.

Ashok Gasti
ಅಶೋಕ್​ ಗಸ್ತಿ
author img

By

Published : Sep 22, 2020, 6:46 AM IST

Updated : Sep 22, 2020, 8:01 AM IST

ಬೆಂಗಳೂರು: ರಾಜ್ಯಸಭೆ ಸದಸ್ಯರಾಗಿದ್ದ ಅಶೋಕ್‌ ಗಸ್ತಿ ಮೊನ್ನೆಯಷ್ಟೇ ಕೊರೊನಾ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಆದರೆ ಕೊರೊನಾಗೆ ಬಲಿಯಾಗುತ್ತೇನೆ ಎಂಬ ಕಿಂಚಿತ್ತು ಊಹೆಯೂ ಇಲ್ಲದ ಗಸ್ತಿ ಅವರು ಆಸ್ಪತ್ರೆಯಲ್ಲಿ ಚೈತನ್ಯಭರಿತರಾಗಿ ಸಂಸತ್ ಅಧಿವೇಶನಕ್ಕೆ ತಯಾರಿ ನಡೆಸುತ್ತಿದ್ದರು. ಅದಕ್ಕಾಗಿ ಅವರು ಆಸ್ಪತ್ರೆಯಲ್ಲಿ ಮಾಡಿದ್ದ ಪೂರ್ವ ತಯಾರಿ ಎಲ್ಲರ ಹೃದಯ ಕಲಕುವಂತಿದೆ.

Ashok Gasti Prepared questions
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಸತ್ತಿನಲ್ಲಿ ಕೇಳಲು ಸಿದ್ಧಪಡಿಸಿದ್ದ ಪ್ರಶ್ನೆಗಳು

ಅಶೋಕ್ ಗಸ್ತಿ ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾಗಿ ಎರಡು ತಿಂಗಳ ಹಿಂದೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದರು. ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾದ ಅಶೋಕ್ ಗಸ್ತಿ ಪ್ರಥಮ ಬಾರಿಗೆ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವ ತವಕದಲ್ಲಿದ್ದರು. ಆದರೆ, ಅಷ್ಟರೊಳಗೆ ಕೊರೊನಾ ಮಹಾಮಾರಿ ಗಸ್ತಿಯವರ ಪ್ರಾಣವನ್ನು ಅಪೋಶನ ಗೈದಿದೆ. ಸೆಪ್ಟೆಂಬರ್ 2ರಂದು ಗಸ್ತಿ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಗಸ್ತಿ ಅವರಿಗೆ ಮುಂಬರುವ ಸಂಸತ್ ಅಧಿವೇಶನದಲ್ಲಿ ತಾನು ನಿರ್ವಹಿಸಬೇಕಾಗಿದ್ದ ಕರ್ತವ್ಯದ ಬಗ್ಗೆನೇ ಚಿಂತಾಕ್ರಾಂತರಾಗಿದ್ದರು.

ಆಸ್ಪತ್ರೆಯಲ್ಲಿ ಇದ್ದಾಗಲೇ ಪೂರ್ವತಯಾರಿ:

ಗಸ್ತಿ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಇದ್ದಾಗಲೇ ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಾವು ಕೇಳಬೇಕಾಗಿರುವ ಪ್ರಶ್ನೆಗಳನ್ನು ಕಾಗದದಲ್ಲಿ ಬರೆದು ಸಿದ್ಧಗೊಳಿಸಿದ್ದರು.

ಕೊರೊನಾಗೆ ಪ್ರಾಣ ಪಕ್ಷಿ ಹಾರಿ ಹೋಗುವ ಮುನ್ನ ಅಶೋಕ್ ಗಸ್ತಿ‌ ಅವರು ತಮ್ಮ ಕೈಯ್ಯಾರ ಪೇಪರ್​ನಲ್ಲಿ ಬರೆದಿದ್ದ ಪ್ರಶ್ನೆಗಳು ಈಟಿವಿ ಭಾರತಗೆ ಲಭ್ಯವಾಗಿವೆ. ಕೊರೊನಾ ಚಿಕಿತ್ಸೆಯಲ್ಲಿದ್ದ ವೇಳೆ ಅಶೋಕ್ ಗಸ್ತಿ ಅವರು ತಮ್ಮ ಜಿಲ್ಲೆ ರಾಯಚೂರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಂಬಂಧ ಅಧಿವೇಶನದ ವೇಳೆ ಕೇಳಲೆಂದು ಕೆಲ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಚೇತರಿಕೆ ಕಂಡ ಬಳಿಕ ಸಂಸತ್ ಅಧಿವೇಶನದ ರಾಜ್ಯಸಭೆ ಕಲಾಪದಲ್ಲಿ ಕೇಳಬೇಕೆಂದಿದ್ದ ಪ್ರಶ್ನೆಗಳನ್ನು ಅವರು ಕಾಗದಗಳಲ್ಲಿ ಕೈಯ್ಯಾರೆ ಬರೆದುಕೊಂಡಿದ್ದರು. ಕೆಂಪು ಇಂಕಿನಲ್ಲಿ ಪ್ರಶ್ನೆಗಳನ್ನು ಬರೆದಿದ್ದ ಕಾಗದದ ತುಣುಕು ಅವರ ಕೊಠಡಿಯಲ್ಲಿ ವೈದ್ಯರಿಗೆ ದೊರೆತಿದೆ.

Ashok Gasti Prepared questions
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಸತ್ತಿನಲ್ಲಿ ಕೇಳಲು ಸಿದ್ಧಪಡಿಸಿದ್ದ ಪ್ರಶ್ನೆಗಳು

ದುರಂತ ಅಂದರೆ ಈ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವ ಉತ್ಸಾಹದಲ್ಲಿದ್ದ ಅಶೋಕ್ ಗಸ್ತಿಯವರ ಜೀವವನ್ನೇ ಕೊರೊನಾ ಕಸಿದುಕೊಂಡಿದೆ. ಆ ಮೂಲಕ ಅವರು ಕೇಳಲು ಇಚ್ಛಿಸಿದ್ದ ಪ್ರಶ್ನೆಗಳು ಇದೀಗ ಕಾಗದದ ತುಣುಕಲ್ಲಿ ಬರೇ ಪ್ರಶ್ನೆಗಳಾಗಿಯೇ ಉಳಿದುಕೊಂಡಿವೆ.

ಗಸ್ತಿಯವರು ಸಿದ್ಧಪಡಿಸಿದ್ದ ಪ್ರಶ್ನೆಗಳು:

ರಾಯಚೂರಿನಲ್ಲಿ ಫಾರ್ಮ ಪಾರ್ಕ್ ಸ್ಥಾಪಿಸುವ ಯೋಜನೆಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು?

ರಾಯಚೂರು ಫಾರ್ಮ ಪಾರ್ಕ್ ಸ್ಥಾಪಿಸಲು ಉತ್ತಮ ಸ್ಥಳವಾಗಿದೆ. ಇಲ್ಲಿ ಕೃಷ್ಣ ಹಾಗೂ ತುಂಗಭದ್ರಾ ನದಿ ಹರಿಯುತ್ತದೆ. ವಿದ್ಯುತ್ ಉತ್ಪಾದನೆಯ ಕೆಪಿಸಿವೈಟಿಪಿಎಸ್ ಸಹ ಇದೆ. ರೈಲ್ವೆ ಮಾರ್ಗ ಇರುವುದರಿಂದ ದೇಶದ ಇತರೆ ಭಾಗಗಳಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಸಾಕಷ್ಟು ರಸ್ತೆ ಮಾರ್ಗಗಳು ಸಹ ಲಭ್ಯವಾಗಿವೆ. ಹೈದರಾಬಾದ್ ಹಾಗೂ ಕಲಬುರಗಿ ವಿಮಾನ ನಿಲ್ದಾಣ 200 ಕಿ.ಮೀ ಅಂತರದಲ್ಲಿವೆ. ಫಾರ್ಮ್ ಪಾರ್ಕ್​ಗೆ ಉತ್ತಮ ಭೂ ಸೌಲಭ್ಯ ಸಿಗಲಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಲು ಇದನ್ನು ರಾಯಚೂರಿನಲ್ಲಿ ಸ್ಥಾಪಿಸುವುದು ಸೂಕ್ತವಾಗಿದೆ. ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು? ಯಾವಾಗ ಯೋಜನೆಗೆ ಚಾಲನೆ ಸಿಗಲಿದೆ? ಎಂಬ ವಿವರದೊಂದಿಗೆ ಪ್ರಶ್ನಿ ತಯಾರಿಸಿಕೊಂಡಿದ್ದರು.

ಉಡಾನ್ ಯೋಜನೆಯಡಿ ರಾಯಚೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ:

1942ರಲ್ಲಿ ವಿಶ್ವಯುದ್ಧ ವೇಳೆ ರಾಯಚೂರನ್ನು ಏರ್ ಸ್ಟ್ರಿಪ್ ಆಗಿ ಬಳಸಿರುವ ಇತಿಹಾಸ ಇದೆ. 1957ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ತಮ್ಮ ವಿಮಾನವನ್ನು ತುರ್ತಾಗಿ ಇಳಿಸಿದ್ದು ರಾಯಚೂರಿನಲ್ಲಿ. ರಾಯಚೂರಿನಲ್ಲೇ ಒಂದು ರಾತ್ರಿ ಕಳೆದ ಇತಿಹಾಸವಿದೆ. ಆದರೆ, 50-60 ವರ್ಷಗಳಿಂದ ರಾಯಚೂರು ಜನರ ಬಹು ಬೇಡಿಕೆ ನನಸಾಗದೆ ಕನಸಾಗಿ ಉಳಿದುಕೊಂಡಿದೆ. ಹೀಗಾಗಿ ಉಡಾನ್ ಯೋಜನೆಯಲ್ಲಿ ಪ್ರಧಾನಿ ಮೋದಿ ಕನಸಿನ ಯೋಜನೆಯಡಿ ರಾಯಚೂರಿನಲ್ಲಿ ತಕ್ಷಣ ವಿಮಾನ ನಿಲ್ದಾಣ ಆಗಬೇಕು. ಸಾಕಷ್ಟು ಭೂಮಿ ಲಭ್ಯವಿದೆ. ಸ್ಥಳ ಪರಿಶೀಲನೆ ತಂಡ ಈಗಾಗಲೇ ಬಂದು ಹೋಗಿದೆ. ವಿಮಾನ ನಿಲ್ದಾಣ ಸ್ಥಾಪನೆಗೆ ತಾವು ಏನು ಕ್ರಮ ಕೈಗೊಂಡಿದ್ದೀರಿ? ಈ ಯೋಜನೆ ಯಾವಾಗ ಆರಂಭಿಸಲಾಗುವುದು ಎಂದು ತಿಳಿಸಿ? ಎಂಬುದು ಅವರ ಪ್ರಶ್ನೆ ಆಗಿತ್ತು.

371ಜೆ ಮೂಲಕ ಕೇಂದ್ರ ಸರ್ಕಾರ ತನ್ನ ಪಾಲಿನ ಕೆಲಸ‌ ಕಾರ್ಯಗಳು ಜಾರಿಗೆ ತಂದು ಜನರಿಗೆ ತಲುಪಿಸುವಲ್ಲಿ ಎಷ್ಟು ಸಫಲವಾಗಿದೆ? ಆ ರೀತಿಯ ಯೋಜನೆಗಳು ಯಾವುವು ಜಾರಿಗೆ ಬಂದಿವೆ. ಅದರ‌ ಕಾರ್ಯಪ್ರಗತಿ ಏನು? ಯಾವ ಯೋಜನೆಗಳು ಜಾರಿಯ ಹಂತದಲ್ಲಿವೆ? ಹೊಸ ಯೋಜನೆಗಳು ಯಾವುವು ನಮ್ಮ ಸರ್ಕಾರದ ಮುಂದಿವೆ? ಅದಕ್ಕೆ ಬೇಕಾಗುವ ಆರ್ಥಿಕ ಸೌಲಭ್ಯ ಒದಗಿಸಲಾಗಿದೆಯೇ? ಉದ್ಯೋಗ ಒದಗಿಸುವ ಯೋಜನೆಗಳು ನಮ್ಮ ಮುಂದೆ ಇದೆಯಾ? ಇದ್ದರೆ ಯಾವ ರೀತಿ ಒದಗಿಸುವಿರಿ? ಎಂಬ ಹತ್ತಾರು ಪಶ್ನೆಗಳನ್ನು ಕೇಳಬೇಕು ಎಂದಿದ್ದ ಗಸ್ತಿ ಅವರೇ ಈಗ ಗತಿಸಿದ್ದಾರೆ.

Last Updated : Sep 22, 2020, 8:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.