ETV Bharat / state

ಕಮಲ ಬಿಟ್ಟ ಕೈಹಿಡಿದ ರಾಜು ಕಾಗೆ: ಕಾಗವಾಡ ಟಿಕೆಟ್ ಸಿಗೋ ಸಾಧ್ಯತೆ - ರಾಜು ಕಾಗೆ ಕಾಂಗ್ರೆಸ್​ಗೆ ಸೇರ್ಪಡೆ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜು ಕಾಗೆಗೆ ಅಧಿಕೃತವಾಗಿ ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ ಬರಮಾಡಿಕೊಂಡರು.

ರಾಜು ಕಾಗೆ ಕಾಂಗ್ರೆಸ್​ಗೆ ಸೇರ್ಪಡೆ
author img

By

Published : Nov 14, 2019, 10:03 PM IST

ಬೆಂಗಳೂರು: ಬಿಜೆಪಿಯಿಂದ ಈಗಾಗಲೇ ಮಾನಸಿಕವಾಗಿ ದೂರವಾಗಿದ್ದ ಮಾಜಿ ಶಾಸಕ ರಾಜು ಕಾಗೆ ಇಂದು ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜು ಕಾಗೆಗೆ ಅಧಿಕೃತವಾಗಿ ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ ನೀಡಿ ಬರಮಾಡಿಕೊಂಡರು.

ರಾಜು ಕಾಗೆ ಕಾಂಗ್ರೆಸ್​ಗೆ ಸೇರ್ಪಡೆ

ಕಾಗವಾಡ ಮಾಜಿ ಶಾಸಕ ರಾಜು ಭರಮಗೌಡ ಕಾಗೆ ಉಪ ಚುನಾವಣೆಯಲ್ಲಿ ಕಾಗವಾಡನಿಂದ ಅಭ್ಯರ್ಥಿಯಾಗಿ ಕಾಂಗ್ರೆಸ್​ನಿಂದ ಸ್ಪರ್ಧಿಸಲಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀಮಂತ ಪಾಟೀಲ್ ವಿರುದ್ಧ 35 ಸಾವಿರ ಮತಗಳ ಅಂತರದ ಸೋಲನ್ನು ಕಂಡಿದ್ದರು. ಸರ್ಕಾರದ ಪತನಕ್ಕೆ ಕಾರಣವಾದ 17 ಶಾಸಕರ ರಾಜೀನಾಮೆಯನ್ನು ಶ್ರೀಮಂತ ಪಾಟೀಲ್ ರಾಜೀನಾಮೆ ಕೂಡ ಒಂದಾಗಿದ್ದು, ಅವರ ಅನರ್ಹತೆಯ ನಂತರ ಇದೀಗ ಶ್ರೀಮಂತ ಪಾಟೀಲ್ ಪಕ್ಷಾಂತರ ಮಾಡಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರನ್ನ ಹೇಗಾದರೂ ಮನ್ನಿಸಬೇಕೆಂದು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದ್ದು, ಈ ನಿಟ್ಟಿನಲ್ಲಿ ರಾಜು ಕಾಗೆ ಅವರಿಗೆ ಮಣೆ ಹಾಕಿದೆ.

ಕಳೆದ ಒಂದು ವಾರದಿಂದ ರಾಜು ಕಾಗೆ ಕಾಂಗ್ರೆಸ್ ಪಾಳೆಯದಲ್ಲಿ ಸಾಕಷ್ಟು ಕಾಣಿಸಿಕೊಂಡಿದ್ದರು. ಇಂದು ಕೊನೆಗೂ ರಾಜು ಭರಮಗೌಡ ಕಾಗೆ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ರವಿ ಬಿಜೆಪಿ ನಾಯಕರ ವಿರುದ್ಧ ಕೂಡ ಸಾಕಷ್ಟು ವಾಗ್ದಾಳಿ ನಡೆಸುವ ಮೂಲಕ ತಮ್ಮ ಅತೃಪ್ತಿಯನ್ನು ಕಳೆದ ಒಂದು ವಾರ ಹಾಕುತ್ತಲೇ ಬಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಟಿಕೆಟ್ ಪಕ್ಕಾ ಮಾಡಿಕೊಂಡ ನಂತರವೇ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.

ಹೈಕಮಾಂಡ್ ಒಪ್ಪಿದರೆ ಟಿಕೆಟ್: ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬೇಷರತ್ತಾಗಿ ರಾಜು ಕಾಗೆ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಗವಾಡದಿಂದ ಕ್ರಿಕೆಟ್ ಆಕಾಂಕ್ಷಿಯಾಗಿದ್ದು ಪಕ್ಷದ ಹೈಕಮಾಂಡ್ ಸೂಚಿಸಿದವರು ಅಭ್ಯರ್ಥಿಯಾಗಲಿದ್ದಾರೆ. ಸದ್ಯ ಪಕ್ಷದಿಂದ ಯಾವುದೇ ಭರವಸೆ ನೀಡಿಲ್ಲ. ಇದು ಕಾಂಗ್ರೆಸ್ ಪಕ್ಷ ಬಿಜೆಪಿ ಅಲ್ಲ. ನಾವು ಅನಗತ್ಯವಾಗಿ ಯಾರಿಗೂ ಭರವಸೆ ನೀಡುವುದಿಲ್ಲ ಎಂದರು.

ರಾಜು ಕಾಗೆ 4 ಸಲ ಶಾಸಕರಾಗಿ ಆಯ್ಕೆಯಾಗಿದ್ದರು. 7ನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಶ್ರೀಮಂತ ಪಾಟೀಲ್ ಅನರ್ಹರಾಗಿದ್ದಾರೆ. ಅನರ್ಹ ಅಂತ ನಾನು ಹೇಳ್ತಿಲ್ಲರೀ. ಸುಪ್ರೀಂಕೋರ್ಟ್ ಇದನ್ನ ಹೇಳಿರೋದು. ಶ್ರೀಮಂತ ಪಾಟೀಲ್ ಅನರ್ಹ ಶಾಸಕ. ಚುನಾವಣೆಗೆ ಹೋದ್ರು ಅನರ್ಹ ಅಂತಾನೆ ಹೋಗ್ತಾರೆ. ಮಹೇಶ್ ಕುಮಟಳ್ಳಿ ಕೂಡ ಅನರ್ಹರೇ. ರಮೇಶ್ ಜಾರಕಿಹೊಳಿ ಕೂಡ ಅನರ್ಹರೇ. ಅವರು ಚುನಾವಣೆಗೆ ನಿಲ್ಲೋಕು ಅನರ್ಹರೇ. ಅನರ್ಹ ಅಂತ ಹೇಳಿದ ಮೇಲೆ ಚುನಾವಣೆಗೆ ನಿಲ್ಲೋಕೆ ಆಗಲ್ಲ. ಯಾವ ಮುಖ ಹೊತ್ತು ಚುನಾವಣೆಗೆ ಹೋಗ್ತಾರೆ. ರಾಜುಕಾಗೆ ಸಭ್ಯ ವ್ಯಕ್ತಿ ಈಗ ಕಾಂಗ್ರೆಸ್​ಗೆ ಬಂದಿದ್ದಾರೆ. ಅವರು ಯಾವುದೇ ಕಂಡೀಷನ್ ಹಾಕಿ ಬಂದಿಲ್ಲ. ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಮತ್ತಷ್ಟು ಶಕ್ತಿ ಬರುತ್ತೆ. ಬೆಳಗಾವಿಯಲ್ಲಿ 18 ಕ್ಷೇತ್ರಗಳಿವೆ. ಮುಂದೆ ಹೆಚ್ಚಿನ ಸೀಟು ಗೆಲ್ಲೋಕೆ ಸಾಧ್ಯವಾಗುತ್ತದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿ ಇಂದು ಇಲ್ಲವೇ ನಾಳೆ ಅಂತಿಮವಾಗಲಿದೆ. ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ಮಾಡ್ತೇವೆ ಎಂದರು.

ಬೆಳಗಾವಿಯಲ್ಲಿ ಮತ್ತಷ್ಟು ಬಲ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜು ಕಾಗೆಯಿಂದ ಬೆಳಗಾವಿಯಲ್ಲಿ ಮತ್ತಷ್ಟು ಬಲ ಬಂದಿದೆ. ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲೂ ಅವರ ಸೇರ್ಪಡೆ ಬಲತರಲಿದೆ. ಕಾಗವಾಡದ ಪ್ರಭಾವಿ ನಾಯಕ ರಾಜುಕಾಗೆ. ಇಂದು ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿದ್ದಾರೆ ಎಂದರು.

ಅವಕಾಶ ಕೊಟ್ಟ ನಾಯಕರಿಗೆ ಧನ್ಯವಾದ: ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ರಾಜುಕಾಗೆ ಮಾತನಾಡಿ, ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದೇನೆ. ಅವಕಾಶ ಕೊಟ್ಟ ನಾಯಕರಿಗೆ ಧನ್ಯವಾದ. ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ದುಡಿಯುತ್ತೇನೆ. ಪಕ್ಷ ಕೊಡುವ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸ್ತೇನೆ. ಪಕ್ಷಕ್ಕೆ ಬರಮಾಡಿಕೊಂಡ ನಾಯಕರಿಗೆ ಕೃತಜ್ಞತೆಗಳು. ಒಬ್ಬ ಕಾಂಗ್ರೆಸ್ಸಿಗನಾಗಿ ಕೆಲಸ ಮಾಡ್ತೇನೆ. ಪಕ್ಷ ಕೊಟ್ಟ ಕೆಲಸವನ್ನ ನಿಭಾಯಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ಕೃಷ್ಣಭೈರೇಗೌಡ, ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು.

Intro:newsBody:ಕಮಲ ಬಿಟ್ಟ ರಾಜು ಕಾಗೆ ಕೈಹಿಡಿದ ಕಾಂಗ್ರೆಸ್, ಕಾಗವಾಡ ನಿಂದ ಟಿಕೆಟ್ ಸಾಧ್ಯತೆ

ಬೆಂಗಳೂರು: ಬಿಜೆಪಿಯಿಂದ ಈಗಾಗಲೇ ಮಾನಸಿಕವಾಗಿ ದೂರವಾಗಿದ್ದ ಮಾಜಿ ಶಾಸಕ ರಾಜು ಕಾಗೆ ಇಂದು ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜು ಕಾಗೆಗೆ ಅಧಿಕೃತವಾಗಿ ಪಕ್ಷದ ಬಾವುಟ ನೀಡಿ, ಶಾಲು ಹೊದೆಸಿ ನೀಡಿ ಬರಮಾಡಿಕೊಂಡರು.
ಕಾಗವಾಡ ಮಾಜಿ ಶಾಸಕ
ಕಾಗವಾಡ ಮಾಜಿ ಶಾಸಕ ರಾಜು ಭರಮಗೌಡ ಕಾಗೆ ಉಪ ಚುನಾವಣೆಯಲ್ಲಿ ಕಾಗವಾಡ ನಿಂದ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ಸ್ಪರ್ಧಿಸಲಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀಮಂತ ಪಾಟೀಲ್ ವಿರುದ್ಧ 35 ಸಾವಿರ ಮತಗಳ ಅಂತರದ ಸೋಲನ್ನು ಕಂಡಿದ್ದರು. ಸರ್ಕಾರದ ಪತನಕ್ಕೆ ಕಾರಣವಾದ 17 ಶಾಸಕರ ರಾಜೀನಾಮೆಯನ್ನು ಶ್ರೀಮಂತ ಪಾಟೀಲ್ ರಾಜೀನಾಮೆ ಕೂಡ ಒಂದಾಗಿದ್ದು, ಅವರ ಅನರ್ಹತೆಯ ನಂತರ ಇದೀಗ ಶ್ರೀಮಂತ ಪಾಟೀಲ್ ಪಕ್ಷಾಂತರ ಮಾಡಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರನ್ನ ಹೇಗಾದರೂ ಮನ್ನಿಸಬೇಕೆಂದು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದ್ದು ಈ ನಿಟ್ಟಿನಲ್ಲಿ ರಾಜು ಕಾಗೆ ಅವರಿಗೆ ಮಣೆ ಹಾಕಿದೆ.
ಕಳೆದ ಒಂದು ವಾರದಿಂದ ರಾಜು ಕಾಗೆ ಕಾಂಗ್ರೆಸ್ ಪಾಳೆಯದಲ್ಲಿ ಸಾಕಷ್ಟು ಕಾಣಿಸಿಕೊಂಡಿದ್ದರು. ಇಂದು ಕೊನೆಗೂ ರಾಜು ಭರಮಗೌಡ ಕಾಗೆ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ರವಿ ಬಿಜೆಪಿ ನಾಯಕರ ವಿರುದ್ಧ ಕೂಡ ಸಾಕಷ್ಟು ವಾಗ್ದಾಳಿ ನಡೆಸುವ ಮೂಲಕ ತಮ್ಮ ಅತೃಪ್ತಿಯನ್ನು ಕಳೆದ ಒಂದು ವಾರ ಹಾಕುತ್ತಲೇ ಬಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಟಿಕೆಟ್ ಪಕ್ಕಾ ಮಾಡಿಕೊಂಡ ನಂತರವೇ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.
ಹೈಕಮಾಂಡ್ ಒಪ್ಪಿದರೆ ಟಿಕೆಟ್
ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬೇಷರತ್ತಾಗಿ ರಾಜು ಕಾಗೆ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಗವಾಡ ದಿಂದ ಕ್ರಿಕೆಟ್ ಆಕಾಂಕ್ಷಿಯಾಗಿದ್ದು ಪಕ್ಷದ ಹೈಕಮಾಂಡ್ ಸಂಬಂಧಿಸಿದವರು ಅಭ್ಯರ್ಥಿಯಾಗಲಿದ್ದಾರೆ. ಸದ್ಯ ಪಕ್ಷದಿಂದ ಯಾವುದೇ ಭರವಸೆ ನೀಡಿಲ್ಲ. ಇದು ಕಾಂಗ್ರೆಸ್ ಪಕ್ಷ ಬಿಜೆಪಿ ಅಲ್ಲ. ನಾವು ಅನಗತ್ಯವಾಗಿ ಯಾರಿಗೂ ಭರವಸೆ ನೀಡುವುದಿಲ್ಲ ಎಂದರು.
ರಾಜು ಕಾಗೆ ನಾಲ್ಕು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಏಳನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಶ್ರೀಮಂತ ಪಾಟೀಲ್ ಅನರ್ಹರಾಗಿದ್ದಾರೆ. ಅನರ್ಹ ಅಂತ ನಾನು ಹೇಳ್ತಿಲ್ಲರೀ. ಸುಪ್ರೀಂಕೋರ್ಟ್ ಇದನ್ನ ಹೇಳಿರೋದು. ಶ್ರೀಮಂತ ಪಾಟೀಲ್ ಅನರ್ಹ ಶಾಸಕ. ಚುನಾವಣೆಗೆ ಹೋದ್ರು ಅನರ್ಹ ಅಂತಾನೆ ಹೋಗ್ತಾರೆ. ಮಹೇಶ್ ಕುಮಟಳ್ಳಿ ಕೂಡ ಅನರ್ಹರೇ. ರಮೇಶ್ ಜಾರಕಿಹೊಳಿ ಕೂಡ ಅನರ್ಹರೇ. ಅವರು ಚುನಾವಣೆಗೆ ನಿಲ್ಲೋಕು ಅನರ್ಹರೇ. ಅನರ್ಹ ಅಂತ ಹೇಳಿದ ಮೇಲ ಚುನಾವಣೆಗೆ ನಿಲ್ಲೋಕೆ ಆಗಲ್ಲ. ಯಾವ ಮುಖ ಹೊತ್ತು ಚುನಾವಣೆಗೆ ಹೋಗ್ತಾರೆ. ರಾಜುಕಾಗೆ ಸಭ್ಯ ವ್ಯಕ್ತಿ ಈಗ ಕಾಂಗ್ರೆಸ್ ಗೆ ಬಂದಿದ್ದಾರೆ. ಅವರು ಯಾವುದೇ ಕಂಡೀಷನ್ ಹಾಕಿ ಬಂದಿಲ್ಲ. ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಮತ್ತಷ್ಟು ಶಕ್ತಿ ಬರುತ್ತೆ. ಬೆಳಗಾವಿಯಲ್ಲಿ 18 ಕ್ಷೇತ್ರಗಳಿವೆ. ಮುಂದೆ ಹೆಚ್ಚಿನ ಸೀಟು ಗೆಲ್ಲೋಕೆ ಸಾಧ್ಯವಾಗುತ್ತದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿ ಇಂದು ಇಲ್ಲವೇ ನಾಳೆ ಅಂತಿಮವಾಗಲಿದೆ. ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮ ಮಾಡ್ತೇವೆ ಎಂದರು.
ಬೆಳಗಾವಿ ಭಾಗದಲ್ಲಿ ಮತ್ತಷ್ಟು ಬಲ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜು ಕಾಗೆಯಿಂದ ಬೆಳಗಾವಿಯಲ್ಲಿ ಮತ್ತಷ್ಟು ಬಲ ಬಂದಿದೆ. ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲೂ ಅವರ ಸೇರ್ಪಡೆ ಬಲತರಲಿದೆ. ಕಾಗವಾಡದ ಪ್ರಭಾವಿ ನಾಯಕ ರಾಜುಕಾಗೆ. ಇಂದು ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿದ್ದಾರೆ ಎಂದರು.
ಅವಕಾಶ ಕೊಟ್ಟ ನಾಯಕರಿಗೆ ಧನ್ಯವಾದ
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ರಾಜುಕಾಗೆ ಮಾತನಾಡಿ, ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದೇನೆ. ಅವಕಾಶ ಕೊಟ್ಟ ನಾಯಕರಿಗೆ ಧನ್ಯವಾದ. ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ದುಡಿಯುತ್ತೇನೆ. ಪಕ್ಷ ಕೊಡುವ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸ್ತೇನೆ. ಪಕ್ಷಕ್ಕೆ ಬರಮಾಡಿಕೊಂಡ ನಾಯಕರಿಗೆ ಕೃತಜ್ಞತೆಗಳು. ಒಬ್ಬ ಕಾಂಗ್ರೆಸ್ಸಿಗನಾಗಿ ಕೆಲಸ ಮಾಡ್ತೇನೆ. ಪಕ್ಷ ಕೊಟ್ಟ ಕೆಲಸವನ್ನ ನಿಭಾಯಿಸುತ್ತೇನೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ಕೃಷ್ಣಭೈರೇಗೌಡ, ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.