ETV Bharat / state

ಅಪ್ಪುಗೆ ಕರ್ನಾಟಕ ರತ್ನ ಪ್ರದಾನ ಸಮಾರಂಭದಲ್ಲಿ ರಜನೀಕಾಂತ್, ಜೂ ಎನ್​ಟಿಆರ್ ಭಾಗಿ: ಸಚಿವ ಅಶೋಕ್

ಮರಣೋತ್ತರವಾಗಿ ಪುನೀತ್ ರಾಜಕುಮಾರ್​ ಅವರಿಗೆ ಕೊಡಲಾಗುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಿರಿಯ ನಟ ರಜನಿಕಾಂತ್ ಮತ್ತು ಜೂನಿಯರ್ ಎನ್​ಟಿಆರ್ ಆಗಮಿಸಲಿದ್ದಾರೆ.

ಕರ್ನಾಟಕ ರತ್ನ
ಕರ್ನಾಟಕ ರತ್ನ
author img

By

Published : Oct 29, 2022, 3:51 PM IST

Updated : Oct 29, 2022, 4:41 PM IST

ಬೆಂಗಳೂರು: ನವೆಂಬರ್ 1 ರಂದ ವಿಧಾನಸೌಧದ ಮುಂದೆ ನಡೆಯುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಜೂ ಎನ್​​ಟಿಆರ್ ಪಾಲ್ಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ದಿವಂಗತ ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕ ಕಂಡಂತಹ ಅಪರೂಪದ ಕಲಾವಿದ. ರಾಜಕುಮಾರ್​​ಗಿಂತಲೂ ಹೆಚ್ಚು ಖ್ಯಾತಿ ಗಳಿಸಿದವರು. ಇಂದು ಅವರು ನಮ್ಮೆಲ್ಲರನ್ನು ಅಗಲಿ ಒಂದು ವರ್ಷ ಆಗಿದೆ. ಇವತ್ತು ಅವರ ಸ್ಮರಣೆ ಇದೆ, ಆ ಸ್ಮರಣೆಯಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಯಾರೂ ಪಡೆಯದಿರುವ ವ್ಯಕ್ತಿತ್ವವನ್ನು ಅವರು ಪಡೆದಿದ್ದಾರೆ. ಅವರಿಗೆ ಗೌರವಿಸಲು ಕರ್ನಾಟಕ ರತ್ನ ಪ್ರಶಸ್ತಿ ಕೊಡ್ತಿದ್ದೇವೆ. ವಿಧಾನಸೌಧದ ಮೆಟ್ಟಿಲುಗಳ ಮುಂದೆ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ ಅಶೋಕ್ ತಿಳಿಸಿದರು.

ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಜನರಿಗೆ ಪಾಸ್ ಕೊಡುವ ವ್ಯವಸ್ಥೆ ಆಗಿದೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮ ನೆನಪಲ್ಲಿ ಉಳಿಯಬೇಕು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಜನಿಕಾಂತ್ ಬರ್ತಿದ್ದಾರೆ. ರಜನಿಕಾಂತ್ ಅವರು ಕರ್ನಾಟಕದಲ್ಲಿ ಹುಟ್ಟಿದವರು. ಅದೇ ರೀತಿ ಜೂನಿಯರ್ ಎನ್ ಟಿ ಆರ್ ಅವರು ಕೂಡ ಬರ್ತಿದ್ದಾರೆ ತಿಳಿಸಿದರು.

ಸಿಎಂ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 50 ಗ್ರಾಂ ಚಿನ್ನದ ಪದಕ ಹೊಂದಿರಲಿದೆ. ಇದುವರೆಗೂ ಹಿಂದೆ 8 ಸಾಧಕರಿಗೆ ಈ ಪ್ರಶಸ್ತಿ ಕೊಟ್ಟಿದ್ದೇವೆ. ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸ್ಪೀಕರ್ ಕಾಗೇರಿ ಸೇರಿ ಹಲವರಿಗೆ ಆಹ್ವಾನ ನೀಡಿದ್ದೇವೆ ಎಂದರು.

ಸಚಿವ ಆರ್ ಅಶೊಕ್

(ಓದಿ: ಅಪ್ಪುವಿಗೆ ಪ್ರೀತಿಯ ಊಟವನ್ನು ಅರ್ಪಿಸಿ ಭಾವುಕಾರಾದ ಹುಬ್ಬಳ್ಳಿಯ ಅಭಿಮಾನಿ)

ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆ ಇರಲ್ಲ. ಸಾರ್ವಜನಿಕರಿಗೆ ಎಲ್ಲರಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಪೊಲೀಸ್ ಇಲಾಖೆ ಜೊತೆ ಮಾತನಾಡ್ತೇವೆ. ಮೊದಲು ಕಂಠೀರವ ಸ್ಟೇಡಿಯಂನಲ್ಲಿ ಮಾಡಬೇಕೆಂಬುದಿತ್ತು. ಅವರ ಕುಟುಂಬದವರು ವಿಧಾನಸೌಧದಲ್ಲಿ ಮಾಡುವಂತೆ ಸಲಹೆ ಕೊಟ್ಟರು. ಹಾಗಾಗಿ ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.

ಪುನೀತ್​ ರಾಜಕುಮಾರ್ ಅವರ ಜೀವನ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪುನೀತ್ ಅಭಿಮಾನಿಯಾಗಿ ಅವರ ಜೀವನ ಸಾಧನೆಯನ್ನು ಪಠ್ಯದಲ್ಲಿ ಸೇರಿಸಬೇಕು ಅಂತ ಹೇಳುತ್ತೇನೆ. ಆದರೆ ಈ ತೀರ್ಮಾನವನ್ನು ಮುಖ್ಯಮಂತ್ರಿಗಳು, ಮತ್ತೆ ಶಿಕ್ಷಣ ಸಚಿವರು ಮಾಡ್ತಾರೆ. ಪಠ್ಯ ಪುಸ್ತಕಕ್ಕೆ ಕೆಲವರ ಜೀವನ ಸಾಧನೆ ಸೇರಿಸಬೇಕು ಅಂದಾಗ ನೂರಾರು ವಿಘ್ನಗಳು ಬರ್ತವೆ. ಆದರೆ ಪುನೀತ್ ರಾಜಕುಮಾರ್ ಅವರಂತವರಿಗೆ ಆ ರೀತಿ ಯಾವುದೆ ಅಡ್ಡಿ ಬರೋದಿಲ್ಲ. ಹೀಗಾಗಿ ಅವರ ಜೀವನ ಸಾಧನೆಯನ್ನು ಪಠ್ಯದಲ್ಲಿ ಸೇರಿಸಬೇಕು. ಈ ವರ್ಷ ಏನು ಮಾಡೋಕೆ ಆಗಲ್ಲ, ಆದರೆ ಮುಂದಿನ ವರ್ಷ ಈ ಬಗ್ಗೆ ಸರ್ಕಾರ ಪರಿಶೀಲನೆ ಮಾಡಿ ಸೂಕ್ತ ನಿರ್ಣಯ ಮಾಡಲಿದೆ ಎಂದು ಭರವಸೆ ನೀಡಿದರು.

ವರ್ಗಾವಣೆಗೆ 70 ಲಕ್ಷ ನೀಡಬೇಕೆಂಬ ಎಂಟಿಬಿ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ, ಎಂಟಿಬಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಅವರು ಏನು ಹೇಳಿದ್ದಾರೆ ಗೊತ್ತಿಲ್ಲ. ನಮ್ಮ‌ ಸರ್ಕಾರದಲ್ಲೇ ಅಂತ ಅವರು ಹೇಳಿಲ್ವಲ್ಲಾ?. ಬೇರೆ ಸರ್ಕಾರಗಳಿದ್ದಾಗ ಆಗಿರಬಹುದಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಚಾಮರಾಜಪೇಟೆ ಗ್ರೌಂಡ್​​ನಲ್ಲಿ ಕನ್ನಡ ಧ್ವಜ ಹಾರಾಟ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಜಿ‌ ಜೊತೆ ಮೂರು ದಿನದಿಂದ ಸಂಪರ್ಕದಲ್ಲಿದ್ದೇನೆ. ರಾಷ್ಟ್ರಧ್ವಜ ಬಿಟ್ಟು ಬೇರೆ ಹಾರಿಸುವಂತಿಲ್ಲ. ಸುಪ್ರೀಂಕೋರ್ಟ್ ಇದನ್ನು ನಿರ್ದೇಶಿಸಿದೆ. ಸ್ಟೇ ಇರೋದ್ರಿಂದ ಬೇರೆಯದಕ್ಕೆ ಅವಕಾಶವಿಲ್ಲ. ಹಾಗಾಗಿ ಚರ್ಚೆ ಮಾಡಿ ತೀರ್ಮಾನಿಸಬೇಕು. ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡ್ತೇನೆ. ಕನ್ನಡ ಧ್ವಜ ಹಾರಿಸುವ ಬಗ್ಗೆ ಚಿಂತನೆಯಿದೆ ಎಂದು ಹೇಳಿದರು.

(ಓದಿ: ಪೂಜಾ ಕುಣಿತದಲ್ಲಿ ಪವರ್ ಸ್ಟಾರ್ ಫೋಟೋ.. ಅಪ್ಪುಗಾಗಿ ರುದ್ರಾಕ್ಷಿ ಹಾರ ತಂದ ಅಭಿಮಾನಿಗಳು)

Last Updated : Oct 29, 2022, 4:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.