ಕನ್ನಡ ಚಿತ್ರರಂಗದ ರಾಜರತ್ನ, ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ ಇಂದಿಗೆ ಮೂರು ತಿಂಗಳು ತುಂಬುತ್ತಿದೆ. ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಪ್ಪು ಇಹಲೋಕ ತ್ಯಜಸಿದರು. ಈಗ ರಾಜ್ ಕುಟುಂಬ ಪುನೀತ್ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದೆ.
ರಾಜ್ ಕುಟುಂಬದವರಾದ ರಾಘವೇಂದ್ರ ರಾಜ್‌ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಮಗಳು ವಂದಿತಾ, ಪುನೀತ್ ಅಕ್ಕಂದಿರಾದ ಲಕ್ಷ್ಮಿ, ಪೂರ್ಣಿಮಾ, ವಿಜಯ್ ರಾಘವೇಂದ್ರ, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಸೇರಿದಂತೆ ಇಡೀ ರಾಜ್‌ಕುಮಾರ್ ಕುಟುಂಬ, ಪುನೀತ್ ಸಮಾಧಿ ಬಳಿ ಬಂದು, ಪುನೀತ್‌ಗೆ ಇಷ್ಟವಾದ ತಿಂಡಿ, ತಿನಿಸುಗಳನ್ನ ಇಟ್ಟು ವಿಶೇಷ ಪೂಜೆ ಮಾಡಲಾಯಿತು.
ಪುನೀತ್ ರಾಜ್‍ಕುಮಾರ್ ಮಾವ ಗೋವಿಂದ ರಾಜ್ ಅಪ್ಪು ಸಮಾಧಿಗೆ ವಿಶೇಷ ಹೂವಿನ ಅಲಂಕಾರ ಮಾಡುವ ಮೂಲಕ ಪುನೀತ್‌ಗೆ ಇಷ್ಟವಾದ ತಿಂಡಿ ತಿನಿಸುಗಳನ್ನ ಇಟ್ಟು ಪೂಜೆ ಮಾಡಿದರು. ಇದೇ ಸಂದರ್ಭದಲ್ಲಿ ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ಮತ್ತೊಂದು ಸಮಾಜಮುಖಿ ಕೆಲಸಕ್ಕೆ ಮುಂದಾಗಿದೆ.
ಓದಿ: ಸಹ ನಟಿಗೆ ವಂಚನೆ ಆರೋಪ: ಸ್ಯಾಂಡಲ್ವುಡ್ ನಟ ಕಂ ನಿರ್ಮಾಪಕ ಹರ್ಷವರ್ಧನ್ ಅರೆಸ್ಟ್
ಪುನೀತ್ ರಾಜ್‌ಕುಮರ್ ಹೆಸರಲ್ಲಿ, ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಗಿಡ ಸೇರಿದಂತೆ ಹಲವು ಬಗೆಯ 500 ಗಿಡಗಳನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ವಿತರಿಸುವ ಮೂಲಕ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನ ಮಾಡಿದರು.
ಬಳಿಕ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್, ಅಪ್ಪು ಅಭಿಮಾನಿಗಳು ಭಕ್ತರಾಗ್ತಿದ್ದಾರೆ. ದಿನದಿಂದ ದಿನಕ್ಕೆ ಪುಣ್ಯಭೂಮಿಗೆ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಅಭಿಮಾನಿಗಳಿಗೆ ಗಿಡ ಕೊಟ್ಟು ನೆಡಲು ಯೋಚನೆ ಮಾಡಲಾಗಿದೆ. ಅಪ್ಪು ಹುಟ್ಟುಹಬ್ಬದ ವೇಳೆಗೆ ಒಂದು ಲಕ್ಷ ಗಿಡ ನೆಡಲು ಕೆಲಸ ಶುರುವಾಗಿದೆ.
ಅಪ್ಪಾಜಿ ಅವರು ಹೇಳಿದ ಹಾಗೆ ನಾನು ಮೊದಲು ಗಿಡ ನೆಟ್ಟು ಆ ಕೆಲಸಕ್ಕೆ ಚಾಲನೆ ಕೊಡಲಾಗಿದೆ. ಅಪ್ಪು ಅಗಲಿಕೆಯ ಮುನ್ನ ಕಾಡಿನಲ್ಲಿ ಕೆಲಸ ಮಾಡಿದ್ರು. ಕಾಡಿನ ಹಸಿರು ಅಪ್ಪುಗೆ ಬಹಳ ಇಷ್ಟ. ಹಾಗಾಗಿ, ಗಿಡ ನೀಡುವ ಕೆಲಸ ಶುರು ಮಾಡಿದ್ದಿವಿ ಅಂತಾ ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.
ಓದಿ: ಸಿಎಂ ನೇತೃತ್ವದಲ್ಲಿ ಇಂದು ಕೋವಿಡ್ ಮಹತ್ವದ ಸಭೆ; ಶಾಲೆ ಆರಂಭ ಸೇರಿ ಕೋವಿಡ್ ನಿರ್ಬಂಧಗಳ ಸಡಿಲಿಕೆ ಸಾಧ್ಯತೆ
ಮೈಸೂರಿನಲ್ಲಿ ವೇದ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಶಿವಣ್ಣ ಸಂಜೆಯೊಳಗೆ ಫ್ಯಾಮಿಲಿ ಜೊತೆ ಅಪ್ಪು ಸಮಾಧಿಗೆ ಬರುವ ಸಾಧ್ಯತೆ ಇದೆ. ಭಾರತೀಯ ಚಿತ್ರರಂಗದಲ್ಲಿ ನಿಧನರಾಗಿ ಒಂದು ವಾರಕ್ಕೆ ಮರೆಯುವುದು ಉಂಟು.
ಆದರೆ, ಪುನೀತ್ ರಾಜ್‍ಕುಮಾರ್ ವಿಚಾರದಲ್ಲಿ ಅದು ಊಲ್ಟಾ ಆಗಿದೆ. ಪುನೀತ್ ರಾಜ್‍ಕುಮಾರ್ ಅಗಲಿ ಮೂರು ತಿಂಗಳು ಆದರೂ ಈ ದೊಡ್ಮನೆ ಮಗನ ಜಪ ಮತ್ತು ಆರಾಧನೆ ಮಾತ್ರ ನಿಂತಿಲ್ಲ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಸಮಾಧಿಗೆ ಬರ್ತಾ ಇರೋದು ಒಂದು ದಾಖಲೆಯೇ ಸರಿ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ